
ಬೆಂಗಳೂರು: ಪರಮೇಶ್ವರ್ ಒಬ್ಬ ದಲಿತ ನಾಯಕರ, ಹೀಗಾಗಿ ಸೇಡಿನ ರಾಜಕಾರಣ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು.
ಬುಧವಾರ ತಮ್ಮ ಅಧಿಕೃತ ನಿವಾಸ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪರಮೇಶ್ವರ್ ಒಡೆತದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ನಾಯಕರನ್ನು ಮಾತ್ರ ಜಾರಿ ನಿರ್ದೇಶನಾಲಯವೇಕೆ ಗುರಿಯಾಗಿಸಿಕೊಂಡಿದೆ? ಎಲ್ಲಾ ಬಿಜೆಪಿ ನಾಯಕರು ಪ್ರಾಮಾಣಿಕರೇ ಎಂದು ಪ್ರಶ್ನಿಸಿದರು.
ಪರಮೇಶ್ವರ್ ದಲಿತ ನಾಯಕರು. ರಾಜ್ಯದ ಗೃಹ ಸಚಿವರು. ಅವರನ್ನು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ. ಯಡಿಯೂರಪ್ಪ ಹಾನೆಸ್ಟಾ? ವಿಜಯೇಂದ್ರ ಹಾನೆಸ್ಟಾ? ಕುಮಾರಸ್ವಾಮಿ ಹಾನೆಸ್ಟಾ? ಅವರ ಮೇಲೆ ರೇಡ್ ಯಾಕಿಲ್ಲಾ? ಕಾಂಗ್ರೆಸ್‌ನ ಹಿಂದುಳಿದ ದಲಿತ ನಾಯಕರ ಮೇಲೆ ದಾಳಿ ಆಗುತ್ತಿದೆ. ದಲಿತ ನಾಯಕರ ಗುರಿ ಮಾಡಿದ್ದಾರೆ ಎನಿಸುತ್ತಿದೆ. ಮೊದಲು ಐಟಿಯವರು ಮಾಡಿದ್ದರು, ಈಗ ಇಡಿ ಮಾಡಿದ್ದಾರೆಂದು ಹೇಳಿದರು.
ಪರಮೇಶ್ವರ್ ಪ್ರಕರಣಕ್ಕೆ ರನ್ಯಾ ರಾವ್ ಕೇಸ್ ಲಿಂಕ್ ಆರೋಪ ಬಗ್ಗೆ ಮಾತನಾಡಿ, ಅಶೋಕ್ ಗಂಭೀರವಾಗೇ ಇಲ್ಲ. ಗಂಭೀರ ಆರೋಪ ಹೇಗೆ ಮಾಡುತ್ತಾರೆ? ಅಶೋಕ್ ಅವರೇ ಇಡಿ ದಾಳಿ ಮಾಡಿಸಿರಬಹುದು ಎಂದು ತಿರುಗೇಟು ನೀಡಿದರು.
Advertisement