ಭಾಷಾ ವಿವಾದ: ಎಕ್ಸ್ ನಲ್ಲಿ ನನ್ನ ಖಾತೆ ಇಲ್ಲ ಗಾಯಕ Sonu Nigam ಸ್ಪಷ್ಟನೆ

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್ ಸುದ್ದಿಯಾದರು.
Sonu Nigam
ಸೋನು ನಿಗಮ್
Updated on

ಬೆಂಗಳೂರು: ಇತ್ತೀಚೆಗೆ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ತೀವ್ರ ಟೀಕೆಗೆ ಗುರಿಯಾಗಿದ್ದ ಗಾಯಕ ಸೋನು ನಿಗಮ್ ಅವರ ಹೆಸರಿನಲ್ಲಿ ಎಕ್ಸ್ ಖಾತೆಯೊಂದರಲ್ಲಿ ಮಾಡಿದ್ದ ಟ್ವೀಟ್ ಭಾರೀ ಸುದ್ದಿಯಾಗಿತ್ತು.

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್ ಸುದ್ದಿಯಾದರು.

ಆಗಿದ್ದೇನು?

ಮೊನ್ನೆ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಗ್ರಾಹಕರೊಬ್ಬರಲ್ಲಿ ಕನ್ನಡದಲ್ಲಿ ಸಂವಹನ ನಡೆಸಲು ನಿರಾಕರಿಸಿದ್ದಕ್ಕೆ ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಈ ವಿವಾದದ ನಂತರ ಸಂಸದ ತೇಜಸ್ವಿ ಸೂರ್ಯ ಸಾರ್ವಜನಿಕ ಸೇವೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ.

ಸಾಫ್ಟ್‌ವೇರ್ ಕಂಪನಿಗಳಲ್ಲಿ ಕನ್ನಡವನ್ನು ಸಹ ಕಡ್ಡಾಯಗೊಳಿಸಬೇಕು. ಅಮೇರಿಕನ್ ಗ್ರಾಹಕರು ಕರ್ನಾಟಕದಲ್ಲಿ ವ್ಯವಹಾರ ನಡೆಸಿದರೆ, ಅವರು ಕನ್ನಡದಲ್ಲಿಯೂ ಮಾತನಾಡಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು.

ಇದಕ್ಕೆ ಸೋನು ನಿಗಮ್ ಎಂಬ ಹೆಸರಿನ ಎಕ್ಸ್ ಹ್ಯಾಂಡಲ್, ಸರಿ, ತೇಜಸ್ವಿ ಸೂರ್ಯ ಜಿ? ಕನ್ನಡ ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡಬೇಡಿ! ಕನ್ನಡ ಚಲನಚಿತ್ರಗಳನ್ನು ದೇಶಾದ್ಯಂತ ಬಿಡುಗಡೆ ಮಾಡಬೇಡಿ! ಕನ್ನಡ ಚಲನಚಿತ್ರ ತಾರೆಯರಿಗೆ ಇದನ್ನು ಹೇಳುವ ಧೈರ್ಯ ನಿಮಗಿದೆಯೇ ತೇಜಸ್ವಿ ಸೂರ್ಯ ಅಥವಾ ನೀವು ಇನ್ನೊಬ್ಬ ಭಾಷಾ ಯೋಧರೇ? ಎಂದು ಕೇಳಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ, ಸೋನು ನಿಗಮ್ ಸಿಂಗ್ ಸಂಸದರನ್ನು ಟೀಕಿಸಿ, ಅವರನ್ನು “ರೋಗ” ಎಂದು ಟೀಕಿಸಿದ್ದರು. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವು ತೇಜಸ್ವಿ ಸೂರ್ಯ ಅವರನ್ನು ಎರಡನೇ ಬಾರಿಗೆ ಸಂಸದರನ್ನಾಗಿ ಮಾಡಿದೆ, ಆದರೆ ರಾಷ್ಟ್ರೀಯತೆಯ ಮನೋಭಾವ ಅವರಲ್ಲಿ ಬೇರೂರಿಲ್ಲ. ಭಾಷಾವಾದ, ಪ್ರಾದೇಶಿಕತೆ ಮತ್ತು ಜಾತಿವಾದದಂತಹ ಸಣ್ಣ ವಿಚಾರಗಳನ್ನು ಹೊಂದಿರುವ ಜನರು ಒಂದು ಕಾಯಿಲೆಯಂತೆ ಎಂದು ಟೀಕಿಸಿದ್ದರು.

ಅದು ಬಿಹಾರದ ತೇಜಸ್ವಿ ಆಗಿರಲಿ ಅಥವಾ ಕರ್ನಾಟಕದ ತೇಜಸ್ವಿ ಆಗಿರಲಿ, ಇಬ್ಬರೂ ಒಂದೇ ಮೂರ್ಖತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Sonu Nigam
'ಕನ್ನಡದ ಹೀರೋಗಳಿಗೆ ಹೇಳೋ ಗಟ್ಸ್ ಇದ್ಯಾ': Tejasvi Surya ವಿರುದ್ಧ Sonu Nigam Singh ಆಕ್ರೋಶ!

ಗಾಯಕ ಸೋನು ನಿಗಮ್ ಅಲ್ಲ

ಹಲವಾರು ಸುದ್ದಿ ಪೋರ್ಟಲ್‌ಗಳು ತಪ್ಪಾಗಿ ಗಾಯಕ ಸೋನು ನಿಗಮ್ ಅವರು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿರುವ ಗಾಯಕ ಸೋನು ನಿಗಮ್, “ನಾನು ಟ್ವಿಟರ್‌ನಲ್ಲಿ ಇಲ್ಲ ಎಂದು ಎಷ್ಟು ಹೇಳಲಿ ಎಂದು ಕೇಳಿದ್ದಾರೆ. ಇದರಿಂದ ಟ್ವೀಟ್ ಮಾಡಿರುವುದು ಗಾಯಕ ಸೋನು ನಿಗಮ್ ಅಲ್ಲ ಎಂದು ಸ್ಪಷ್ಟವಾಗಿದೆ.

ನಂತರ ಆ ಖಾತೆಯು ಕ್ರಿಮಿನಲ್ ವಕೀಲ ಎಂದು ಹೇಳಿಕೊಳ್ಳುವ ಸೋನು ನಿಗಮ್ ಸಿಂಗ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com