ಮಳೆ ನೀರು ಚರಂಡಿ ಯೋಜನೆ: ಬಿಬಿಎಂಪಿಗೆ ವಿಶ್ವಬ್ಯಾಂಕ್ ನಿಂದ 1,600 ಕೋಟಿ ರೂ ಸಾಲ

ಎಸ್‌ಡಬ್ಲ್ಯುಡಿಗಳ ಅತಿಕ್ರಮಣವನ್ನು ತೆಗೆದುಹಾಕುವ ಕುರಿತು ಕಂದಾಯ ಇಲಾಖೆ ಕಾರ್ಯದರ್ಶಿಯೊಂದಿಗೆ ವಿಶೇಷ ಸಭೆ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ಹೇಳಿದರು, ಇದು ನಿರಂತರ ಪ್ರಕ್ರಿಯೆಯಾಗಿದ್ದು, ಪಾಲಿಕೆ ಅದನ್ನು ಮಾಡುತ್ತಿದೆ.
A tree which fell in the recent rain blocks the pavement on St John’s Church Road, making it hazardous for pedestrian movement
ಇತ್ತೀಚಿನ ಮಳೆಗೆ ಬಿದ್ದ ಮರವೊಂದು ಸೇಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡಿತು.
Updated on

ಬೆಂಗಳೂರು: ಅಕಾಲಿಕ ಮಳೆಯ ಪ್ರವಾಹದ ನಂತರ ಶುಭಸುದ್ದಿ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶ್ವಬ್ಯಾಂಕ್ 1,600 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಅನುಮೋದಿಸಿದೆ. ಈಗ ಬಿಬಿಎಂಪಿ ಮಳೆನೀರು ಚರಂಡಿ (SWD) ಯೋಜನೆಗೆ ಸಂಬಂಧಿಸಿದ ಕೆಲಸಗಳನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.

ನಿರ್ದಿಷ್ಟ ಉದ್ದೇಶಕ್ಕಾಗಿ ಸಾಲವನ್ನು ಕೋರಲಾಗಿತ್ತು ಮತ್ತು ಅದಕ್ಕೆ ಅನುಮೋದನೆ ಸಿಕ್ಕಿದೆ. ಬೆಂಗಳೂರು ನಗರದಿಂದ ಮಳೆನೀರನ್ನು ಯಾವುದೇ ಪ್ರವಾಹವಿಲ್ಲದೆ ಹೊರತೆಗೆದು ನಗರದ ಹೊರವಲಯದಲ್ಲಿರುವ ನದಿ ಜಾಲಕ್ಕೆ ಸಂಪರ್ಕಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಎಸ್‌ಡಬ್ಲ್ಯುಡಿಗಳ ಅತಿಕ್ರಮಣವನ್ನು ತೆಗೆದುಹಾಕುವ ಕುರಿತು ಕಂದಾಯ ಇಲಾಖೆ ಕಾರ್ಯದರ್ಶಿಯೊಂದಿಗೆ ವಿಶೇಷ ಸಭೆ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ಹೇಳಿದರು, ಇದು ನಿರಂತರ ಪ್ರಕ್ರಿಯೆಯಾಗಿದ್ದು, ಪಾಲಿಕೆ ಅದನ್ನು ಮಾಡುತ್ತಿದೆ.

ಇದಲ್ಲದೆ, ಬಿಬಿಎಂಪಿ ಎಂಜಿನಿಯರ್-ಇನ್-ಚೀಫ್ ಮತ್ತು ಮಳೆನೀರು ಚರಂಡಿ ಯೋಜನೆ ಉಸ್ತುವಾರಿ ಬಿ.ಎಸ್. ಪ್ರಹಲ್ಲಾದ್, ನಗರದ ಹೊರವಲಯದಲ್ಲಿರುವ 173.9 ಕಿಲೋಮೀಟರ್ ಮಳೆನೀರು ಚರಂಡಿ ಸಂಪರ್ಕವಿಲ್ಲದೆ ಉಳಿದಿದೆ. ನಾವು ಮಳೆನೀರು ಚರಂಡಿಯನ್ನು ಕಾಂಕ್ರೀಟ್ ಮಾಡಿ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಟೆಂಡರ್ ಬಿಡ್‌ ಕರೆದು ಅದನ್ನು ಮೇಲ್ವಿಚಾರಣಾ ಸಮಿತಿ ಮುಂದೆ ಇಡಲಾಯಿತು, ಶೀಘ್ರದಲ್ಲೇ ಹಣಕಾಸಿನ ಬಿಡ್‌ಗಳನ್ನು ಕರೆದು ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಕಂದಾಯ ಇಲಾಖೆಯು ರಾಜಕಾಲುವೆಯನ್ನು ಸಮೀಕ್ಷೆ ಮಾಡಿದ ನಂತರ ಬಿಬಿಎಂಪಿಗೆ ವರದಿಯನ್ನು ಸಲ್ಲಿಸಿದೆ. ಸಮೀಕ್ಷೆದಾರರನ್ನು ನಿಯೋಜಿಸಿದ ನಂತರ, ನಗರದಾದ್ಯಂತ 416 ಮಳೆನೀರು ಚರಂಡಿಗಳ ಅತಿಕ್ರಮಣವನ್ನು ದೃಢಪಡಿಸಿದೆ ಮತ್ತು ಮಳೆನೀರು ಚರಂಡಿಗಳ ತೆರವು ಮತ್ತು ಪುನಃಸ್ಥಾಪನೆಯಂತಹ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿಗೆ ವರದಿಯನ್ನು ನೀಡಿದೆ.

A tree which fell in the recent rain blocks the pavement on St John’s Church Road, making it hazardous for pedestrian movement
ಸಿಟಿ ರೌಂಡ್ಸ್ ರದ್ದು: ಬಿಬಿಎಂಪಿ ವಾರ್ ರೂಮ್ ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ

ಕಂದಾಯ ಇಲಾಖೆಗೆ ಎರಡು ವರ್ಷಗಳ ಹಿಂದೆ 1,023 ದೂರುಗಳು ಬಂದಿದ್ದು, ಅವುಗಳಲ್ಲಿ 416 ಎಸ್ ಡಬ್ಲ್ಯುಡಿಗಳಲ್ಲಿ ಅತಿಕ್ರಮಣವನ್ನು ಜಿಲ್ಲಾಡಳಿತ ಕಂಡುಹಿಡಿದಿದೆ. ಕಂದಾಯ ಇಲಾಖೆಯ ವಿಶೇಷ ಉಪ ಆಯುಕ್ತರು 607 ಅತಿಕ್ರಮಣ ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಅದಕ್ಕಾಗಿ ಆದೇಶವನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಪುರಸಭೆಯೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಕೋರಮಂಗಲದಲ್ಲಿ ಮರದ ದೊಡ್ಡ ಕೊಂಬೆ ಬಿದ್ದು ಮೃತಪಟ್ಟ ಮಾಡಾಲ ಗಿರಿಯಪ್ಪ ಅವರ ಕುಟುಂಬ ಸದಸ್ಯರಿಗೆ ಬಿಬಿಎಂಪಿ ಅಧಿಕಾರಿಗಳು 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು. ಗಿರಿಯಪ್ಪ (48) ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರಿ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಕೊಂಬೆ ತಲೆಯ ಮೇಲೆ ಬಿದ್ದ ಪರಿಣಾಮ ಅವರು ಧರಿಸಿದ್ದ ಹೆಲ್ಮೆಟ್ ತುಂಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

A tree which fell in the recent rain blocks the pavement on St John’s Church Road, making it hazardous for pedestrian movement
Watch | ಬಿಬಿಎಂಪಿ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು: ಗೃಹ ಸಚಿವ ಡಾ. ಜಿ ಪರಮೇಶ್ವರ್

ನಗರದ 63 ಕೆರೆಗಳು ಭರ್ತಿ

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಹೇರಳವಾದ ಮಳೆಯಾಗಿದ್ದು, ಸೋಮವಾರ ಮುಂಜಾನೆ ದಾಖಲೆಯ 105.5 ಮಿಮೀ ಮಳೆಯಾಗಿದೆ, 183 ಕೆರೆಗಳಲ್ಲಿ 63 ಕೆರೆಗಳು ಭರ್ತಿಯಾಗಿವೆ. ಬಿಬಿಎಂಪಿ ವಿಶೇಷ ಆಯುಕ್ತೆ, ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣೆ, ಪ್ರೀತಿ ಗೆಹ್ಲೋಟ್ ಅವರ ಪ್ರಕಾರ, ಬಿಬಿಎಂಪಿ ಮಿತಿಯೊಳಗಿನ ಕೆರೆಗಳ ಒಟ್ಟು ಸಂಗ್ರಹ ಸಾಮರ್ಥ್ಯ 32,514 ಮಿಲಿಯನ್ ಲೀಟರ್ ಆಗಿದೆ.

ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ನೀರಿನ ಸಂಗ್ರಹವು 10,595 ಮಿಲಿಯನ್ ಲೀಟರ್‌ಗೆ ಇಳಿದಿದ್ದು, ಕೇವಲ ಮೂರು ಕೆರೆಗಳು ಮಾತ್ರ ತುಂಬಿವೆ. ನಗರದಲ್ಲಿ ಒಂದು ವಾರ ನಿರಂತರ ಮಳೆಯಾದ ನಂತರ, ಕೆರೆಗಳಲ್ಲಿ ಸುಮಾರು 26,056 ಮಿಲಿಯನ್ ಲೀಟರ್ ನೀರನ್ನು ಸಂಗ್ರಹಿಸಿವೆ. ಬಿಬಿಎಂಪಿ ಮಿತಿಯಲ್ಲಿರುವ 63 ಕೆರೆಗಳು ತುಂಬಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com