
ಉತ್ತರ ಕನ್ನಡ: ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿತ್ತು, ಆದರೆ ರಸ್ತೆ ಸರಿಯಿಲ್ಲದ ಕಾರಣ ಬಿದಿರಿನ ಬುಟ್ಟಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಲಾಗಿದೆ.
ಹೌದು, ಇತ್ತೀಚೆಗೆ ಶಿರಸಿ ತಾಲ್ಲೂಕಿನ ಶಿರಗುಣಿ ಗ್ರಾಮದಲ್ಲಿ 75 ವರ್ಷದ ಮಹಾದೇವಿ ಸುಬ್ಬರಾಯ ಹೆಗ್ಡೆ ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡರು. ಕತ್ತಲಾಗಿದ್ದ ಕಾರಣ ಅವರಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿತ್ತು.
ಆದರೆ ಭಾರೀ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗಿ ಜಾರುವಂತಾಗಿತ್ತು, ಮಹಾದೇವಿಯನ್ನು ಸ್ಥಳೀಯರು ಮಾಡಿದ ಬಿದಿರಿನ ಬುಟ್ಟಿಯಲ್ಲಿ 5 ಕಿ.ಮೀ. ಹೊತ್ತುಕೊಂಡು ಹೋಗಿ ಅಂತಿಮವಾಗಿ ಸಿರಗುಣಿ ಗ್ರಾಮದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಶಿರಸಿಯಲ್ಲಿರುವ ಆಸ್ಪತ್ರೆಗೆ ತಲುಪಬೇಕಾಯಿತು.
50 ಮನೆಗಳನ್ನು ಹೊಂದಿರುವ ಮತ್ತು 300 ಜನರಿಗೆ ನೆಲೆಯಾಗಿರುವ ಈ ಗ್ರಾಮದಲ್ಲಿ ಈ ಹಿಂದೆಯೂ ಸಹ ಇಂತಹ ಅನೇಕ ಘಟನೆಗಳು ನಡೆದಿವೆ. ರಸ್ತೆಗಳು ಮತ್ತು ನೆಟ್ ವರ್ಕ್ ಕೊರತೆಯಿಂದಾಗಿ ಗ್ರಾಮಸ್ಥರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಗ್ರಾಮವು ಮೊದಲು ಬಸ್ ಸೇವೆಯನ್ನು ಹೊಂದಿತ್ತು ಆದರೆ ಐದು ವರ್ಷಗಳ ಹಿಂದೆ ಅದನ್ನು ನಿಲ್ಲಿಸಲಾಗಿತ್ತು. ನಮ್ಮದು ಶಿರಸಿ ಮತ್ತು ಅಂಕೋಲಾದ ಗಡಿಯಲ್ಲಿರುವ ಕೊನೆಯ ಹಳ್ಳಿ. ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಇಲ್ಲದ ಕಾರಣ ಐದು ವರ್ಷಗಳ ಹಿಂದೆ ಈ ಗ್ರಾಮಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಇಲ್ಲಿ ಸಾರಿಗೆ ವ್ಯವಸ್ಥೆ ದುಃಸ್ವಪ್ನವಾಗಿದೆ ಎಂದು ಸ್ಥಳೀಯ ನಿವಾಸಿ ಭಾಗೀರಥಿ ಭಟ್ ವಿವರಿಸಿದ್ದಾರೆ. ಮಳೆಗಾಲದಲ್ಲಿ ಮತ್ತೊಂದು ಪಾಳುಬಿದ್ದ ಬಸ್ ನಿಲ್ದಾಣ ಮತ್ತು ಕೆಸರುಮಯ ರಸ್ತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಗ್ರಾಮದಲ್ಲಿ ಬಸ್ ಸೇವೆ ಪ್ರಾರಂಭವಾದ ಕೆಲವು ದಿನಗಳ ನಂತರ ಬಸ್ ಸಂಚಾರ ಧೂಳಿನಿಂದ ಕೂಡಿದ್ದರಿಂದ ಜನರು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು, ತಕ್ಷಣವೇ ಬಸ್ ಸೇವೆಯನ್ನು ನಿಲ್ಲಿಸಲಾಯಿತು ಎಂದು ಮತ್ತೊಬ್ಬ ನಿವಾಸಿ ನಾಗ್ಯ ಸಿದ್ದಿ ಮಾತನಾಡಿ ಹೇಳಿದ್ದಾರೆ. ಗ್ರಾಮಸ್ಥರು ಸ್ಥಳೀಯ ಶಾಸಕ ಭೀಮಣ್ಣ ನಾಯಕ್ ಅವರಿಗೆ ಮನವಿ ಪತ್ರ ನೀಡಿದ್ದಾರೆ, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
Advertisement