KMF ಮೇಲೆ ಕಣ್ಣು: ಬಮುಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸುರೇಶ್ ಹಿಂದೇಟು; ಆಪ್ತನಿಗೆ ಬೆಂಬಲ!

ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ಅವರ ಸಹೋದರ ಅಶೋಕ್ ಎಚ್‌ಎನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಸುರೇಶ್ ಬೆಂಬಲಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
D K Suresh
ಡಿ.ಕೆ ಸುರೇಶ್
Updated on

ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್)ದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ 14 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಇವರಲ್ಲಿ ಡಿ.ಕೆ ಸುರೇಶ್ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಿರಿಯ ಸಹೋದರ ಮತ್ತು ಬೆಂಗಳೂರು ಗ್ರಾಮೀಣ ಮಾಜಿ ಶಾಸಕ ಡಿ.ಕೆ. ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ.

ಮೂಲಗಳ ಪ್ರಕಾರ, ಸುರೇಶ್ ಕೆಎಂಎಫ್ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಅ ಹೀಗಾಗಿ ಬಮುಲ್ ಅಧ್ಯಕ್ಷ ಸ್ಥಾನಕ್ಕೆ ಆನೇಕಲ್‌ನ ಆರ್.ಕೆ ರಮೇಶ್ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ. ಬಮುಲ್‌ನ ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳ 14 ನಿರ್ದೇಶಕರ ಹುದ್ದೆಗಳಿಗೆ ಚುನಾವಣೆ ನಡೆಯಿತು.

ಅವರಲ್ಲಿ, ರಾಮನಗರದಲ್ಲಿ ಆರು ಸೇರಿದಂತೆ ಕಾಂಗ್ರೆಸ್ ಬೆಂಬಲಿತ 11 ಸದಸ್ಯರು ಆಯ್ಕೆಯಾದರು, ಉಳಿದವರು ಬಿಜೆಪಿ ಮತ್ತು ಜೆಡಿಎಸ್‌ನಿಂದ ಆಯ್ಕೆಯಾದರು. ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ಅವರ ಸಹೋದರ ಅಶೋಕ್ ಎಚ್‌ಎನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

D K Suresh
BAMUL ನಿರ್ದೇಶಕರಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಅವಿರೋಧ ಆಯ್ಕೆ!

ಅವರು ಬಮುಲ್‌ನಿಂದ ಕೆಎಂಎಫ್‌ಗೆ ನಾಮನಿರ್ದೇಶನಗೊಂಡು ಕೆಎಂಎಫ್ ಮುಖ್ಯ ಹುದ್ದೆಗೆ ಸ್ಪರ್ಧಿಸಲಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಕಟ್ಟಾ ನಿಷ್ಠಾವಂತ ಭೀಮಾ ನಾಯಕ್, ತಾವು ಕೂಡ ಆ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ

ಈಗ ಬಮೂಲ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದೆ. ನಾನು ಕನಕಪುರದಿಂದ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಜತೆ ಒಟ್ಟು 14 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಯಾರು ಅಧ್ಯಕ್ಷರಾಗಬೇಕು ಎಂದು ಮೂರು ಜಿಲ್ಲೆಯ ನಾಯಕರು ಸೇರಿ ತೀರ್ಮಾನ ಮಾಡುತ್ತಾರೆ. ಇಲ್ಲಿ ಕೆಎಂಎಫ್ ವಿಚಾರ ಚರ್ಚೆ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡು ಈ ಚುನಾವಣೆ ಮಾಡಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, "ಅದನ್ನು ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಈ ಹಿಂದೆ ಮಾಗಡಿಯ ನರಸಿಂಹಮೂರ್ತಿ ಅವರು ಅಧ್ಯಕ್ಷರಾಗಬೇಕಾದಾಗ ಹಿಂದಿನ ದಿನ ರಾತ್ರಿ ಅವರನ್ನು ನಿರ್ದೇಶಕ ಸ್ಥಾನದಿಂದ ಇಳಿಸಿದ್ದರು. ಈ ಪರಿಪಾಠ ಆರಂಭವಾಗಿದ್ದು, ಅವರ ಪಕ್ಷದಿಂದ. ಅದು ಅವರಿಗೆ ಚೆನ್ನಾಗಿ ಗೊತ್ತಿದೆ. ಜಯಮುತ್ತು ಅವರಿಗೆ ಅನ್ಯಾಯ ಆಗಿರುವುದು ಬಿಜೆಪಿ ಹಾಗೂ ಜೆಡಿಎಸ್ ನವರಿಂದಲೇ ಹೊರತು ಬೇರೆಯವರಿಂದ ಅಲ್ಲ" ಎಂದು ಕಿಡಿಕಾರಿದರು.

D K Suresh
ರಾಮನ ಹೆಸರಲ್ಲಿ ರಾಜಕೀಯ ಮಾಡಿದ್ದಾರಷ್ಟೆ; ಕುಮಾರಸ್ವಾಮಿ ಕನ್ನಡಿಗರ ₹5 ಲಕ್ಷ ಕೋಟಿ ಹಣ ತಂದರೆ ಚಿನ್ನದ ತಗಡನ್ನೇ ಹಾಕಿಸೋಣ: ಡಿ.ಕೆ ಸುರೇಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com