ಬಂಟ್ವಾಳ: ಪಿಕಪ್ ವಾಹನ ಚಾಲಕ ರಹೀಮ್ ಎಂಬಾತನ ಬರ್ಬರ ಹತ್ಯೆ

ಪಿಕಪ್ ವಾಹನ ಚಾಲಕನಾಗಿದ್ದ ರಹೀಮ್ ಎಂಬಾತನನ್ನು ಹಾಡಹಗಲೇ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಬಂಟ್ವಾಳ: ಪಿಕಪ್ ವಾಹನ ಚಾಲಕ ರಹೀಮ್ ಎಂಬಾತನ ಬರ್ಬರ ಹತ್ಯೆ
Updated on

ಬಂಟ್ವಾಳ: ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೇ ಇದೀಗ ಪಿಕಪ್ ವಾಹನ ಚಾಲಕನಾಗಿದ್ದ ರಹೀಮ್ ಎಂಬಾತನನ್ನು ಹಾಡಹಗಲೇ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ ರಹೀಮ್ ನನ್ನು ಕೊಲೆ ಮಾಡಲಾಗಿದೆ. ಇರಾಕೋಡಿ ಎಂಬಲ್ಲಿ ಮನೆಯೊಂದರ ಮುಂದೆ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ‌ಇನ್ನು ರಹೀಮ್ ಜೊತೆಗಿದ್ದ ಹನೀಫ್ ಎಂಬಾತ ಮೇಲೂ ದಾಳಿ ಮಾಡಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ಪರಿಶೀಲನೆ ನಡೆಸಿದರು.

ಬಂಟ್ವಾಳ: ಪಿಕಪ್ ವಾಹನ ಚಾಲಕ ರಹೀಮ್ ಎಂಬಾತನ ಬರ್ಬರ ಹತ್ಯೆ
ಮತ್ತೆ ಪುಡಿ ರೌಡಿಗಳ ಅಟ್ಟಹಾಸ: ಟೀ ಅಂಗಡಿ ಮೇಲೆ ದಾಳಿ; ಬಾಟಲ್ ಹೊಡೆದು ಪೊಲೀಸರ ವಿರುದ್ಧವೇ ಅವಾಚ್ಯ ನಿಂದನೆ, Video Viral

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com