ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲೂ ಜಲ ಆಯೋಗ: DCM ಡಿ.ಕೆ ಶಿವಕುಮಾರ್‌

ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆಯ ವಲಸೆಯನ್ನು ಗಣನೆಗೆ ತೆಗೆದುಕೊಂಡು, ಮುಂದಿನ 50 ವರ್ಷಗಳ ನೀರಿನ ಅವಶ್ಯಕತೆಗಳ ಕುರಿತು ಅಧ್ಯಯನ ನಡೆಸಲಿದೆ.
The book “Neerina Hejje” written by DK Shivakumar.
ನೀರಿನ ಹೆಜ್ಜೆ ಪುಸ್ತಕ
Updated on

ಬೆಂಗಳೂರು: ಅಂತರರಾಜ್ಯ ಜಲ ವಿವಾದಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದು ಸೇರಿದಂತೆ ಜಲ ಸಂಪನ್ಮೂಲ ನಿರ್ವಹಣೆಯ ವಿವಿಧ ಅಂಶಗಳ ಕುರಿತು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು ಕೇಂದ್ರ ಮಾದರಿಯಲ್ಲೇ ರಾಜ್ಯದಲ್ಲೂ ಜಲ ಆಯೋಗ ಅಸ್ತಿತ್ವಕ್ಕೆ ಬರಲಿದೆ ಎಂದು ಜಲಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀರಿನ ಲಭ್ಯತೆ, ಭವಿಷ್ಯದ ಅವಶ್ಯಕತೆಗಳು, ದಕ್ಷ ನಿರ್ವಹಣೆ ಕುರಿತು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲು ಮತ್ತು ಸರ್ಕಾರಕ್ಕೆ ಕ್ರಮಗಳನ್ನು ಸೂಚಿಸಲು ಜಲ ಸಂಪನ್ಮೂಲ, ಕೃಷಿ, ತೋಟಗಾರಿಕೆ ಮತ್ತು ಹಣಕಾಸು ಇಲಾಖೆಗಳ ಅಧಿಕಾರಿಗಳು ಮತ್ತು ಜಲಶಾಸ್ತ್ರಜ್ಞರು, ಪರಿಸರವಾದಿಗಳು, ಪ್ರಗತಿಪರ ರೈತರು ಮತ್ತು ಇತರ ತಜ್ಞರನ್ನು ಒಳಗೊಂಡ ಶಾಶ್ವತ ಆಯೋಗವನ್ನು ಹೊಂದುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರಸ್ತಾವಿತ ಆಯೋಗವು ಕುಡಿಯುವ ನೀರು, ನೀರಾವರಿ, ಕೈಗಾರಿಕೆಗಳಿಗೆ ನೀರು ಒದಗಿಸುವುದು ಮತ್ತು ಇತರ ಸೌಲಭ್ಯಗಳು ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತದೆ. ನಗರಗಳ ಬೆಳವಣಿಗೆ ಮತ್ತು ಜನಸಂಖ್ಯೆಯ ವಲಸೆಯನ್ನು ಗಣನೆಗೆ ತೆಗೆದುಕೊಂಡು, ಮುಂದಿನ 50 ವರ್ಷಗಳ ನೀರಿನ ಅವಶ್ಯಕತೆಗಳ ಕುರಿತು ಅಧ್ಯಯನ ನಡೆಸಲಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಈ ಅವಶ್ಯಕತೆಗಳನ್ನು ಪೂರೈಸಲು ಕ್ರಮಗಳನ್ನು ಸೂಚಿಸಲಿದೆ. ಇತರ ಅಂಶಗಳ ಜೊತೆಗೆ, ಆಯೋಗವು ರಾಜ್ಯ ಮತ್ತು ಇತರ ದೇಶಗಳಲ್ಲಿನ ನೀರಾವರಿ ಮಾದರಿಗಳನ್ನು ಸಹ ನೋಡುತ್ತದೆ ಮತ್ತು ಉತ್ತಮವಾದುದನ್ನು ಶಿಫಾರಸು ಮಾಡುತ್ತದೆ ಎಂದು ತಿಳಿಸಿದರು.

ಜಾಗತಿಕ ತಾಪಮಾನ ಏರಿಕೆಯ ಪರಿಣಾಮ, ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ, ಪ್ರವಾಹ ಮತ್ತು ಬರಗಾಲದ ಸಮಯದಲ್ಲಿ ನೀರಿನ ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆಗೆ ಆಯೋಗ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಜಲ ಆಯೋಗವನ್ನು ಸ್ಥಾಪಿಸುವುದು ನನ್ನ ಆಲೋಚನೆಯಾಗಿದ್ದು, ಈ ಬಗ್ಗೆ ಇನ್ನೂ ಚರ್ಚಿಸಬೇಕಾಗಿದೆ. ಆಯೋಗವನ್ನು ಸ್ಥಾಪಿಸಲು ಸರ್ಕಾರವು ರಾಜ್ಯ ಶಾಸಕಾಂಗದಲ್ಲಿ ಮಸೂದೆಯನ್ನು ಅಂಗೀಕರಿಸಬೇಕಾಗಿದೆ ಎಂದು ಹೇಳಿದರು.

ಇದೇ ವೇಳೆ ಡಿಕೆ.ಶಿವಕುಮಾರ್ ಅವರು, ಕುಡಿಯುವ ನೀರಿನ ಬಳಕೆ, ಕೃಷಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ನೀರಿನ ಬಳಕೆಯ ಬಗ್ಗೆ ಹೊಣೆಗಾರಿಕೆಯ ಅಗತ್ಯವನ್ನು ಒತ್ತಿ ಹೇಳಿದರು.

The book “Neerina Hejje” written by DK Shivakumar.
ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿ.ಕೆ ಶಿವಕುಮಾರ್

ನವೆಂಬರ್ 6 ರಂದು ಮೇಕೆದಾಟು ವಿಚಾರಣೆ

ಇದೇ ವೇಳೆ ಮೇಕೆದಾಟು ಜಲಾಶಯದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್ 6 ರಂದು ವಿಚಾರಣೆ ನಡೆಯಲಿದೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಈ ಯೋಜನೆಯು ಕರ್ನಾಟಕಕ್ಕೆ ಇಂಧನ ಉತ್ಪಾದಿಸಲು ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ ಹಂತ III) ಸೇರಿದಂತೆ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ

ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು "ನೀರಿನ ಹೆಜ್ಜೆ" ಎಂಬ ಪುಸ್ತಕವನ್ನು ಬರೆದಿದ್ದು. ಈ ಪುಸ್ಕತವನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬಿಡುಗಡೆ ಮಾಡಲಿದ್ದಾರೆ.

ಪುಸ್ಕತವು ದೇಶದಲ್ಲಿನ ಅಂತರರಾಜ್ಯ ಜಲ ವಿವಾದಗಳ ಇತಿಹಾಸ, ಸವಾಲುಗಳು ಮತ್ತು ಕರ್ನಾಟಕದ ನೀರಿನ ನಿರ್ವಹಣೆಯ ಭವಿಷ್ಯದ ಯೋಜನೆಯನ್ನು ವಿವರಿಸುತ್ತದೆ.

ಪುಸ್ತಕವು ನೀರಿನ ನಿರ್ವಹಣೆ, ಅಂತರರಾಜ್ಯ ವಿವಾದಗಳು, ನದಿಗಳ ಜೋಡಣೆಯ ವಿವಿಧ ಅಂಶಗಳ ಕುರಿತು ವ್ಯಾಪಕವಾದ ಸಂಶೋಧನೆಯನ್ನು ಆಧರಿಸಿದೆ ಇದು ರಾಜ್ಯದ ಪ್ರಮುಖ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಸಹ ಒಳಗೊಂಡಿದೆ. "ನಾನು ಏನು ಮಾಡುತ್ತಿದ್ದೇನೆಂದು ರಾಜ್ಯದ ಜನರು ತಿಳಿದುಕೊಳ್ಳಬೇಕು. ನಾನು ರಾಜಕಾರಣಿ ಮಾತ್ರವಲ್ಲ, ಕೃಷಿಕ ಕೂಡ ಹೌದು. ಪುಸ್ತಕದ ಪ್ರತಿಯನ್ನು ಶಾಸಕರು, ಅಧಿಕಾರಿಗಳು ಮತ್ತು ಜಲಸಂಪನ್ಮೂಲ ತಜ್ಞರಿಗೆ ನೀಡಲಾಗುವುದು. ಪುಸ್ತಕದಲ್ಲಿ ಯಾವುದೇ ತಪ್ಪುಗಳಿದ್ದರೆ ಬದಲಾವಣೆಗಳನ್ನು ಮಾಡಲು ಸಿದ್ಧನಿದ್ದೇನೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com