

ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರಿದಿದ್ದು, ಹುಲಿ ದಾಳಿಗೆ ರೈತನೋರ್ವ ಬಲಿಯಾಗಿದ್ದಾನೆ. ಏತನ್ಮಧ್ಯೆ ರೈತನ ಬಲಿಪಡೆದ ವ್ಯಾಘ್ರನನ್ನು ಈಗಲೇ ನರಭಕ್ಷಕ ಹುಲಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ಹಾಗೂ ತಜ್ಞರು ಹೇಳಿದ್ದಾರೆ.
ಬಂಡೀಪುರ ಹುಲಿ ಮೀಸಲು ಪ್ರದೇಶದ ನಿರ್ದೇಶಕ ಎಸ್ ಪ್ರಭಾಕರನ್ ಅವರು ಮಾತನಾಡಿ, ಹುಲಿಯು ರೈತನನ್ನು ಗಡಿ ಪ್ರದೇಶಕ್ಕೆ ಸುಮಾರು 100 ಮೀಟರ್ ದೂರದವರೆಗೆ ಎಳೆದೊಯ್ದಿದೆ. ಎಳೆತದ ಸ್ಪಷ್ಟ ಗುರುತುಗಳು ಕಂಡು ಬಂದಿವೆ, ಸುತ್ತಲೂ ರಕ್ತದ ಕಲೆಗಳಿದ್ದು, ರೈತನ ತೊಡೆಯಿಂದ ಮಾಂಸದ ತುಂಡು ಕೂಡ ಕಾಣೆಯಾಗಿದೆ. ಹುಲಿಯನ್ನು ಸೆರೆಹಿಡಿಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಹುಲಿಯ ಗುರುತನ್ನು ಪತ್ತೆ ಮಾಡಬೇಕಿದ್ದು, ಈ ಹಿಂದೆಯೂ ಯಾರನ್ನಾದರೂ ಬಲಿಪಡೆದಿತ್ತೇ ಎಂಬುದನ್ನೂ ಪತ್ತೆ ಮಾಡಬೇಕಿದೆ. ಇದೀಗ ನಾವು ಹುಲಿಯ ಚಲನವಲನಗಳನ್ನು ಪತ್ತ ಮಾಡುತ್ತಿದ್ದೇವೆ. ಪ್ರತಿ ಘಟನೆಯ ನಡುವಿನ ಅಂತರವನ್ನು ಸಹ ಲೆಕ್ಕ ಹಾಕಬೇಕಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ, ಪಿಸಿ ರೈ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) 2007 ರಲ್ಲಿ ನರಭಕ್ಷಕ ಹುಲಿ ಎಂದು ಘೋಷಿಸುವ ಮಾನದಂಡಗಳ ಕುರಿತು ಹಲವಾರು ನಿರ್ದೇಶನಗಳನ್ನು ನೀಡಿದೆ. "ಹುಲಿ/ಚಿರತೆ ಮನುಷ್ಯರನ್ನು ಹುಡುಕಲು, ಬೆನ್ನಟ್ಟಲು ಪ್ರಾರಂಭಿಸಿದರೆ, ಒಂದರ ನಂತರ, ದೇಹವನ್ನು ತಿಂದರೆ ಆ ಪ್ರಾಣಿ ನರಭಕ್ಷಕವಾಗಿ ಮಾರ್ಪಡುತ್ತದೆ. ನಂತರ ಆ ಪ್ರಾಣಿಯನ್ನು ನಿಸ್ಸಂದೇಹವಾಗಿ ನರಭಕ್ಷಕ ಎಂದು ಘೋಷಿಸಬಹುದು. ಪ್ರಾಣಿಗಳು ಮಾನವರ ಮೇಲೆ ದಾಳಿ ಮಾಡುವ ಹಲವಾರು ಸಂದರ್ಭಗಳಿವೆ. ತನ್ನ ಮರಿಗಳಿಗೆ ಆಶ್ರಯ ನೀಡುತ್ತಿರುವ ಪ್ರದೇಶವನ್ನು ಮನುಷ್ಯರು ಸಮೀಪಿಸಿದಾಗ, ಮಲಗಿರುವ ಪ್ರದೇಶವನ್ನು ಸಮೀಪಿಸಿದಾಗ, ಹುಲಿ ತನ್ನ ಮರಿಗಳೊಂದಿಗೆ ಇದ್ದರೆ, ನೈಸರ್ಗಿಕ ಬೇಟೆ ಕೊರತೆಯಾಗಿದ್ದರೆ, ಸಮೀತ ಪ್ರದೇಶವಾಗಿದ್ದರೆ ದಾಳಿ ಮಾಡಿ, ಮೃತದೇಹಲವನ್ನು ತಿನ್ನುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ವನ್ಯಜೀವಿ ಪ್ರಥಮದ ಟ್ರಸ್ಟಿ ಪ್ರವೀಣ್ ಭಾರ್ಗವ್ ಅವರು ಮಾತನಾಡಿ, ಉದ್ದೇಶಪೂರ್ವಕ ಹತ್ಯೆ ಮತ್ತು ಆಕಸ್ಮಿಕ ಹತ್ಯೆಯ ನಡುವೆ ವ್ಯತ್ಯಾಸವಿದೆ. ಪ್ರಸ್ತುತದ ಹುಲಿ ದಾಳಿಯ ಛಾಯಾಚಿತ್ರಗಳನ್ನು ನಾವು ಪರಿಶೀಲಿಸಬೇಕಿದೆ. ಪ್ರಾಣಿಯೂ ಗಾಯಗೊಂಡಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
Advertisement