ಸರ್ಕಾರಿ ಪೋರ್ಟಲ್‌ಗಳಿಗೆ ಸೈಬರ್ ಹ್ಯಾಕರ್ ಆತಂಕ: ಸುರಕ್ಷತೆಗಾಗಿ Content Management System-4 ಅಳವಡಿಕೆ

ರಾಜ್ಯವು 72 ಕ್ಕೂ ಹೆಚ್ಚು ಪ್ರಮುಖ ಇಲಾಖೆಗಳನ್ನು ಹೊಂದಿದೆ, ಪ್ರತಿ ಇಲಾಖೆಯು ಅದರ ಅಡಿಯಲ್ಲಿ ಅನೇಕ ವೆಬ್‌ಸೈಟ್‌ಗಳನ್ನು ಹೊಂದಿರುವ ಪ್ರತ್ಯೇಕ ವೆಬ್ ಪೋರ್ಟಲ್ ಹೊಂದಿದೆ.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಇಲಾಖೆ ಪೋರ್ಟಲ್‌ಗಳು Content Management System-4 ಅಳವಡಿಸಿಕೊಂಡಿದ್ದರಿಂದ ಸೈಬರ್ ಹ್ಯಾಕರ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಇಲಾಖೆ ಪೋರ್ಟಲ್ ಗಳನ್ನು ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿದೆ.

ಅಸ್ತಿತ್ವದಲ್ಲಿರುವ 1,200 ಕ್ಕೂ ಹೆಚ್ಚು ಸರ್ಕಾರಿ ಪೋರ್ಟಲ್‌ಗಳ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೇಂದ್ರ ಇ-ಆಡಳಿತ ಇಲಾಖೆ ಕೈಗೆತ್ತಿಕೊಂಡಿದೆ. ಇ-ಆಡಳಿತ ಕೇಂದ್ರದ ವೆಬ್ ಪೋರ್ಟಲ್ ವಿಭಾಗವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR ಇ-ಆಡಳಿತ) ಅಡಿಯಲ್ಲಿ ಬರುತ್ತದೆ.

ರಾಜ್ಯವು 72 ಕ್ಕೂ ಹೆಚ್ಚು ಪ್ರಮುಖ ಇಲಾಖೆಗಳನ್ನು ಹೊಂದಿದೆ, ಪ್ರತಿ ಇಲಾಖೆಯು ಅದರ ಅಡಿಯಲ್ಲಿ ಅನೇಕ ವೆಬ್‌ಸೈಟ್‌ಗಳನ್ನು ಹೊಂದಿರುವ ಪ್ರತ್ಯೇಕ ವೆಬ್ ಪೋರ್ಟಲ್ ಹೊಂದಿದೆ. ಪ್ರಸ್ತುತ, ಸುಮಾರು 600 ಪೋರ್ಟಲ್‌ಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ, ಆದರೆ ಉಳಿದವು ಅಪ್‌ಗ್ರೇಡ್ ಮಾಡುವ ವಿವಿಧ ಹಂತಗಳಲ್ಲಿವೆ. CMS v4.0 ಆವೃತ್ತಿಯ ಅಡಿಯಲ್ಲಿ ಎಲ್ಲಾ 1,200 ಪೋರ್ಟಲ್‌ಗಳನ್ನು ಒಳಗೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ಇ-ಆಡಳಿತ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ತಿತ್ವದಲ್ಲಿರುವ ಆವೃತ್ತಿಯಿಂದ ಅಪ್‌ಗ್ರೇಡ್ ಮಾಡಿದ ಆವೃತ್ತಿಗೆ ಸುಗಮ ಬದಲಾವಣೆಯಾಗುತ್ತಿದೆ. ಹೀಗಾಗಿ ವೆಬ್‌ಸೈಟ್‌ಗಳು ಮತ್ತು ಪೋರ್ಟಲ್‌ಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಆವೃತ್ತಿಯು ಬಹು ಹಂತದ ಸುರಕ್ಷತಾ ಕ್ರಮಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ವೈರಸ್ ದಾಳಿಗೆ ಕಡಿಮೆ ಪ್ರಮಾಣದಲ್ಲಿ ಒಳಗಾಗುತ್ತದೆ ಎಂದು ಮೂಲಗಳು ತಿಳಿಸಿವೆ.

representational image
BWSSB: ಬೆಂಗಳೂರು ಜಲಮಂಡಳಿ ಪೋರ್ಟಲ್ ಮೇಲಿನ ಸೈಬರ್ ದಾಳಿ ಯತ್ನ ವಿಫಲ

OTP-ಪರಿಶೀಲಿಸಿದ ವ್ಯವಸ್ಥೆಯ ಜೊತೆಗೆ, ನಾವು QR ಕೋಡ್ ಪರಿಶೀಲನೆಯನ್ನು ಸಹ ಹೊಂದಿದ್ದೇವೆ, ಇದರಿಂದಾಗಿ ಹ್ಯಾಕರ್‌ಗಳು ನಮ್ಮ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಳ್ಳುವುದು ಕಷ್ಟಕರವಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

ಹಿಂದೆ ಸರ್ಕಾರಿ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿದ ನಿದರ್ಶನಗಳಿವೆ. ಈ ವರ್ಷದ ಆರಂಭದಲ್ಲಿ, ಕರ್ನಾಟಕ ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯಿಂದ ನಿರ್ವಹಿಸಲ್ಪಡುವ ಕಾವೇರಿ 2.0 ಅಪ್ಲಿಕೇಶನ್ ಪೋರ್ಟಲ್ ಗೆ ಸೈಬರ್ ದಾಳಿಯಾಗಿತ್ತ. ಇದು ಆಸ್ತಿ ನೋಂದಣಿ, ದಾಖಲೆ ಸೇವೆಗಳು ಮತ್ತು ಎನ್ಕಂಬರೆನ್ಸ್ ಪ್ರಮಾಣಪತ್ರಗಳ (ECs) ಡೌನ್‌ಲೋಡ್‌ನಂತಹ ನಾಗರಿಕ ಸೇವೆಗಳ ಮೇಲೆ ಪರಿಣಾಮ ಬೀರಿತು. ಪ್ರತಿ ವರ್ಷ, ದೇಶಾದ್ಯಂತ ಸರಾಸರಿ 50-60 ರಾಜ್ಯ ಮತ್ತು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ನಾವು ವೆಬ್‌ಸೈಟ್‌ಗಳನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಬಯಸಿದ್ದೇವೆ ಎಂದು ಮೂಲಗಳು ತಿಳಿಸಿವೆ. ಹೊಸ ವ್ಯವಸ್ಥೆಯು ಈ ವೆಬ್‌ಸೈಟ್‌ಗಳಲ್ಲಿ ಅನೇಕ ಬದಲಾವಣೆಗಳು ಮತ್ತು ಭದ್ರತಾ ಅಂಶಗಳನ್ನು ಪರಿಚಯಿಸಿದೆ. ವೆಬ್‌ಸೈಟ್‌ಗಳು ಆಕರ್ಷಕವಾಗಿರುವುದು ಮಾತ್ರವಲ್ಲದೆ, ಬಳಕೆದಾರ ಸ್ನೇಹಿಯಾಗಿರಬೇಕು, ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಮೂಲಗಳು ತಿಳಿಸಿವೆ.

CMS-4 ಉತ್ತಮ ಆರಂಭವಾಗಿದೆಸ ಅದನ್ನು ಅನುಷ್ಠಾನಕ್ಕೆ ತರಲು ಅಪಾರ ಸಮಯ ತೆಗೆದುಕೊಳ್ಳುತ್ತದೆ. ಸುರಕ್ಷತೆಯೇ ಪ್ರಮುಖ ಅಂಶವಾಗಿರುವುದರಿಂದ ಕಾಯುವುದು ಅವಶ್ಯಕವಾಗಿದೆ ಎಂದು ಸೆಕ್ವೆರೆಟೆಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಮತ್ತು ಸೈಬರ್ ಭದ್ರತಾ ತಜ್ಞ ದೇಸಾಯಿ ತಿಳಿಸಿದ್ದಾರೆ.

ಸುರಕ್ಷತೆಗಾಗಿ ನಿರಂತರ ನವೀಕರಣ ಮತ್ತು ಪರೀಕ್ಷೆಯ ಅಗತ್ಯವಿದೆ. ಪರೀಕ್ಷೆಯು ಅಸಮರ್ಪಕವಾಗಿದ್ದರೆ ಸಮಸ್ಯೆ ಎದುರಾಗುತ್ತದೆ. ಸದ್ಯ ಕೆಲಸ ಅದು ಅರ್ಧದಷ್ಟು ಮುಗಿದಿದೆ ಇದನ್ನು ಕಾರ್ಯಗತಗೊಳಿಸುತ್ತಿರುವವರು ಹ್ಯಾಕರ್‌ಗಳಿಗೆ ಕಷ್ಟವಾಗುವಂತೆ ಬಲಿಷ್ಠಗೊಳಿಸಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com