

ಬೆಂಗಳೂರು: ರಾಜ್ಯದ ಕನಿಷ್ಠ ಶೇಕಡ 40 ರಷ್ಟು ಗ್ರಾಮ ಪಂಚಾಯಿತಿಗಳು ಪೂರ್ಣ ಪ್ರಮಾಣದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಗಳು(WCC) ಹಾಗೂ ಶಿಕ್ಷಣ ಕಾರ್ಯಪಡೆಗಳನ್ನು ಹೊಂದಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಈ ಸಮಿತಿಗಳು ಬಾಲ್ಯ ವಿವಾಹಗಳು, ಹದಿಹರೆಯದವರ ಗರ್ಭಧಾರಣೆ, ಶಾಲೆ ಬಿಡುವವರು, ಬಾಲ ಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತವೆ. ಈ ಸಮಿತಿಗಳಲ್ಲಿ ಹಲವು ಕಾರ್ಯನಿರ್ವಹಿಸದ ಕಾರಣ, ಅಂತಹ ಪ್ರಕರಣಗಳು ಗಮನಕ್ಕೆ ಬರುತ್ತಿಲ್ಲ.
ಕರ್ನಾಟಕದಲ್ಲಿ ಸುಮಾರು 6,000 ಗ್ರಾಮ ಪಂಚಾಯಿತಿಗಳಿವೆ. ಪ್ರತಿ ಪಂಚಾಯಿತಿ ಮೂರು ಅಥವಾ ನಾಲ್ಕು ಗ್ರಾಮಗಳನ್ನು ಒಳಗೊಂಡಿರುತ್ತವೆ. ಹೆಚ್ಚುತ್ತಿರುವ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮತ್ತು ಶಾಲೆ ಬಿಡುವ ಪ್ರಕರಣಗಳನ್ನು ಪರಿಹರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2019 ರಲ್ಲಿ ಈ ಸಮಿತಿಗಳನ್ನು ಸ್ಥಾಪಿಸಿತು.
ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯು ಸಾಮಾನ್ಯವಾಗಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ 13 ಸದಸ್ಯರನ್ನು ಹೊಂದಿರುತ್ತದೆ. ಸಮಿತಿಯು ಪಂಚಾಯತ್‌ನ ಇಬ್ಬರು ಮಹಿಳಾ ಸದಸ್ಯರು, ಒಬ್ಬ ಮಹಿಳಾ ಶಾಲಾ ಶಿಕ್ಷಕಿ, ಬೀಟ್ ಪೊಲೀಸ್ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, NGO ಸದಸ್ಯೆ, ಅಂಗನವಾಡಿ ಕಾರ್ಯಕರ್ತೆ, ಸ್ವಸಹಾಯ ಗುಂಪಿನ ಸದಸ್ಯೆ, ಇಬ್ಬರು ವಿದ್ಯಾರ್ಥಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಸದಸ್ಯರನ್ನು ಸಹ ಹೊಂದಿರುತ್ತದೆ.
ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು, ಪಂಚಾಯತ್ ಮಿತಿಯೊಳಗೆ ಬರುವ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸೇರಿದಂತೆ 12 ಸದಸ್ಯರನ್ನು ಒಳಗೊಂಡ ಶಿಕ್ಷಣ ಕಾರ್ಯಪಡೆಯನ್ನು 2020 ರಲ್ಲಿ ಸ್ಥಾಪಿಸಲಾಯಿತು. ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವ ಕಾರ್ಯವನ್ನು ಈ ಶಿಕ್ಷಣ ಕಾರ್ಯಪಡೆ ಮಾಡುತ್ತದೆ.
ಶೇ. 40 ರಷ್ಟು ಪಂಚಾಯತ್‌ಗಳಲ್ಲಿ ಯಾವುದೇ ಸಮಿತಿ ರಚನೆಯಾಗಿಲ್ಲ ಅಥವಾ ಸಮಿತಿಗಳನ್ನು ರಚಿಸಲಾದ ಸ್ಥಳಗಳಲ್ಲಿ ಅವು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸದಸ್ಯರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿದಿಲ್ಲ ಎಂದು ಟಿಎನ್‌ಐಇಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
ತಿಪ್ಪೇಸ್ವಾಮಿ ಅವರು ಈ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಿಗೆ ಪತ್ರ ಬರೆದು ಪರಿಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.
ಆಯುಕ್ತರು ವಿವಿಧ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಈ ಸಮಿತಿಗಳ ಕಾರ್ಯಾಚರಣೆಯನ್ನು ಸುಗಮಗೊಳಿಸುವಂತೆ ಕೇಳಿಕೊಂಡಿದ್ದಾರೆ.
Advertisement