

ಬೆಂಗಳೂರು: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ರೈಲು ಯೋಜನೆಗೆ ಈಗ ಅಧಿಕೃತವಾಗಿ ಶುರುವಾಗಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಟರ್ ಆಹ್ವಾನಿಸಿದೆ. 2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆ ಕಾರ್ಯಗತಗೊಂಡರೆ ಇದು ರಾಜ್ಯದ ಮೊದಲ ಇಂಟರ್-ಸಿಟಿ ಮೆಟ್ರೋ ಯೋಜನೆಯಾಗಲಿದೆ. ತುಮಕೂರಿನಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ. ಇನ್ನು ಟ್ರಾಫಿಕ್‌ನಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದ ಜನರಿಗೆ ಬಿಗ್ ರಿಲೀಫ್ ಸಿಗಲಿದೆ. ನಮ್ಮ ಮೆಟ್ರೋ ಯೋಜನೆಯಿಂದ ಕೈಗಾರಿಕಾ ನಗರಿ ತುಮಕೂರಿನ ಆರ್ಥಿಕತೆಗೆ ಹೊಸ ವೇಗ ಸಿಗಲಿದೆ. ಬೆಂಗಳೂರಿನಿಂದ ತುಮಕೂರಿನ ನಮ್ಮ ಮೆಟ್ರೋ ಯೋಜನೆ ಹೇಗಿರಲಿದೆ? ಎಲ್ಲೆಲ್ಲಿ ನಿಲ್ದಾಣಗಳು ಬರಲಿವೆ? ಎಂಬುದನ್ನು ನೋಡೋಣ.
ಅದಾಗಲೇ ಮಾದವರದವರೆಗೂ ನಮ್ಮ ಮೆಟ್ರೋ ಓಡಾಡುತ್ತಿದೆ. ಅಲ್ಲಿಂದ ತುಮಕೂರುವರೆಗಿನ 59.6 ಕಿಲೋಮೀಟರ್ ಹಸಿರು ಮಾರ್ಗ ವಿಸ್ತರಣೆಗೆ ವಿವರವಾದ DP ತಯಾರಿಗೆ ಟೆಂಡರ್ ಆಹ್ವಾನಿಸಿದೆ. ಅಂದಾಜು ವೆಚ್ಚ 20, 649 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಡಿಪಿಆರ್ ಸಿದ್ಧವಾದ ನಂತರ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರದ ಅನುಮೋದನೆ ಪಡೆಯಬೇಕಿದೆ. ಈ ಮಾರ್ಗದಲ್ಲಿ ಒಟ್ಟು 26 ಎಲೆವೆಟೆಡ್ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ.
ನಮ್ಮ ಮೆಟ್ರೋ ಸಂಭಾವ್ಯ ನಿಲ್ದಾಣಗಳು:
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ, ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್.
Advertisement