

ಬೆಂಗಳೂರು: ಬಜೆಟ್‌ಗೆ ಮುಂಚಿತವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿರುವ ರಾಜ್ಯ ಸರ್ಕಾರ, ಸುಮಾರು ಎರಡು ದಶಕಗಳಿಂದ ರಾಯಲ್ಟಿ ಪಾವತಿಸದ ಕ್ವಾರಿ ಮಾಲೀಕರಿಗಾಗಿ ಒಂದು ಬಾರಿ ಇತ್ಯರ್ಥ (OTS) ಯೋಜನೆ ಪರಿಚಯಿಸಲು ಸಜ್ಜಾಗಿದೆ.
ಈ ಯೋಜನೆಯಿಂದ ಸರ್ಕಾರವು ಸುಮಾರು 4,000 ಕೋಟಿ ರೂ.ಗಳನ್ನು ಆದಾಯ ನಿರೀಕ್ಷಿಸುತ್ತಿದೆ. ಹೀಗಾಗಿ ಕಾರ್ಯಗತಗೊಳಿಸಲು ನಿಯಮಗಳನ್ನು ರೂಪಿಸುತ್ತಿದೆ. 2024 ರಲ್ಲಿ, ರಾಜ್ಯ ಸಚಿವ ಸಂಪುಟವು ರಾಯಲ್ಟಿಯನ್ನು ಪ್ರತಿ ಟನ್‌ಗೆ 70 ರೂ.ಗಳಿಂದ 80 ರೂ.ಗಳಿಗೆ ಹೆಚ್ಚಿಸಿತು. ಆದಾಗ್ಯೂ, ಸರ್ಕಾರವು ಈಗ ಈ ಯೋಜನೆಯನ್ನು ಪ್ರತಿ ಟನ್‌ಗೆ 70 ರೂ.ಗಳನ್ನು ರಾಯಲ್ಟಿಯಾಗಿ ಜಾರಿಗೆ ತರಲು ಬಯಸಿದೆ.
2005 ರಿಂದ ಅನೇಕ ಕ್ವಾರಿ ಮಾಲೀಕರು ರಾಯಲ್ಟಿ ಪಾವತಿಸಿಲ್ಲ ಮತ್ತು ಪ್ರತಿ ಟನ್‌ಗೆ 70 ರೂ.ಗಳಂತೆ 4,000 ಕೋಟಿ ರೂ.ಗಳನ್ನು ವಸೂಲಿ ಮಾಡುವ ಗುರಿ ಹೊಂದಿದೆ. ಡೀಫಾಲ್ಟರ್‌ಗಳು 2005 ರಿಂದ 2023 ರವರೆಗೆ ರಾಯಲ್ಟಿ ಪಾವತಿಸಬೇಕಾಗುತ್ತದೆ.
ಕ್ವಾರಿ ಮಾಲೀಕರು ಹೊರತೆಗೆಯುವ ಖನಿಜಗಳ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಈ ಹಿಂದೆ ಯಾವುದೇ ಕಾರ್ಯವಿಧಾನವಿರಲಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ. ಕ್ವಾರಿ ಮಾಲೀಕರು ಸರ್ಕಾರ ನೀಡಿದ್ದ ಅನುಮತಿಸಿಗಿಂತ ಹೆಚ್ಚಿನ ಖನಿಜ ಹೊರತೆಗೆದಿದ್ದಾರೆ.
2005 ರಿಂದ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಹೊರತೆಗೆಯಲಾದ ಖನಿಜಗಳ ಪ್ರಮಾಣವನ್ನು ಲೆಕ್ಕಹಾಕಲಾಗುವುದು ಎಂದು ಇಲಾಖೆಯ ನಿರ್ದೇಶಕ ರಂಗಪ್ಪ ಎಸ್ ಹೇಳಿದರು. ಖನಿಜಗಳನ್ನು ಹೊರತೆಗೆಯಲಾದ ಕ್ವಾರಿಗಳ ನಿಖರವಾದ ಅಗಲ ಮತ್ತು ಆಳವನ್ನು ಚಿತ್ರಗಳಿಂದ ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು.
ಈ ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ಸಂಪುಟ ಉಪಸಮಿತಿಯು ರೂಪಿಸುತ್ತದೆ. ಇದು ಪರಂಪರೆಯ ಪಾವತಿಯಾಗಿರುವುದರಿಂದ, ಹಣ ಪಾವತಿಸಲು ಸಮಯಾವಕಾಶ ನಿಗದಿ ಮಾಡಲಾಗುತ್ತದೆ, ಒಂದು ಬಾರಿ ಪಾವತಿ ಅಥವಾ ಭಾಗಶಃ ಪಾವತಿಗೆ ಗಡುವು ನೀಡಲಾಗುವುದ ಎಂದು ಅವರು ವಿವರಿಸಿದರು.
ಸಮೀಕ್ಷೆಯ ಪ್ರಕಾರ, 2,400 ಕ್ಕೂ ಹೆಚ್ಚು ಸುಸ್ತಿದಾರರು ಇದ್ದಾರೆ. ಅವರಿಗೆ ಗುತ್ತಿಗೆ ನೀಡಿದ ಭೂಮಿಯಿಂದ ಹೆಚ್ಚುವರಿ ಖನಿಜಗಳನ್ನು ಹೊರತೆಗೆದಿದ್ದಾರೆ, ಜೊತೆಗೆ ಅವರು ಅತಿಕ್ರಮಣ ಮಾಡಿದ್ದಾರೆ ಎಂದು ಹೇಳಲಾದ ಭೂಮಿಯಿಂದ ಕೂಡ ಹೊರತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ.
2024 ರಲ್ಲಿ, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ಸಂಪುಟ ಉಪಸಮಿತಿಯು ಪ್ರತಿ ಟನ್‌ಗೆ 60 ರೂ.ಗಳನ್ನು ರಾಯಲ್ಟಿಯಾಗಿ ನಿಗದಿಪಡಿಸಿತು. ಸುಸ್ತಿದಾರರಿಂದ ಐದು ಪಟ್ಟು ಮೊತ್ತವನ್ನು ಶಿಫಾರಸು ಮಾಡಿತು. ಆದರೆ ಸಚಿವ ಸಂಪುಟವು ಪ್ರತಿ ಟನ್‌ಗೆ 80 ರೂ.ಗಳನ್ನು ಪ್ರಸ್ತಾಪಿಸಿತು. ಈಗ, ಸರ್ಕಾರವು ಯಾವುದೇ ದಂಡವಿಲ್ಲದೆ ಪ್ರತಿ ಟನ್‌ಗೆ 70 ರೂ.ಗಳನ್ನು ಮಾತ್ರ ಸಂಗ್ರಹಿಸಲು ಬಯಸುತ್ತದೆ, ಇದರಿಂದ ಸುಸ್ತಿದಾರರು ತಮ್ಮ ಬಾಕಿಗಳನ್ನು ಪಾವತಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement