

ಅಮರಾವತಿ: ಅಮೆರಿಕ ವೀಸಾ ಸಿಗದ ಕಾರಣ ಖಿನ್ನತೆಗೆ ಒಳಗಾಗಿ ಹೈದರಾಬಾದ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 38 ವರ್ಷದ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೋಹಿಣಿ ಮೃತ ವೈದ್ಯೆ. ಕುಟುಂಬ ಸದಸ್ಯರು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ನೋಡಿದ್ದಾರೆ, ಈ ವೇಳೆ ಅವರು ಮೃತಪಟ್ಟಿರುವುದು ಕಂಡುಬಂದಿದೆ,
ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.ಶುಕ್ರವಾರ ರಾತ್ರಿ ಅವರು ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಮನೆಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಬರೆಯಲಾಗಿದೆ ಮತ್ತು ವೀಸಾ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸಹ ಉಲ್ಲೇಖಿಸಲಾಗಿದೆ.
ವೈದ್ಯೆ ತಾಯಿ ಲಕ್ಷ್ಮಿ, ಮಾತನಾಡಿ ತಮ್ಮ ಮಗಳು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಹೋಗಲು ಕಾತರದಿಂದ ಕಾಯುತ್ತಿದ್ದಳು ಆದರೆ ವೀಸಾ ನಿರಾಕರಣೆಯಿಂದಾಗಿ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಿದರು.
ರೋಹಿಣಿ ಹೈದರಾಬಾದ್‌ನ ಪದ್ಮಾ ರಾವ್ ನಗರದಲ್ಲಿ ವಾಸಿಸುತ್ತಿದ್ದರು, ಏಕೆಂದರೆ ಹತ್ತಿರದಲ್ಲಿ ಗ್ರಂಥಾಲಯಗಳು ಇದ್ದವು. ಅವರು ಆಂತರಿಕ ಔಷಧದಲ್ಲಿ ಪರಿಣತಿ ಹೊಂದಲು ಬಯಸಿದ್ದರು ಎಂದು ಲಕ್ಷ್ಮಿ ಹೇಳಿದರು.
ಭಾರತದಲ್ಲಿಯೇ ಇದ್ದು ವೈದ್ಯಕೀಯ ವೃತ್ತಿ ಮಾಡುವಂತೆ ನಾನು ರೋಹಿಣಿಗೆ ಸಲಹೆ ನೀಡಿದ್ದಾಗಿ ಲಕ್ಷ್ಮಿ ಹೇಳಿದರು, ಆದರೆ ಅಮೆರಿಕದಲ್ಲಿ ದಿನಕ್ಕೆ ರೋಗಿಗಳ ಸಂಖ್ಯೆ ಸೀಮಿತವಾಗಿದೆ ಮತ್ತು ಆದಾಯ ಉತ್ತಮವಾಗಿದೆ ಎಂದು ತನ್ನ ಮಗಳು ತಿಳಿಸಿದ್ದಳು ಎಂದು ಅವರು ಹೇಳಿದರು. ರೋಹಿಣಿ ಮದುವೆಯಾಗಿರಲಿಲ್ಲ ಮತ್ತು ತನ್ನ ವೈದ್ಯಕೀಯ ವೃತ್ತಿಗೆ ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದಳು ಎಂದು ಲಕ್ಷ್ಮಿ ಹೇಳಿದರು., ಚಿಲ್ಕಲ್ಗುಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement