ಮೈಸೂರು ಬ್ರ್ಯಾಂಡ್ 'ಮ್ಯಾಂಗೋ, ಖುಷ್' ವ್ಯಾಪಾರ ಬಲುಜೋರು: ಏನಿದು? ಬೆಚ್ಚಿಬೀಳಿಸುತ್ತಿದೆ ಈ ಸುದ್ದಿ...

ಸಾಂಸ್ಕೃತಿಕ ನಗರಿ ಎಂದು ಹಣೆಪಟ್ಟಿ ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಬಗ್ಗೆ ಆಘಾತಕಾರಿ ಸಂಗತಿ ಹೊರಬಿದ್ದಿದೆ.
Representational image
ಸಾಂಕೇತಿಕ ಚಿತ್ರ
Updated on

ಮೈಸೂರು: ಸಾಂಸ್ಕೃತಿಕ ನಗರಿ ಎಂದು ಹಣೆಪಟ್ಟಿ ಹೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಬಗ್ಗೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಪೊಲೀಸರು 24/7 ಕಣ್ಗಾವಲು ಹೆಚ್ಚಿಸಿದ್ದರೂ, ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಣ ತಪ್ಪುತ್ತಿದೆ.

ನಗರದಲ್ಲಿ ಸಿಗುವ ಜನಪ್ರಿಯ ಗಾಂಜಾ ರೂಪಾಂತರಗಳಿಗೆ ಬಳಸುತ್ತಿದ್ದ 'ಮೈಸೂರು ಮ್ಯಾಂಗೋ', 'ಮೈಸೂರು ಕುಶ್' - ಸ್ಥಳೀಯ ಆಡುಭಾಷೆಗಳನ್ನು ಈಗ ಯುವ ಗ್ರಾಹಕರು ಮತ್ತು ವ್ಯಾಪಾರಿಗಳು ಬಹಿರಂಗವಾಗಿ ಬಳಸುತ್ತಿದ್ದಾರೆ.

ಮೈಸೂರನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ ಇಲ್ಲಿನ ವಾಸ್ತವ ಅಂಶ ಬೇರೆಯೇ ಆಗಿದೆ. ಆತಂಕಕಾರಿ ವಿಷಯವೆಂದರೆ ಡ್ರಗ್ಸ್ ಖರೀದಿದಾರರಲ್ಲಿ ಹೆಚ್ಚಿನವರು 18 ರಿಂದ 20 ವರ್ಷ ವಯಸ್ಸಿನ ವಿದ್ಯಾರ್ಥಿಗಳು. ಈ ಮೈಸೂರು-ಬ್ರಾಂಡೆಡ್ ಗಾಂಜಾ ಪ್ರಭೇದಗಳನ್ನು ಖರೀದಿಸಲು ರಾಮನಗರ, ಹಾಸನ ಮತ್ತು ಕೇರಳದಿಂದ ಯುವಕರು ಬರುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಅನೇಕರು ಮೈಸೂರು ನಗರದಲ್ಲಿ ಖರೀದಿಸುವಾಗ, ಸೇವಿಸುವಾಗ ಬಂಧಿಸಲಾಗಿದೆ. ಕಣ್ಗಾವಲಿನ ಸಮಯದಲ್ಲಿ ಅನೇಕರು ಸಿಕ್ಕಿಬಿದ್ದಿದ್ದಾರೆ.

ಪೊಲೀಸರು ಗಸ್ತು ತಿರುಗುತ್ತಿದ್ದಾಗ ರಾಮನಗರದ 18 ರಿಂದ 19 ವರ್ಷ ವಯಸ್ಸಿನ ಇಬ್ಬರು ಯುವಕರನ್ನು ಮತ್ತು ಹಾಸನದ 19 ವರ್ಷ ವಯಸ್ಸಿನ ಮತ್ತೊಬ್ಬ ಯುವಕನನ್ನು ನಾವು ಬಂಧಿಸಿದ್ದೇವೆ. ಅವರು ಗಾಂಜಾ ಸೇವಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ, ನಾವು ಪರೀಕ್ಷೆ ನಡೆಸಿದಾಗ ಅದು ಪಾಸಿಟಿವ್ ಬಂತು ನಂತರ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಮಂಡಿ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು, ಕಳೆದ ಒಂದು ವಾರದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ವರದಿಯಾದ ಪ್ರಕರಣಗಳನ್ನು ಅವರು ನೆನಪಿಸಿಕೊಂಡರು.

ಪೆಡ್ಲರ್‌ಗಳು ಮೈಸೂರನ್ನು ತಮ್ಮ ವಹಿವಾಟಿನ ಕೇಂದ್ರವೆಂದು ಹೆಮ್ಮೆಯಿಂದ ಬಿಂಬಿಸುತ್ತಾರೆ, ಡ್ರಗ್ಸ್ ರೂಪಾಂತರಗಳನ್ನು ಪ್ರೀಮಿಯಂ ಉತ್ಪನ್ನಗಳೆಂದು ನೋಡುವ ಯುವ ಖರೀದಿದಾರರನ್ನು ಆಕರ್ಷಿಸುತ್ತಾರೆ, ಇದು ನಗರದ ಮಾದಕವಸ್ತು ಮಾರುಕಟ್ಟೆ ಎಷ್ಟು ಅಪಾಯಕಾರಿಯಾಗಿ ವೈಭವೀಕರಿಸಲ್ಪಟ್ಟಿದೆ ಎಂಬುದರ ಸೂಚಕವಾಗಿದೆ.

Representational image
ಮೈಸೂರಿನಲ್ಲಿ ಡ್ರಗ್ಸ್ ತಯಾರಿಸುವ ಫ್ಯಾಕ್ಟರಿ ಪತ್ತೆ; ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಪೊಲೀಸರ ಹೆಚ್ಚಿದ ತಪಾಸಣೆಗಳು, ವಿಶೇಷ ಅಭಿಯಾನಗಳು ಮತ್ತು ನಿರಂತರ ಪಾದಯಾತ್ರೆಗಳ ಹೊರತಾಗಿಯೂ, ಯುವಜನತೆಯಲ್ಲಿ ಮಾದಕ ವಸ್ತುಗಳ ಬೇಡಿಕೆ ಕಡಿಮೆಯಾಗುತ್ತಿಲ್ಲ. ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಮತ್ತು ಡಿಸಿಪಿಗಳು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಪಿಎಸ್‌ಐಗಳೊಂದಿಗೆ ವೈಯಕ್ತಿಕವಾಗಿ ಬೀದಿಗಿಳಿಯುತ್ತಿದ್ದರೂ, ದೊಡ್ಡ ಜಾಲವು ವಿಶೇಷವಾಗಿ ಸ್ಥಳಗಳು ಮತ್ತು ವಿತರಣಾ ಮಾರ್ಗಗಳನ್ನು ತ್ವರಿತವಾಗಿ ಬದಲಾಯಿಸುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದೆ.

ಮೆಸೇಜಿಂಗ್ ಅಪ್ಲಿಕೇಶನ್‌ಗಳು, ಆನ್ ಲೈನ್ ವ್ಯಾಪಾರ ಜಾಲ, ಪ್ಯಾನ್ ಮತ್ತು ಟೀ ಅಂಗಡಿಗಳು ಸೇರಿದಂತೆ ವಿತರಣಾ ಕೇಂದ್ರಗಳು ವ್ಯಾಪಾರವನ್ನು ಕಾರ್ಯಾಚರಣೆಯನ್ನಾಗಿ ಮಾಡಿವೆ. ಪರಿಸ್ಥಿತಿಯು ತೋರುತ್ತಿರುವುದಕ್ಕಿಂತ ಹೆಚ್ಚು ಗಂಭೀರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಒಪ್ಪಿಕೊಂಡರು. ಮೈಸೂರು ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಕಳೆದ ಮೂರು ವರ್ಷಗಳ ದತ್ತಾಂಶವು ಬೆಳೆಯುತ್ತಿರುವ ಮಾದಕ ವಸ್ತುಗಳ ಬೇಡಿಕೆಯ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com