

ಬೆಂಗಳೂರು: ರಾಜ್ಯ ಸರ್ಕಾರ ಉದ್ಯೋಗ ಮತ್ತು ಮೀಸಲಾತಿಯಲ್ಲಿ ಹೊರಗುತ್ತಿಗೆ ಮೂಲಕ ಆಗುತ್ತಿರುವ ಅನ್ಯಾಯ ಸರಿಪಡಿಸಲು ಬದ್ಧವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಮ ಎಚ್.ಕೆ. ಪಾಟೀಲ್ ಅವರು ಬುಧವಾರ ಹೇಳಿದರು.
ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿವಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ, ಸಂವಿಧಾನ ಸೈನಿಕರ ಸಮಾವೇಶ ಉದ್ಘಾಟಿಸಿ ಸಚಿವರುಮಾತನಾಡಿದರು.
ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹತೆ ಮತ್ತು ಮೀಸಲು ಮಾನದಂಡಗಳನ್ನು ನಿರ್ಲಕ್ಷಿಸಿ ಹೊರಗುತ್ತಿಗೆ ಮೂಲಕನೇಮಕಮಾಡುವ ಪದ್ಧತಿ ಸರಿಯಲ್ಲ, ದಶಕಗಳಿಂದ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ಇಂತಹ ಅಪಚಾರ ನಡೆಯುತ್ತಿದ್ದು, ಶೀಘ್ರವೇ ಇದನ್ನು ಕೊನೆಗಾಣಿಸಲು ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇರುವ ಭಾರತದ ಸಂವಿಧಾನದ 4 ನೇ ದ್ವಿಭಾಷಾ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದರು.
Advertisement