ಪೊಲೀಸ್ ನೇಮಕಾತಿ: ವಯೋಮಿತಿ ಶಾಶ್ವತ ಸಡಿಲಿಕೆಗೆ ಚಿಂತನೆ; ಗೃಹ ಸಚಿವ ಜಿ ಪರಮೇಶ್ವರ

ವಯೋಮಿತಿ ಸಡಿಲಿಕೆ ಕುರಿತು ನಾವು ಇತರ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲಿ 27, 30 ಮತ್ತು 33 ವರ್ಷಗಳನ್ನು ಗರಿಷ್ಠ ವಯೋಮಿತಿಯಾಗಿ ನಿಗದಿಪಡಿಸಿವೆ. ನಾವು ಅವರ ನಿಯಮಗಳನ್ನು ಅಧ್ಯಯನ ಮಾಡುತ್ತೇವೆ.
Home Minister G Parameshwara
ಗೃಹ ಸಚಿವ ಡಾ. ಜಿ ಪರಮೇಶ್ವರ
Updated on

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್‌ಗಳು, ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐ) ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳ (ಪಿಐ) ನೇಮಕಾತಿಗೆ ಮೂರು ಸ್ಲ್ಯಾಬ್‌ಗಳಲ್ಲಿ ಪ್ರತ್ಯೇಕ ಮತ್ತು ಶಾಶ್ವತ ವಯೋಮಿತಿ ಸಡಿಲಿಕೆಗೆ ಗೃಹ ಇಲಾಖೆಯು ಒಂದು ವಾರದೊಳಗೆ ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರ ವಯೋಮಿತಿ ಒಂದು ಬಾರಿಗೆ ಅನ್ವಯ ಆಗುವಂತೆ ಎಲ್ಲ ಇಲಾಖೆಗಳಲ್ಲಿ ನೇಮಕಾತಿಗಾಗಿ 2027 ರವರೆಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಘೋಷಿಸಿದ್ದಾರೆ. ಆದರೆ, ಗೃಹ ಇಲಾಖೆಯಲ್ಲಿ, ನಾವು ವಯೋಮಿತಿಯನ್ನು ಶಾಶ್ವತವಾಗಿ ಸಡಿಲಿಸುತ್ತೇವೆ ಎಂದರು.

ವಯೋಮಿತಿ ಸಡಿಲಿಕೆ ಕುರಿತು ನಾವು ಇತರ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲಿ 27, 30 ಮತ್ತು 33 ವರ್ಷಗಳನ್ನು ಗರಿಷ್ಠ ವಯೋಮಿತಿಯಾಗಿ ನಿಗದಿಪಡಿಸಿವೆ. ನಾವು ಅವರ ನಿಯಮಗಳನ್ನು ಅಧ್ಯಯನ ಮಾಡುತ್ತೇವೆ ಮತ್ತು ನಮ್ಮದೇ ಆದ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸುತ್ತೇವೆ' ಎಂದು ಅವರು ಹೇಳಿದರು.

ಈಮಧ್ಯೆ, ಕೇಂದ್ರವು 2026ರಲ್ಲಿ ಜಾತಿ ಗಣತಿ ಸೇರಿದಂತೆ ಜನಗಣತಿಯನ್ನು ನಡೆಸುವ ಸಾಧ್ಯತೆಯಿರುವುದರಿಂದ, ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗೊಂದಲ ಸೃಷ್ಟಿಸಬೇಡಿ ಎಂದು ಅವರು ವಿರೋಧ ಪಕ್ಷಗಳಿಗೆ, ವಿಶೇಷವಾಗಿ ಬಿಜೆಪಿಗೆ ಮನವಿ ಮಾಡಿದರು.

Home Minister G Parameshwara
Dharmasthala Case: ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ SITಗೆ ನಿರ್ದೇಶನ: ಸಚಿವ ಜಿ ಪರಮೇಶ್ವರ

'ಕೇಂದ್ರದ ಜನಗಣತಿ ಈಗಾಗಲೇ ವಿಳಂಬವಾಗಿದೆ. ಆದರೆ, ರಾಜ್ಯವು ಅದನ್ನು ಮಾಡುತ್ತಿದೆ. ನಡೆಯುತ್ತಿರುವ ಸಮೀಕ್ಷೆಯು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಒದಗಿಸುವುದರಿಂದ ಯಾವುದೇ ದುರುಪಯೋಗವಾಗುವುದಿಲ್ಲ' ಎಂದು ಅವರು ಹೇಳಿದರು.

ಸಮೀಕ್ಷೆಯು ವೇಗ ಪಡೆದುಕೊಂಡಿರುವುದರಿಂದ, ಅಕ್ಟೋಬರ್ 7 ರ ನಿಗದಿತ ಸಮಯದೊಳಗೆ ನಾವು ಸಮೀಕ್ಷೆಯನ್ನು ಪೂರ್ಣಗೊಳಿಸುತ್ತೇವೆ. ನನ್ನ ಜಿಲ್ಲೆಯಲ್ಲಿ (ತುಮಕೂರು), ಒಟ್ಟು 7.5 ಲಕ್ಷ ಕುಟುಂಬಗಳಲ್ಲಿ 2 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ' ಎಂದರು.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಯಾವುದೇ ಪ್ರಸ್ತಾಪದ ಬಗ್ಗೆ ತನಗೆ ತಿಳಿದಿಲ್ಲ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com