
ಚಿಕ್ಕಬಳ್ಳಾಪುರ: ಬೇರೆ ಮಹಿಳೆಯೊಂದಿಗೆ ಪತಿ ಅಕ್ರಮ ಸಂಬಂಧ ಹೊಂದಿದ್ದರಿಂದ ಬೇಸತ್ತ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ತವರು ಮನೆಯಲ್ಲಿ ಮನೆಯ ಹೊರಭಾಗದ ಶೌಚಾಲಯದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಂದಹಾಗೆ, ಕಳೆದ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಹಳ್ಳಿಯ ನಿವಾಸಿ ಚಂದ್ರಶೇಖರ್ ಜೊತೆ ವಿವಾಹವಾಗಿತ್ತು. ಆದರೆ. ಆದರೆ ದಿನೇ ದಿನೇ ಇಬ್ಬರ ಮಧ್ಯೆ ಹೊಂದಾಣಿಕೆ ಕಡಿಮೆಯಾಗಿದ್ದು, ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ನವ ವಿವಾಹಿತೆ ಫೇಸ್ ಬುಕ್ ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇರೆ ಯುವತಿ ಜೊತೆ ಗಂಡನಿಗೆ ಅಕ್ರಮ ಸಂಬಂಧವಿದ್ದು, ಮದುವೆ ಬಳಿಕ ಈ ವಿಷಯ ನನಗೆ ತಿಳಿಯಿತು. ಇಬ್ಬರೂ ಯಾವಾಗಲೂ ಫೋನ್, ಚಾಟಿಂಗ್ ಮಾಡುತ್ತಿರುತ್ತಾರೆ. ಇದನ್ನು ಪ್ರಶ್ನಿಸಿದರೆ ಗಂಡ ಕೋಪಮಾಡಿಕೊಂಡು ಜಗಳವಾಡುತ್ತಾರೆ. ಅವರ ಕಿರುಕುಳದಿಂದಾಗಿ ಬೇಸತ್ತು ಸೂಸೈಡ್ ಮಾಡಿಕೊಳ್ಳುತ್ತಿರೋದಾಗಿ ಡೆತ್ ನೋಟ್ ನಲ್ಲಿ ಆಕೆ ಆರೋಪಿಸಿದ್ದಾಳೆ.
ಈ ಸಂಬಂಧ ಜಯಶ್ರೀ ತಂದೆ ಶ್ರೀಧರ್ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Advertisement