
ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಿಗ್ ಬಾಸ್ ಸೀಸನ್ 12 ನಡೆಯುತ್ತಿರುವ ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೊಗೆ ಬೀಗ ಜಡಿದಿದ್ದ ಜಿಲ್ಲಾಡಳಿತ ನಿನ್ನೆ ಸಂಸ್ಥೆಯ ಮನವಿ ಮೇರೆಗೆ ಷೋ ಮುಂದುವರಿಸಲು ಅವಕಾಶ ನೀಡಿದೆ.
ಕನ್ನಡಪರ ಸಂಘಟನೆ ಆಕ್ರೋಶ
ಇಂದು ಕನ್ನಡ ಪರ ಸಂಘಟನೆಗಳು ಜಾಲಿವುಡ್ ಸ್ಟುಡಿಯೊ ಮತ್ತು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟುಡಿಯೊ ಗೇಟ್ ಬಳಿ ಬಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಬಿಗ್ ಬಾಸ್ ಶೋಗೆ ರಾತ್ರೋರಾತ್ರಿ ಅನುಮತಿ ನೀಡಿದ್ದೀರಿ ಹೇಗೆ, ಇದು ಅಕ್ರಮವಾಗಿ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement