ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಾಚರಣೆ: ವಿಶೇಷ ಮಧ್ಯಸ್ಥಿಕೆ ಅಭಿಯಾನ; ರಾಜ್ಯದಲ್ಲಿ 5575 ಪ್ರಕರಣ ಇತ್ಯರ್ಥ

90 ದಿನಗಳ 'ರಾಷ್ಟ್ರಕ್ಕಾಗಿ ವಿಶೇಷ ಮಧ್ಯಸ್ಥಿಕೆ ಅಭಿಯಾನಯಲ್ಲಿ 76,197 ಪ್ರಕರಣಗಳಲ್ಲಿ ಒಟ್ಟು 5,575 ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲಾಗಿದೆ.
representational image
ಸಾಂದರ್ಭಿಕ ಚಿತ್ರ
Updated on

ಧಾರವಾಡ: ರಾಜ್ಯದಲ್ಲಿ ನಡೆದ ಮಧ್ಯಸ್ಥಿಕೆ ಅಭಿಯಾನದಲ್ಲಿ 5,575 ಪ‍್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕರ್ನಾಟಕದಾದ್ಯಂತ ಆಯೋಜಿಸಲಾದ 90 ದಿನಗಳ 'ರಾಷ್ಟ್ರಕ್ಕಾಗಿ ವಿಶೇಷ ಮಧ್ಯಸ್ಥಿಕೆ ಅಭಿಯಾನಯಲ್ಲಿ 76,197 ಪ್ರಕರಣಗಳಲ್ಲಿ ಒಟ್ಟು 5,575 ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿಯ ಸಹಯೋಗದೊಂದಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ದೇಶಾದ್ಯಂತ ಕೈಗೊಂಡ ಅಭಿಯಾನದ ಭಾಗವಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ ಮಧ್ಯಸ್ಥಿಕೆ ಅಭಿಯಾನದಲ್ಲಿ (ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಾಚರಣೆ– ಜುಲೈ 1ರಿಂದ ಅಕ್ಟೋಬರ್ 6ರವರೆಗೆ) ರಾಜ್ಯದ ಕೋರ್ಟ್‌ಗಳಲ್ಲಿ ಬಾಕಿ ಇರುವ 13,86,837 ಪ್ರಕರಣಗಳ ಪೈಕಿ 76,197 ಪ್ರಕರಣಗಳನ್ನು ಗುರುತಿಸಿ, ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿತ್ತು.

47,080 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಂಡು 5,575 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 26,144 ಪ್ರಕರಣ ಇತ್ಯರ್ಥವಾಗಿಲ್ಲ. 15361 ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಿದ್ದು, ಪ್ರಕ್ರಿಯೆ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಮುಂದುವರಿಯಲಿದೆ.

representational image
ಸಂಚಾರ ದಂಡ ರಿಯಾಯಿತಿ: 106 ಕೋಟಿ ರೂ ಸಂಗ್ರಹ; 37.86 ಲಕ್ಷ ಪ್ರಕರಣ ಇತ್ಯರ್ಥ

3,038 ವೈವಾಹಿಕ- ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸಲಾಗಿದೆ. 159 ದಂಪತಿ ಒಂದಾಗಿದ್ದಾರೆ. 668 ಚೆಕ್ ಬೌನ್ಸ್ ಕೇಸ್‍ಗಳು, 649 ಪಾಲು ವಿಭಾಗ, 576 ಇತರ ಸಿವಿಲ್ ಪ್ರಕರಣ ವಿಲೇವಾರಿಯಾಗಿವೆ.

ಐದು ವರ್ಷಕ್ಕಿಂತ ಹೆಚ್ಚು ಅವಧಿಯ 177, ಹತ್ತು ರ್ಷಕ್ಕಿಂತ ಹೆಚ್ಚು ಅವಧಿಯ 23 ಹಾಗೂ ಹದಿನೈದು ವರ್ಷಕ್ಕಿಂತ ಹೆಚ್ಚು ಅವಧಿಯ 6 ಪ್ರಕರಣಗಳನ್ನು ಅಭಿಯಾನದಲ್ಲಿ ಇತ್ಯರ್ಥಗೊಳಿಸಲಾಗಿದೆ. 163 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಅಭಿಯಾನದ ಪ್ರಯೋಜನ ಪಡೆದಿದ್ದಾರೆ.

ಪ್ರಕರಣಗಳಲ್ಲಿ 1,300 ಮಧ್ಯಸ್ಥಿಕೆಗಾರರು ಪಾಲ್ಗೊಂಡಿದ್ದರು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಳಿಸಿರುವುದಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com