ಬಾಲ್ಯದಿಂದಲೂ ನಾನು ಇಲ್ಲಿಗೆ ಬರುತ್ತೇನೆ: ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್, ಇಲ್ಲಿಯವರೆಗೆ 6.40 ಲಕ್ಷ ಭಕ್ತರು ಭೇಟಿ

ನಾನು ಚಿಕ್ಕವಳಿದ್ದಾಗ ನನ್ನ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತಿದ್ದ ದಿನಗಳು ನೆನಪಾದವು. ಇವತ್ತು ನಿಮ್ಮ ಧ್ಯಾನಕ್ಕೆ ಬಿದ್ದಿದ್ದೇನೆ.
ಬಾಲ್ಯದಿಂದಲೂ ನಾನು ಇಲ್ಲಿಗೆ ಬರುತ್ತೇನೆ: ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್, ಇಲ್ಲಿಯವರೆಗೆ 6.40 ಲಕ್ಷ ಭಕ್ತರು ಭೇಟಿ
Updated on

ಹಾಸನ: ಈ ಬಾರಿ ಮೈಸೂರು ದಸರಾ ಉದ್ಘಾಟನೆ ಮಾಡಿದ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ತಮ್ಮ ಕುಟುಂಬಸ್ಥರ ಜೊತೆಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ.

ಹಾಸನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಬಾನು ಮುಷ್ತಾಕ್​ ಚಿಕ್ಕ ವಯಸ್ಸಿನಿಂದಲೇ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಮತ್ತು ಹೋರಾಟಗಾರ್ತಿಯಾಗಿ ಅವರು ಕರ್ನಾಟಕದಲ್ಲಿ ಮೂಲಭೂತವಾದಿ ಚಿಂತನೆಗಳು ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಿದ್ದಾರೆ. ಇದೀಗ ಹಾಸನಾಂಬೆ ದೇವಿಯ ದರ್ಶನ ಪಡೆಯುವ ಮೂಲಕ ಅವರು ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.

ಬಾಲ್ಯದಿಂದಲೂ ಬರುತ್ತಿದ್ದೇನೆ

ನಾನು ಚಿಕ್ಕವಳಿದ್ದಾಗ ನನ್ನ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತಿದ್ದ ದಿನಗಳು ನೆನಪಾದವು. ಇವತ್ತು ನಿಮ್ಮ ಧ್ಯಾನಕ್ಕೆ ಬಿದ್ದಿದ್ದೇನೆ. ಹಿಂದೆ ಮುಸ್ಲಿಂ ಸಮುದಾಯವೂ ಹಾಸನಾಂಬೆಯನ್ನು ಪೂಜಿಸುತ್ತಿದ್ದರು. ನಮ್ಮ ತಾಯಿಯ ಕಾಲದಲ್ಲಿ ದೇವಿಯನ್ನ ಹಸನ್ ಬಿ ಹುಸೇನ್ ಬೀ ಎಂಬ ನಂಬಿಕೆಯಲ್ಲಿ ಪರಿಚಯಿಸುತ್ತಿದ್ರು. ಆ ಕಾಲದಲ್ಲಿ ಮುಸ್ಲಿಂ ಪೂಜೆಯಂತೆ ಸಕ್ಕರೆ ಊದಿನ ಕಡ್ಡಿ ತಂದು ದೇವಿಗೆ ಪೂಜಿಸುತ್ತಿದ್ರು. ಅಂದು ಹೆಚ್ಚಿನ ಮುಸ್ಲಿಂ ಇಲ್ಲಿಗೆ ಬರ್ತಿದ್ರು. ಈಗಲೂ ಕೆಲವರು ಬರ್ತಾರೆ. ಹಾಸನಾಂಬೆ ಒಂದು ಉತ್ತಮ ಭಾವೈಕ್ಯತಾ ಜಾಗ. ಇದು ನಮ್ಮ ಊರ ಹಬ್ಬ. ನಾವೆಲ್ಲಾ ಈ ದೇವಿ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗಿಯಾಗಬೇಕು ಎಂದರು.

ಹಾಸನಾಂಬೆ ದೇವಸ್ಥಾನದ ದರ್ಶನ ಬಾನು ಮುಷ್ತಾಕ್ ಅವರ ಜೀವನದಲ್ಲಿ ವಿಶೇಷ ಸ್ಥಾನದಲ್ಲಿದೆ. ಅವರು ಪ್ರತಿ ಬಾರಿಯೂ ಈ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ವಿಶೇಷವಾಗಿ, ದರ್ಶನೋತ್ಸವದ ಆರನೇ ದಿನದಂದು ಅವರು ದೇವಿಯ ದರ್ಶನ ಮಾಡಿದ್ದು, ಭಕ್ತರಿಗೆ ಸ್ಪೂರ್ತಿ ನೀಡಿದೆ. ಈ ದಿನಗಳಲ್ಲಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ, ಅವರು ತಮ್ಮ ಭಾವುಕತೆಯನ್ನು ವ್ಯಕ್ತಪಡಿಸಿದ್ದಾರೆ. ಈ ದರ್ಶನವು ನನಗೆ ಆಂತರಿಕ ಶಾಂತಿಯನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ 6ನೇ ದಿನವಾದ ಇಂದೂ ಸಹ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ನಿರಂತರ ದರ್ಶನ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯಲಿದ್ದಾರೆ. ಇಂದೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದೇವಾಲಯದ ಆವರಣ ಹಾಗೂ ಸುತ್ತಮುತ್ತ ಸರಥಿ ಸಾಲುಗಳಲ್ಲಿ ನಿಂತಿದ್ದ ಭಕ್ತರನ್ನು ಮಾತನಾಡಿಸಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

ಬಾಲ್ಯದಿಂದಲೂ ನಾನು ಇಲ್ಲಿಗೆ ಬರುತ್ತೇನೆ: ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್, ಇಲ್ಲಿಯವರೆಗೆ 6.40 ಲಕ್ಷ ಭಕ್ತರು ಭೇಟಿ
'ನಾನುಂಟು ಆ ತಾಯಿ ಉಂಟು, ನಾನುಂಟು ಭಕ್ತರುಂಟು': ಹಾಸನಾಂಬೆ ಸನ್ನಿಧಿಯಲ್ಲಿ ಡಿ.ಕೆ ಶಿವಕುಮಾರ್ ಬೇಡಿಕೊಂಡದ್ದೇನು?

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಕಳೆದ ಐದು ದಿನಗಳಿಂದ 6,40,700 ಮಂದಿ ದರ್ಶನ ಮಾಡಿದ್ದಾರೆ. ಇಂದು ಬೆಳಗ್ಗೆ ಒಂದು ಲಕ್ಷದ 1,22,600 ಮಂದಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು .

ಇಂದು ಒಂದೇ ದಿನ ಭಕ್ತರ ಸಂಖ್ಯೆ 2.50 ಲಕ್ಷ ದಾಟಬಹುದು ಎಂದ ಅವರು ಎಷ್ಟೇ ಜನ ಬಂದರೂ ಎಲ್ಲರಿಗೂ ಸುಗಮ ದರ್ಶನ ಆಗಲಿದೆ. ಎಲ್ಲಾ ವ್ಯವಸ್ಥೆ ಸರಿಯಾಗಿದ್ದು ದರ್ಶನ ಪಡೆಯಲು ಜನರಿಗೆ ಸ್ವಲ್ಪ ಸಮಯ ಹೆಚ್ಚಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಗಂಟೆ ಸಮಯ ತಗುಲುತ್ತಿದ್ದು ಮುಂದಿನ ದಿನಗಳಲ್ಲಿ ಬರುವವರು ನಾಲ್ಕರಿಂದ ಐದು ಗಂಟೆ ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿ ಬನ್ನಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com