DNA ಆಧಾರಿತ ಆನೆಗಳ ಸಮೀಕ್ಷೆ ವರದಿ ಪ್ರಕಟ: ಪಶ್ಚಿಮ ಘಟ್ಟಗಳಲ್ಲಿವೆ ಅತಿ ಹೆಚ್ಚು ಆರೋಗ್ಯಕರ ಆನೆಗಳು!

ದೇಶದಲ್ಲಿ ಅಂದಾಜು 22,446 ಕಾಡು ಆನೆಗಳಿದ್ದು ಕರ್ನಾಟಕ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ 2017ರ ಡಿಎನ್ಎ ಆಧಾರಿತ ಎಣಿಕೆಯ ಪ್ರಕಾರ ಈ ಸಂಖ್ಯೆ 2017 ರ ಅಂಕಿ ಅಂಶವಾದ 27,312 ಕ್ಕಿಂತ ಕಡಿಮೆಯಾಗಿದೆ ವರದಿಯಲ್ಲಿ ತಿಳಿದು ಬಂದಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2021ರಲ್ಲಿ ಪ್ರಾರಂಭವಾದ ಡಿಎನ್‌ಎ ಆಧಾರಿತ ಆನೆಗಳ ಜನಸಂಖ್ಯಾ ಸಮೀಕ್ಷೆಯು ಸುಮಾರು 4 ವರ್ಷಗಳ ನಂತರ ಅ.14ರಂದು ಬಿಡುಗಡೆಯಾಗಿದೆ. ಈ ಸಮೀಕ್ಷೆಯ ವರದಿ ಪ್ರಕಾರ ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಕಾಡು ಆನೆಗಳನ್ನು ಹೊಂದಿದೆ.

ದೇಶದಲ್ಲಿ ಅಂದಾಜು 22,446 ಕಾಡು ಆನೆಗಳಿದ್ದು ಕರ್ನಾಟಕ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ 2017ರ ಡಿಎನ್ಎ ಆಧಾರಿತ ಎಣಿಕೆಯ ಪ್ರಕಾರ ಈ ಸಂಖ್ಯೆ 2017 ರ ಅಂಕಿ ಅಂಶವಾದ 27,312 ಕ್ಕಿಂತ ಕಡಿಮೆಯಾಗಿದೆ ವರದಿಯಲ್ಲಿ ತಿಳಿದು ಬಂದಿದೆ.

ಭಾರತದ ದಕ್ಷಿಣ ರಾಜ್ಯಗಳು ಅತಿ ಹೆಚ್ಚು ಆನೆಗಳಿಗೆ ನೆಲೆಯಾಗಿವೆ ಎಂದು ಅಧ್ಯಯನ ತೋರಿಸುತ್ತದೆ, ಕರ್ನಾಟಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮಿಳುನಾಡು 3ನೇ ಮತ್ತು ಕೇರಳ 4ನೇ ಸ್ಥಾನಗಳಲ್ಲಿವೆ. ದಕ್ಷಿಣದ ಮೂರು ರಾಜ್ಯಗಳು ಭಾರತದಲ್ಲಿ ಶೇ. 53.16ರಷ್ಟು ಆನೆಗಳನ್ನು ಹೊಂದಿವೆ. ಕರ್ನಾಟಕದಲ್ಲಿ 6,013, ತಮಿಳುನಾಡಿನಲ್ಲಿ 3,136 ಮತ್ತು ಕೇರಳದಲ್ಲಿ 2,785 ಆನೆಗಳಿದ್ದು, ಪಶ್ಚಿಮ ಘಟ್ಟಗಳಲ್ಲಿ ಆನೆಗಳ ಒಟ್ಟು ಸಂಖ್ಯೆ 11,934 ಕ್ಕೆ ತಲುಪಿದೆ.

ಅಷ್ಟೆ ಅಲ್ಲದೇ ಈ ಅಧ್ಯಯನದ ಪ್ರಕಾರ ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಲ್ಲಿ 1,891 ಆನೆಗಳಿವೆ, ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ 2,062 ಆನೆಗಳು ಮತ್ತು ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಬಯಲು ಪ್ರದೇಶಗಳಲ್ಲಿ 6,559 ಆನೆಗಳಿವೆ ಎಂದು ದಾಖಲಾಗಿದೆ. ಇದರಲ್ಲಿ ಪ್ರಮುಖವಾಗಿ ಅಸ್ಸಾಂ ಉತ್ತರ ಭಾರತದ ಆನೆಗಳ ಜನಸಂಖ್ಯೆ ವಿಷಯದಲ್ಲಿ ವಿಭಿನ್ನವಾಗಿದ್ದು, ಸುಮಾರು 4,159 ಆನೆಗಳಿಗೆ ನೆಲೆಯಾಗಿ 2ನೇ ಸ್ಥಾನದಲ್ಲಿದೆ, ಇದು ತಮಿಳುನಾಡು ಮತ್ತು ಕೇರಳದ ಎಣಿಕೆಗಿಂತ ಹೆಚ್ಚಾಗಿದೆ.

Representational image
ದೇಶದಲ್ಲಿ ಕಾಡಾನೆಗಳ ಸಂಖ್ಯೆ ಶೇ. 18 ರಷ್ಟು ಇಳಿಕೆ; DNA ಆಧಾರಿತ ಸಮೀಕ್ಷೆಯಲ್ಲಿ ಬಹಿರಂಗ!

2021-25ರ ಅವಧಿಯಲ್ಲಿ ಈ ಸಮಿಕ್ಷೆಗಾಗಿ ತಂಡಗಳು 21,056 ಸಗಣಿ ಮಾದರಿಗಳನ್ನು ಮೌಲ್ಯಮಾಪನ ಮಾಡಿ, ಭಾರತದಲ್ಲಿ 26,645 ಆನೆಗಳಿರುವುದಾಗಿ ತೀರ್ಮಾನಿಸಿವೆ. ಆನೆಗಳ ಸಗಣಿಯ ಮಾದರಿ ಪಡೆದು ಡಿಎನ್ಎ ವಿಶ್ಲೇಷಣೆ ನಡೆಸಿರುವುದು ಇದೇ ಮೊದಲು.

ಈ ವರದಿ ಭವಿಷ್ಯದಲ್ಲಿ ಆನೆಗಳ ಮೇಲ್ವಿಚಾರಣೆ ಮತ್ತು ಅಂದಾಜಿಗೆ ಹೊಸ ಆಧಾರಸ್ತಂಭವಾಗಲಿದೆ. ಈ ವಿಧಾನವನ್ನು ಮತ್ತಷ್ಟು ಪರಿಷ್ಕರಿಸಲಾಗುವುದು. ಈ ಉದ್ದೇಶಕ್ಕಾಗಿಯೇ ಎಲ್ಲಾ ವನ್ಯಜೀವಿ ವಾರ್ಡನ್‌ಗಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಒಂದು ಕಾಲದಲ್ಲಿ ಹೊಂದಿಕೊಂಡೇ ಇದ್ದ ಆನೆಗಳ ಸಂಖ್ಯೆ, ವಾಣಿಜ್ಯ ತೋಟಗಳು (ಕಾಫಿ ಮತ್ತು ಚಹಾ), ಆಕ್ರಮಣಕಾರಿ ಸಸ್ಯಗಳು, ಕೃಷಿಭೂಮಿ ಬೇಲಿ, ಮಾನವ ಅತಿಕ್ರಮಣ ಮತ್ತು ಬೆಳೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಬದಲಾಗುತ್ತಿರುವ ಭೂ ಬಳಕೆಯಿಂದಾಗಿ ವೇಗವಾಗಿ ಸಂಪರ್ಕ ಕಡಿತಗೊಳ್ಳುತ್ತಿದೆ ಎಂದು ವರದಿ ಹೇಳಿದೆ.

ಈ ವಿಘಟನೆಯು ಪ್ರಾಣಿಗಳ ಆವಾಸಸ್ಥಾನಗಳಿಗೆ ಅಪಾಯವನ್ನುಂಟುಮಾಡುತ್ತದೆ, ಜನಸಂಖ್ಯೆಯ ನಡುವೆ ಚಲನೆಯನ್ನು ಸಕ್ರಿಯಗೊಳಿಸಲು ಸಂಪರ್ಕವನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಹುಲಿಗಳಿಗಿಂತ ಭಿನ್ನವಾಗಿ, ಆನೆಗಳಿಗೆ ಕ್ಯಾ ಮೆರಾ ಟ್ರ್ಯಾಪ್ ಬಳಕೆ ಸೀಮಿತವಾಗಿವೆ ಎಂದು WII ಯ ಸಂಶೋಧಕರೊಬ್ಬರು TNIE ಗೆ ತಿಳಿಸಿದರು.

Representational image
ಕೊಡಗು: ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು AI ಆಧಾರಿತ ಸೈರನ್ ವ್ಯವಸ್ಥೆ ರೂಪಿಸಿದ NGO

ಪ್ರಾಜೆಕ್ಟ್ ಎಲಿಫೆಂಟ್‌ನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಡಿಎನ್‌ಎ ಆಧಾರಿತ ಮೌಲ್ಯಮಾಪನದ ಪ್ರಕಾರ, 2017 ರ ರಾಷ್ಟ್ರೀಯ ಸಿಂಕ್ರೊನೈಸ್ಡ್ ಅಂದಾಜಿನಲ್ಲಿ, ಕರ್ನಾಟಕದಲ್ಲಿ 6,049 ಆನೆಗಳಿವೆ ಎಂದು ಹೇಳಿದರು. ವ್ಯತ್ಯಾಸವೆಂದರೆ ಕೇವಲ 36 ಆನೆಗಳ (1%) ಕನಿಷ್ಠ ಕುಸಿತ, ಇದು ನಿರೀಕ್ಷಿತ ಅಂಕಿಅಂಶಗಳ ವ್ಯಾಪ್ತಿಯಲ್ಲಿದೆ.

ಪರಿಸರ ಸಚಿವಾಲಯ, ಪ್ರಾಜೆಕ್ಟ್ ಎಲಿಫೆಂಟ್ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ನಡೆಸಿದ 2025ರ ಸರ್ವೆಯು ಭವಿಷ್ಯದಲ್ಲಿ ಆನೆಗಳ ಮೇಲ್ವಿಚಾರಣೆ ಮತ್ತು ಸಂರಕ್ಷಣಾ ಯೋಜನೆಗಳಿಗೆ ಹೊಸ ವೈಜ್ಞಾನಿಕ ಆಧಾರವನ್ನು ನೀಡಿದೆ. ಈ ವರದಿಗಾಗಿ ಭೂ ಸಮೀಕ್ಷೆ, ಉಪಗ್ರಹ ಆಧಾರಿತ ಮ್ಯಾಪಿಂಗ್ ಮತ್ತು ಆನುವಂಶಿಕ ವಿಶ್ಲೇಷಣೆಯನ್ನು ಜೋಡಿಸುವ ಮೂರು ಹಂತದ ಪ್ರಕ್ರಿಯೆಯನ್ನು ಬಳಸಲಾಗಿದೆ.

‘ಡಿಎನ್‌ಎ ಆಧಾರಿತ ಅಖಿಲ ಭಾರತ ಆನೆಗಳ ಸಂಖ್ಯೆಯ ಅಂದಾಜು' ಎಂಬ ಅಧ್ಯಯನವು ದೇಶದ ವಿವಿಧ ಭಾಗಗಳಲ್ಲಿನ ಕಾಡಾನೆಗಳ ಸಂಖ್ಯೆ ಎಷ್ಟಿದೆ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ. ಭಾರತವು ಏಷ್ಯಾದಲ್ಲೆ ಅತಿ ಹೆಚ್ಚು ಅನೆಗಳಿಗೆ ನೆಲೆಯಾಗಿರುವ ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com