
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿಗೆ ಸೇರಿದ ಮೂರು ಹಳ್ಳಿಗಳಲ್ಲಿ ಸುಮಾರು 140 ಎಕರೆಗಳಷ್ಟು ಕೃಷಿ ಮಾಡುತ್ತಿರುವ ಹಲವಾರು ರೈತರು ಪೂರ್ವಜರ ಕಾಲದಿಂದಲೂ ತಮ್ಮ ಭೂಮಿಗೆ 'ಫೋಡಿ ಮತ್ತು ದುರಸ್ತ್' ಪಡೆಯಲು ಸಾಧ್ಯವಾಗಿಲ್ಲ.
ಹೀಗಾಗಿ ಈ ರೈತರು ಕಾನೂನುಬದ್ಧ ಉತ್ತರಾಧಿಕಾರಿಗಳ ನಡುವೆ ಭೂಮಿಯನ್ನು ವಿಭಜಿಸಲು ಅಥವಾ ಆ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡುಕೊತ್ತನಹಳ್ಳಿ ತೋಟದ ಸೈ. ನಂ. 1 ಹೊಂದಿರುವ ಭೂಮಿಯ ಮೂಲ ದಾಖಲೆ ಚನ್ನಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಲಭ್ಯವಿಲ್ಲ.
ಅಲ್ಲದೆ, ಈ ಭೂಮಿಯ 'ಆಕಾರ್‌ಬಂದ್' ಮತ್ತು ಸರ್ವೆ ಸ್ಕೆಚ್ ರಾಮನಗರದಲ್ಲಿರುವ ಸರ್ವೆ ಸೆಟಲ್‌ಮೆಂಟ್ ಮತ್ತು ಭೂ ದಾಖಲೆಗಳ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಆ ಭೂಮಿಗಳಲ್ಲಿ ಹೆಚ್ಚಿನವುಗಳನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿದೆ. ಈ ಭೂಮಿಯಲ್ಲಿ ಕೆಲವು ಜಮೀನನ್ನು ಸರ್ಕಾರವು ದೀನದಲಿತ ಅಥವಾ ಭೂಹೀನ ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿದೆ ಎಂದು ರೈತರು ಹೇಳುತ್ತಾರೆ. ತಮ್ಮ ಹೆಸರುಗಳು ಆರ್‌ಟಿಸಿಗಳಲ್ಲಿ ತೋರಿಸುತ್ತಿದೆ, ಆಯಾ ಭೂಮಿಯ ಸಂಪೂರ್ಣ ಭಾಗವನ್ನು 'ಪೌತಿ ಖಾತಾ'ದಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲಾಗುತ್ತದೆ ಆದರೆ 'ಫೋಡಿ ಮತ್ತು ದುರಸ್ತ್ ಕೊರತೆಯಿಂದಾಗಿ ಕುಟುಂಬ ಸದಸ್ಯರಿಗೆ ವಿಭಜನೆ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ಭೂ ದಾಖಲೆಗಳ ಪ್ರಕಾರ 'ಕಾಡುಕೊತ್ತನಹಳ್ಳಿಯಲ್ಲಿ ಪ್ಲಾಂಟೇಶನ್' ವ್ಯಾಪ್ತಿಗೆ ಬರುವ ಸುಮಾರು 140 ಎಕರೆ ಭೂಮಿಯನ್ನು ತಾವು ಸಾಗುವಳಿ ಮಾಡುತ್ತಿದ್ದೇವೆ ಎಂದು ರೈತರು ಹೇಳಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆ, ಸಂಕಲಗೆರೆ ಮತ್ತು ಬೆಳಕೆರೆ ಎಂಬ ಮೂರು ಗ್ರಾಮಗಳಲ್ಲಿ ಹರಡಿರುವ ಆ ಭೂಮಿಗಳ ಹಕ್ಕುದಾರರು ತಾವು ಎಂದು ಕೆಲವರು ಹೇಳುತ್ತಿದ್ದಾರೆ. ಆ ಭೂಮಿಯಲ್ಲಿ ಕೆಲವು ಜಮೀನನ್ನು 1928 ರಲ್ಲಿ ಹರಾಜಿನಲ್ಲಿ ಖರೀದಿಸಲಾಗಿದೆ ಮತ್ತು ಕೆಲವು ಭೂಮಿಯನ್ನು ದಲಿತರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮಲ್ಲಿ ಯಾರೊಬ್ಬರ ಹೆಸರಿನಲ್ಲೂ ಮೂಲ ದಾಖಲೆಗಳು ಕಂಡುಬಂದಿಲ್ಲ, ಕೆಲವು ವ್ಯಕ್ತಿಗಳ ಹೆಸರಿನಲ್ಲಿ ಆರ್‌ಟಿಸಿಗಳಿವೆ ಎಂದು ರೈತರು ಒಪ್ಪಿಕೊಂಡರು, ಆದರೆ ಪ್ರಶ್ನಾರ್ಹ ಭೂಮಿಗೆ ಗ್ರಾಮ ನಕ್ಷೆ ಲಭ್ಯವಿದೆ, ಇದರಲ್ಲಿ 'ಫೋಡಿ ಮತ್ತು ದುರಸ್ಥ್' ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ.
"ನಮ್ಮ ಕುಟುಂಬ ಸದಸ್ಯರಲ್ಲಿ ಭೂಮಿಯನ್ನು ಸಾಗುವಳಿ ಮಾಡಲು ಯಾವುದೇ ಸಮಸ್ಯೆಯಿಲ್ಲ, ಆದರೆ 'ಫೋಡಿ ಮತ್ತು ದುರಸ್ಥ್' ಇಲ್ಲದ ಕಾರಣ ನಾವು ಭೂಮಿಯನ್ನು ದಾಖಲೆ ಮೂಲಕ ವಿಭಜಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಎಂದು ಭೂಮಾಲೀಕರು ತಮ್ಮ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಸದ್ಯ ಇರುವ ದಾಖಲೆಗಳು 1963 ರ ಹಿಂದಿನವು, ಭೂ ಕಂದಾಯ ಆಯುಕ್ತರು ಪ್ರಶ್ನಾರ್ಹ ಭೂಮಿಗಳ ನಕ್ಷೆಗೆ ಸಹಿ ಮಾಡಿದ್ದಾರೆ. ಚನ್ನಪಟ್ಟಣದ ತಹಶೀಲ್ದಾರ್ ಕಚೇರಿ 1969 ರಿಂದ ರೈತರು ಭೂಮಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ದಾಖಲಿಸಿರುವುದು ಕಂಡು ಬರುತ್ತದೆ.
ಉಪ-ನೋಂದಣಿದಾರರ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ 1928 ರಲ್ಲಿ ಹರಾಜಿನಲ್ಲಿ ಭೂಮಿಯನ್ನು ಖರೀದಿಸಲಾಗಿದೆ ಎಂದು ತೋರಿಸುತ್ತವೆ. ಆದರೆ ತಾಲ್ಲೂಕು ಕಚೇರಿ ಅಥವಾ ಸರ್ವೆ ಇಲಾಖೆಯಲ್ಲಿ ಅದನ್ನು ದೃಢೀಕರಿಸಲು ಯಾವುದೇ ಪಕ್ಕಾ ದಾಖಲೆಗಳು ಲಭ್ಯವಿಲ್ಲ, ಆದರೆ ಅವರು ತಮ್ಮ ಭೂಮಿಗೆ ಕಾಲಕಾಲಕ್ಕೆ ಸರ್ಕಾರಕ್ಕೆ ನಿರಂತರವಾಗಿ ಕಂದಾಯವನ್ನು ಪಾವತಿಸುತ್ತಿರುವುದಾಗಿ ರೈತರು ಮಾಹಿತಿ ನೀಡಿದ್ದಾರೆ.
Advertisement