EX Mla subhash Guttedhar
ಬಿಜೆಪಿ ಮಾಜಿ ಶಾಸಕ ಗುತ್ತೇದಾರ್

ಆಳಂದ: ಕೇವಲ ರೂ.80 ಗೆ ಮತದಾರರ ಹೆಸರು ಡಿಲೀಟ್! ಬಿಜೆಪಿ ಮಾಜಿ ಶಾಸಕ ಗುತ್ತೇದಾರ್ ಮನೆ ಬಳಿ 6,000 ಮತದಾರರ ಸುಟ್ಟ ದಾಖಲೆ ಪತ್ತೆ! ಮೂಲಗಳು

ಪ್ರತಿಯೊಂದು ಮತ ಕಳ್ಳತನಕ್ಕೆ ರೂ.80 ಪಾವತಿಸಲಾಗಿದೆ. 6,994 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಸಿಐಡಿಯ ಉನ್ನತ ಮೂಲಗಳು ತಿಳಿಸಿವೆ.
Published on

ಆಳಂದ: ಕಲಬುರಗಿಯ ಆಳಂದ ವಿಧಾನಭಾ ಕ್ಷೇತ್ರದಲ್ಲಿ "ಮತ ಚೋರಿ" (ಮತ ಕಳ್ಳತನ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು 2023 ರ ವಿಧಾನಸಭಾ ಚುನಾವಣೆಗೂ ಮುಂಚೆ ಮತದಾರರ ಪಟ್ಟಿಯಿಂದ ಸಾವಿರಾರು ನೈಜ ಮತದಾರರನ್ನು ತೆಗೆಯುವ ದೊಡ್ಡ ಪ್ರಮಾಣದ ಪ್ರಯತ್ನವನ್ನು ಬಹಿರಂಗಪಡಿಸಿದೆ.

ಪ್ರತಿಯೊಂದು ಮತ ಕಳ್ಳತನಕ್ಕೆ ರೂ.80 ಪಾವತಿಸಲಾಗಿದೆ. 6,994 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಸಿಐಡಿಯ ಉನ್ನತ ಮೂಲಗಳು ತಿಳಿಸಿವೆ. ಇವುಗಳಲ್ಲಿ ನಿಜವಾಗಿ ತೆಗೆಯಬೇಕಾದದ್ದು ಕೆಲವರನ್ನು ಮಾತ್ರ, ಸುಮಾರು 6,000 ನೋಂದಾಯಿತ ಮತದಾರರು ಹೆಚ್ಚಾಗಿ ದಲಿತರು ಮತ್ತು ಅಲ್ಪಸಂಖ್ಯಾತರು, ಕಾಂಗ್ರೆಸ್ ಬೆಂಬಲಿಗರು ಎಂದು ಹೇಳಲಾಗಿದೆ.

ಕಲಬುರಗಿಯ ಡೇಟಾ ಸೆಂಟರ್‌ಗೆ ಸಂಪರ್ಕ ಹೊಂದಿದ ಕನಿಷ್ಠ ಆರು ಪ್ರಮುಖ ಶಂಕಿತರನ್ನು ಎಸ್‌ಐಟಿ ಗುರುತಿಸಿದೆ. ಅವರು ಮತ ಕಳ್ಳತನಕ್ಕೆ ಧ್ವನಿ ಮೂಲಕ ಇಂಟರ್ನೆಟ್ ಪ್ರೋಟೋಕಾಲ್ ವ್ಯವಸ್ಥೆಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲು ಸುಮಾರು 3–4 ಲಕ್ಷ ರೂ. ಪಾವತಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ ಹರ್ಷಾನಂದ ಎಸ್ ಗುತ್ತೆದಾರ್ ಪರ ಕೆಲಸ ಮಾಡುತ್ತಿದ್ದ ಡೇಟಾ ಎಂಟ್ರಿ ಆಪರೇಟರ್ ಗೆ ಸುಮಾರು 6.000 ಮತಗಳನ್ನು ಡಿಲೀಟ್ ಮಾಡಲು ಸೂಚಿಸಲಾಗಿತ್ತು. ಈ ಪೈಕಿ ಮಂದಿ ಮಾತ್ರ ನಕಲಿ ಅಥವಾ ಮೃತಪಟ್ಟಿರುವುದು ಕಂಡುಬಂದಿದೆ. ಉಳಿದವು ನೈಜ ಮತಗಳಾಗಿವೆ ಎಂದು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ.

ಸುಭಾಷ್ ಗುತ್ತೇದಾರ್, ಅವರ ಮಕ್ಕಳಾದ ಹರ್ಷಾನಂದ್ ಮತ್ತು ಸಂತೋಷ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಗುತ್ತೇದಾರ್ ಮನೆ ಬಳಿ ಸುಟ್ಟ ಮತದಾರರ ದಾಖಲೆಗಳನ್ನು ಎಸ್‌ಐಟಿ ಪತ್ತೆ ಮಾಡಿದೆ. ದೀಪಾವಳಿ ಸ್ವಚ್ಛತೆಯ ಭಾಗವಾಗಿ ಮನೆಗೆಲಸದ ಸಿಬ್ಬಂದಿ ಕಾಗದಗಳನ್ನು ಸುಟ್ಟುಹಾಕಿದ್ದಾರೆ. ಯಾವುದೇ ದುರುದ್ದೇಶಪೂರಿತ ಉದ್ದೇಶವಿಲ್ಲ ಎಂದು ಮಾಜಿ ಶಾಸಕ ಹೇಳಿಕೊಂಡಿದ್ದಾರೆ.

ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನ ಪ್ರಯತ್ನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಆಳಂದದಲ್ಲಿ ಕೇವಲ ರೂ. 80ಗೆ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಚುನಾವಣೆಗೆ ಮುನ್ನ 6,000 ಕ್ಕೂ ಹೆಚ್ಚು ನಿಜವಾದ ಮತದಾರರ ಹೆಸರನ್ನು ಪೇಯ್ಡ್ ಆಪರೇಷನ್ ಮೂಲಕ ಡಿಲೀಟ್ ಮಾಡಲಾಗಿದೆ ಎಂದು ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತದಾರರ ಹೆಸರು ಡಿಲೀಟ್ ಫಲಿತಾಂಶವನ್ನು ಬದಲಾಯಿಸಬಹುದು. ಎಸ್‌ಐಟಿಯ ಅಂತಿಮ ವರದಿಗಾಗಿ ಕಾಯುವುದಾಗಿ ಪಾಟೀಲ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ಮೇಲಿನ ನೇರ ದಾಳಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

EX Mla subhash Guttedhar
'ಮತಗಳ್ಳತನ' ಪ್ರಕರಣ: ಆಳಂದ ಮಾಜಿ ಬಿಜೆಪಿ ಶಾಸಕ ಗುತ್ತೇದಾರ್ ಮನೆ ಬಳಿ ಸುಟ್ಟ ದಾಖಲೆಗಳು ಪತ್ತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com