ಬೆಳಗಾವಿ: ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ 8,000 ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಾಂತರ ರೂ ವಂಚನೆ

ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
Ajay Patil
ಅಜಯ್ ಪಾಟೀಲ್
Updated on

ಬೆಳಗಾವಿ: ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸದ್ದಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಕೆಲವು ಪ್ರಭಾವಿ ಮಹಿಳೆಯರು ಸಹ ಈ ವಂಚನೆಯ ಯೋಜನೆಯಲ್ಲಿ ಲಕ್ಷಗಟ್ಟಲೆ ಹೂಡಿಕೆ ಮಾಡುವ ಮೂಲಕ ಮೋಸ ಹೋಗಿದ್ದಾರೆ.

ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದ.

ಒಬ್ಬ ಮಹಿಳೆಯಿಂದ ಒಂದು ಗುರುತಿನ ಚೀಟಿ ರಚಿಸಲು 2,500 ರಿಂದ 5,000 ರೂ.ಗಳವರೆಗೆ ಹಣವನ್ನು ಸಂಗ್ರಹಿಸಿದ್ದ. ಪ್ರತಿಯೊಬ್ಬ ನೇಮಕಾತಿದಾರರು ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅವನ ನಿಜವಾದ ಹೆಸರು ಸೋಲಾಪುರದ ಬಾಬಾಸಾಹೇಬ್ ಕೋಲೇಕರ್ ಎಂದು ಹೇಳಲಾಗುತ್ತದೆ ಆತಸೋಲಾಪುರ ಮೂಲದವನು ಎಂದು ತಿಳಿದು ಬಂದಿದೆ.

Ajay Patil
ಉಡುಪಿ: ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಗೆ 29.68 ಲಕ್ಷ ರೂ ವಂಚನೆ!

ಈ ಯೋಜನೆಯು ಚೈನ್ ಲಿಂಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸ್ವ-ಸಹಾಯ ಗುಂಪುಗಳಂತಹ ಮಹಿಳಾ ಗುಂಪುಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಮಹಿಳೆಯರು ತಿಳಿಸಿದ್ದಾರೆ. ಪ್ರತಿ ಮಹಿಳೆಯರ ಮನೆಗೆ ಅಗರಬತ್ತಿಗಳನ್ನು ತಲುಪಿಸಲು ಆಟೋ ರಿಕ್ಷಾ ಬಾಡಿಗೆಯಾಗಿ 2,500 ರಿಂದ 5,000 ರೂ.ಗಳವರೆಗೆ ಮುಂಗಡ ಶುಲ್ಕವನ್ನು ಅವರೇ ಪಾವತಿಸಬೇಕಿತ್ತು. ಮಹಿಳೆಯರು ಅದನ್ನು ಪ್ಯಾಕ್ ಮಾಡಿ ಹಿಂತಿರುಗಿಸಬೇಕಾಗಿತ್ತು.

ಈ ಗಂಧದ ಕಡ್ಡಿಗಳನ್ನು ಮನೆಯಲ್ಲಿಯೇ ಪ್ಯಾಕ್ ಮಾಡುವ ಮೂಲಕ ಪ್ರತಿ ತಿಂಗಳು 2,500 ರೂ.ಗಳನ್ನು ಗಳಿಸಬಹುದು ಎಂದು ಅವರಿಗೆ ಹೇಳಲಾಯಿತು. ಇತರರನ್ನು ಸೇರಿಸಿಕೊಳ್ಳುವುದರಿಂದ ತಮ್ಮ ಆದಾಯ ಹೆಚ್ಚಾಗುತ್ತದೆ ಎಂದು ಮಹಿಳೆಯರನ್ನು ಸಹ ಆಕರ್ಷಿಸಲಾಯಿತು. ಭರವಸೆ ನೀಡಿದ ಹಣ ವಾಪಸ್ ಬರದಿದ್ದಾಗ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಈ ಹಗರಣದಲ್ಲಿ ವಂಚನೆಗೊಳಗಾದ ಮಹಿಳೆಯರಲ್ಲಿ ಒಬ್ಬರಾದ ಲಕ್ಷ್ಮಿ ಕಾಂಬ್ಳೆ ಮಾತನಾಡಿ, "ನನ್ನ ಪತಿ ಇತ್ತೀಚೆಗೆ ನಿಧನರಾದರು. ನನ್ನ ಕುಟುಂಬದ ಜೀವನಕ್ಕಾಗಿ ನನಗೆ 'ಮನೆಯಿಂದ ಕೆಲಸ' ಬೇಕಾಗಿದ್ದಾಗ ಇತರ ಮಹಿಳೆಯರಿಂದ ನನಗೆ ಈ ಯೋಜನೆಯ ಬಗ್ಗೆ ತಿಳಿದುಬಂತು.

ಬಾಯಿಗೆ ಬಾಯಿಗೆ ಪ್ರಚಾರದ ಕಾರಣ ಅನೇಕ ಮಹಿಳೆಯರು ಈ ಯೋಜನೆಗೆ ದಾಖಲಾಗಿದ್ದಾರೆ. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಮಹಾರಾಷ್ಟ್ರಕ್ಕೆ ಓಡಿಹೋದ ಆರೋಪಿಯನ್ನು ಬಂಧಿಸಬೇಕು ಮತ್ತು ನಮ್ಮ ಹಣವನ್ನು ಹಿಂದಿರುಗಿಸಲು ಸಹಾಯ ಮಾಡಬೇಕು" ಎಂದು ಅವರು ಹೇಳಿದರು.

ಈ ಯೋಜನೆಯ ಮುಖ್ಯಸ್ಥರು ಮಹಿಳೆಯರಿಗೆ ಮನೆಯಿಂದ ಮನೆಗೆ ಗಂಧದ ಕಡ್ಡಿ ಪೂರೈಸಲು ಸುಮಾರು ಆರರಿಂದ ಏಳು ಆಟೋಗಳನ್ನು ಬಾಡಿಗೆಗೆ ಪಡೆದಿದ್ದರು. ನನ್ನ ಹೆಂಡತಿಯನ್ನು ಸಹ 20,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಳು ಎಂದು ಆಟೋ ಚಾಲಕ ಗೋವಿಂದ್ ಲಮಾನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com