ಶಿವಮೊಗ್ಗ: ಸಹೋದರನಿಂದಲೇ ಅತ್ಯಾಚಾರ; ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

17 ವರ್ಷದ ಅಪ್ರಾಪ್ತ ಸಹೋದರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮೂಲಗಳು ತಿಳಿಸಿವೆ.
file image
ಸಂಗ್ರಹ ಚಿತ್ರonline desk
Updated on

ಶಿವಮೊಗ್ಗ: ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಒಂಬತ್ತನೇ ತರಗತಿಯ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ, ಶಿವಮೊಗ್ಗ ತಾಲ್ಲೂಕಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ತನ್ನ ಸ್ವಂತ ಅಪ್ರಾಪ್ತ ಸಹೋದರನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ 14 ವರ್ಷದ ಬಾಲಕಿ ಶುಕ್ರವಾರ ತನ್ನ ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮೂವರು ಹೆಣ್ಣುಮಕ್ಕಳು ಮತ್ತು ಓರ್ವ ಮಗನಿದ್ದ ಕುಟುಂಬದಲ್ಲಿ ಸಂತ್ರಸ್ತೆ ಮೂರನೇ ಮಗಳಾಗಿದ್ದಾಳೆ, ಅವರೆಲ್ಲರೂ ಮಾನಸಿಕ ಅಸ್ವಸ್ಥರು ಎಂದು ವರದಿಯಾಗಿದೆ. 17 ವರ್ಷದ ಅಪ್ರಾಪ್ತ ಸಹೋದರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮೂಲಗಳು ತಿಳಿಸಿವೆ. ಅಪ್ರಾಪ್ತ ಬಾಲಕಿ ಮತ್ತು 1.8 ಕೆಜಿ ತೂಕದ ಮಗುವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಏಳು ತಿಂಗಳ ಗರ್ಭಿಣಿಯಾಗಿದ್ದ ಬಾಲಕಿ ಅಕಾಲಿಕ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷ ತಾಜುದ್ದೀನ್ ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಬಾಲಕಿ ತನ್ನ ತಾಯಿಯ ಸಹಾಯದಿಂದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಅದೇ ರಾತ್ರಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆಸ್ಪತ್ರೆಯಲ್ಲಿ ಆಕೆಯನ್ನು ಪ್ರಶ್ನಿಸಿದಾಗ ಆಕೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಳು" ಎಂದು ಅವರು ಹೇಳಿದರು.

ಬಾಲಕಿ ಮೇಲೆ ಪದೇ ಪದೇ ಆರೋಪಿ ಅತ್ಯಾಚಾರ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಸಂಪೂರ್ಣ ಸಮಾಲೋಚನೆಯ ನಂತರ, ತಾನು ಗರ್ಭಿಣಿಯಾಗಲು ತನ್ನ ಸಹೋದರನೇ ಕಾರಣ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ ಎಂದು ಖಾನ್ ತಿಳಿಸಿದ್ದಾರೆ. ಕುಟುಂಬದ ಎಲ್ಲಾ ಮಕ್ಕಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ತಂದೆ ದಿನಗೂಲಿ ಪೇಂಟರ್, ತಾಯಿ ಗೃಹಿಣಿ ಎಂದು ಮಾಹಿತಿ ನೀಡಿದ್ದಾರೆ.

file image
Belagavi: 15 ವರ್ಷದ ಅಪ್ರಾಪ್ತ ಬಾಲಕಿ ಜೊತೆ ಮದುವೆ; ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ POCSO ಪ್ರಕರಣ ದಾಖಲು!

ಮನೆ ಚಿಕ್ಕದಾಗಿದ್ದು, ಎಲ್ಲಾ ಸಹೋದರ ಸಹೋದರಿಯರು ಒಂದೇ ಕೋಣೆಯಲ್ಲಿ ಮಲಗುತ್ತಿದ್ದರು ಎಂದು ಅವರು ಹೇಳಿದರು. ಆರೋಪಿಯು ಹಲವಾರು ದಿನಗಳವರೆಗೆ ಹುಡುಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಹುಡುಗಿಯ ತಾಯಿ ಕೂಡ ಹುಡುಗಿಯ ಮುಟ್ಟಿನ ಚಕ್ರವನ್ನು ಮೇಲ್ವಿಚಾರಣೆ ಮಾಡಲು ವಿಫಲರಾಗಿದ್ದಾರೆ.

ಹುಡುಗಿ ಮತ್ತು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಆಕೆಗೆ 18 ವರ್ಷ ತುಂಬುವವರೆಗೆ ಅವಳನ್ನು ಸಿಡಬ್ಲ್ಯೂಸಿ ನೋಡಿಕೊಳ್ಳುತ್ತದೆ. ಹುಡುಗಿ ಮಗುವನ್ನು ಇಟ್ಟುಕೊಳ್ಳಲು ಬಯಸಿದರೆ, ನಾವು ಅದನ್ನು ಅವಳಿಗೆ ಹಸ್ತಾಂತರಿಸುತ್ತೇವೆ. ಇಲ್ಲದಿದ್ದರೆ, ಕಾನೂನಿನ ಪ್ರಕಾರ ಅದನ್ನು ದತ್ತು ಪಡೆಯಲು ಬಿಟ್ಟುಕೊಡಲಾಗುತ್ತದೆ. ಆರೋಪಿಯನ್ನು ತಿದ್ದುಪಡಿ ಗೃಹಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com