
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗಿರುವ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಎಂಬ ಇಬ್ಬರು ಹೋರಾಟಗಾರರು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಿಮರೋಡಿ ಆರ್‌ಎಸ್‌ಎಸ್‌ನಿಂದ ಬಂದವರು. ವಿಧಾನಸಭೆಯೊಳಗೆ ಅವರು (ಬಿಜೆಪಿ) ಯಾರ ವಿರುದ್ಧ ಮಾತನಾಡಿದರು? ಅದು ಮಹೇಶ್ ಶೆಟ್ಟಿ ತಿಮರೋಡಿ ಅಲ್ಲವೇ? ಈ ವ್ಯಕ್ತಿ ಆರ್‌ಎಸ್‌ಎಸ್‌ನವರು. ಆರ್‌ಎಸ್‌ಎಸ್ ಬಿಜೆಪಿಯ ಗುರು. ಈ ಜನರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಬಜರಂಗದಳದಲ್ಲಿ ಬೆಳೆದವರು' ಎಂದು ತಿಳಿಸಿದರು.
ಮಟ್ಟಣ್ಣವರ್ ಬಗ್ಗೆ ಮಾತನಾಡಿದ ಸಚಿವರು, 'ಅವರು ಬಿದೆಪಿ ಯುವ ಮೋರ್ಚಾ (ಜಿಲ್ಲಾ) ಅಧ್ಯಕ್ಷರು. ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದರು. ಅವರಿಗೆ ಬಿಜೆಪಿ ಬಿ-ಫಾರ್ಮ್ ನೀಡಲಾಗಿದೆ. ಇಂದು, ಅವರು (ತಿಮರೋಡಿ ಮತ್ತು ಮಟ್ಟಣ್ಣವರ್) ವಿರುದ್ಧ ಮಾತನಾಡುತ್ತಿದ್ದಾರೆ. ಹಾಗಾದರೆ ಇದು ಯಾರ ಪಿತೂರಿ?. ಧರ್ಮಸ್ಥಳ ವಿವಾದವು ಆರ್‌ಎಸ್‌ಎಸ್‌ನಲ್ಲಿನ ಬಣಗಳ ಕಲಹದ ಪರಿಣಾಮ' ಎಂದು ಹೇಳಿದರು.
ಇದು ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್. ಈಗ ಅವರು ಸರ್ಕಾರವನ್ನು ಕಳಂಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಗೆ ಯಾವ ಆರ್‌ಎಸ್‌ಎಸ್ ಬಣವನ್ನು ಸಂಪರ್ಕಿಸಬೇಕು ಎಂದು ತಿಳಿದಿಲ್ಲ. ಆರ್‌ಎಸ್‌ಎಸ್‌ನಲ್ಲಿ ಎರಡು ಬಣಗಳಿವೆ. ಅವರು (ಬಿಜೆಪಿ) ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಾರ ಕಾಲು ಹಿಡಿಯಬೇಕೆಂದು ತಿಳಿದಿಲ್ಲ' ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬಿಜೆಪಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಚಾಮುಂಡೇಶ್ವರಿ ಚಲೋ' ಮತ್ತು ಧರ್ಮಸ್ಥಳ ಚಲೋ'ದಂತಹ ಅಭಿಯಾನಗಳನ್ನು ಆಯೋಜಿಸುತ್ತಿದೆ. ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಮೆಚ್ಚಿಸಲು ಚಲೋ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು "ಚಾಮುಂಡೇಶ್ವರಿ ಚಲೋ" ಮತ್ತು "ಧರ್ಮಸ್ಥಳ ಚಲೋ"ಕ್ಕೆ ಮಾತ್ರ ಸೀಮಿತರಾಗಬೇಡಿ. ಕೇಂದ್ರವು ಕರ್ನಾಟಕಕ್ಕೆ ಮಾಡಿದ ಅನ್ಯಾಯದ ವಿರುದ್ಧ ಕನ್ನಡಿಗರ ಪರವಾಗಿ ಧ್ವನಿ ಎತ್ತಲು "ದೆಹಲಿ ಚಲೋ"ವನ್ನು ಮಾಡಿ ಎಂದು ಸಲಹೆ ನೀಡಿದರು.
ಇದೆಲ್ಲ ಅವರ (ಬಿಜೆಪಿ) ನಾಟಕ. ಅವರು ರಾಜಕೀಯ ಲಾಭ ಪಡೆಯಲು ಅವಕಾಶ ಸಿಕ್ಕಲ್ಲೆಲ್ಲ ಅದಕ್ಕಾಗಿ ಧುಮುಕುತ್ತಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ವೈಜ್ಞಾನಿಕವಾಗಿ ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದರೆ ಏನು ತಪ್ಪು. ಕನ್ನಡದ ಖ್ಯಾತ ಸಾಹಿತಿ ನಿಸಾರ್ ಅಹ್ಮದ್ ಕೂಡ ಇದನ್ನು ಉದ್ಘಾಟಿಸಿದ್ದರು. ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸಿದ್ದು ಕೂಡ ಬಿಜೆಪಿಯೇ. ಆದರೆ, ಅವರು ಬರಲು ಸಾಧ್ಯವಾಗಲಿಲ್ಲ. ಬಿಜೆಪಿಯು ಕಲಾಂ ಮುಸ್ಲಿಂ ಆಗಿರುವುದರಿಂದ ಅಥವಾ ರಾಷ್ಟ್ರ, ಸಮಾಜ ಮತ್ತು ರಾಜ್ಯಕ್ಕೆ ಅವರ ಕೊಡುಗೆಗಳಿಗಾಗಿ ಅವರನ್ನು ಆಹ್ವಾನಿಸಿತೇ ಎಂದು ಪ್ರಶ್ನಿಸಿದರು.
Advertisement