ಧರ್ಮಸ್ಥಳ ಪ್ರಕರಣ: ಧಾರ್ಮಿಕ ಮುಖಂಡರಿಂದ ದೆಹಲಿಯಲ್ಲಿ ಅಮಿತ್ ಶಾ ಭೇಟಿ, NIA ತನಿಖೆಗೆ ಒತ್ತಾಯ

ರಾಜಶೇಖರಾನಂದ ಸ್ವಾಮೀಜಿ ಅವರ ಪ್ರಕಾರ, 'ಸನಾತನ ಸಂತ ನಿಯೋಗ' ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ವಿವಾದದ ಬಗ್ಗೆ ಚರ್ಚಿಸಿತು.
Religious heads meet Union Minister Amit Shah in Delhi, demand NIA probe
'ಸನಾತನ ಸಂತ ನಿಯೋಗ' ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ.
Updated on

ಮಂಗಳೂರು: 'ಸನಾತನ ಸಂತ ನಿಯೋಗ' ಬ್ಯಾನರ್ ಅಡಿಯಲ್ಲಿ ಕರ್ನಾಟಕದ ವಿವಿಧ ಮಠಗಳ ಮಠಾಧೀಶರು ಬುಧವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜಶೇಖರಾನಂದ ಸ್ವಾಮೀಜಿ ಅವರ ಪ್ರಕಾರ, 'ಸನಾತನ ಸಂತ ನಿಯೋಗ' ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ವಿವಾದದ ಬಗ್ಗೆ ಚರ್ಚಿಸಿತು.

ಗುರುವಾರ ದೆಹಲಿಯಿಂದ ಹಿಂದಿರುಗಿದ ನಂತರ ಪಿಟಿಐ ಜೊತೆ ಮಾತನಾಡಿದ ಸ್ವಾಮೀಜಿ, ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಸಂಪುಟ ಸಭೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಮಿತ್ ಶಾ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Religious heads meet Union Minister Amit Shah in Delhi, demand NIA probe
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಸೆಪ್ಟೆಂಬರ್‌ 6 ವರೆಗೆ SIT ವಶಕ್ಕೆ

ಧರ್ಮಸ್ಥಳ ಪ್ರಕರಣದ ಬಗ್ಗೆ ನಾವು ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇವೆ ಮತ್ತು ಅವರ ಭರವಸೆಯಿಂದ ನಮಗೆ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಒಳಗೆ ಮತ್ತು ಹೊರಗೆ ಕೆಲವು ಉತ್ತಮ ಸಂಬಂಧ ಹೊಂದಿರುವ ಸ್ಥಾಪಿತ ಹಿತಾಸಕ್ತಿಗಳು ಭಕ್ತರಲ್ಲಿ ಅಭದ್ರತೆ ಮತ್ತು ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಹಿಂದೂ ನಂಬಿಕೆ ಮತ್ತು ಧರ್ಮದ ದೇವಾಲಯಗಳಿಗೆ ಕೆಟ್ಟ ಹೆಸರು ತರಲು ಒಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ನಮ್ಮ ನಿಯೋಗ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿತು" ಎಂದು ಮಠಾಧೀಶರು ಹೇಳಿದ್ದಾರೆ.

"ವಿವಾದದ ಬಗ್ಗೆ ನಾವು NIA ತನಿಖೆಯನ್ನು ಕೋರಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com