ರಾಜ್ಯದಲ್ಲಿ ಹೆಚ್ಚುತ್ತಿರುವ ಹದಿಹರೆಯದವರ ಗರ್ಭಧಾರಣೆ ಪ್ರಕರಣ: ಕಠಿಣ ಕಾನೂನುಗಳ ಹೊರತಾಗಿಯೂ ಇನ್ನೂ ಅಸ್ತಿತ್ವದಲ್ಲಿ ಬಾಲ್ಯವಿವಾಹ!

ಅವಧಿಗೂ ಮುನ್ನ ಗರ್ಭಾವಸ್ಥೆಯು ಹದಿಹರೆಯದ ತಾಯಂದಿರಿಗೆ ತೀವ್ರವಾಗಿ ಅಪಾಯವನ್ನುಂಟುಮಾಡುತ್ತದೆ.
Casual Images
ಸಾಂದರ್ಭಿಕ ಚಿತ್ರಗಳು
Updated on

ಬೆಳಗಾವಿ: ಕರ್ನಾಟಕದ ಹಲವಾರು ಗ್ರಾಮೀಣ ಭಾಗಗಳು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿವೆ. ಇಂತಹ ಪ್ರದೇಶಗಳಲ್ಲಿ ಬೆಳಗಾವಿ ಜಿಲ್ಲೆ ಒಂದಾಗಿದೆ. ಕಠಿಣ ಕಾನೂನುಗಳ ಹೊರತಾಗಿಯೂ ಬಾಲ್ಯವಿವಾಹ ಇನ್ನೂ ವ್ಯಾಪಕವಾಗಿ ಅಸ್ತಿತ್ವದಲ್ಲಿದ್ದು, ಪ್ರತಿ ವರ್ಷ ನೂರಾರು ಯುವತಿಯರನ್ನು ಅಕಾಲಿಕ ತಾಯ್ತನಕ್ಕೆ ತಳ್ಳುತ್ತದೆ.

ಅವಧಿಗೂ ಮುನ್ನ ಗರ್ಭಾವಸ್ಥೆಯು ಹದಿಹರೆಯದ ತಾಯಂದಿರಿಗೆ ತೀವ್ರವಾಗಿ ಅಪಾಯವನ್ನುಂಟುಮಾಡುತ್ತದೆ. ತಾಯಿಯ ಮರಣ, ಅಕಾಲಿಕ ಜನನಗಳು, ಅಪೌಷ್ಟಿಕತೆ ಮತ್ತು ದೀರ್ಘಾವಧಿಯ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂದು ಆರೋಗ್ಯ ತಜ್ಞರ ಎಚ್ಚರಿಕೆಯಾಗಿದೆ. ಈ ಪರಿಸ್ಥಿತಿ ಕೇವಲ ವೈದ್ಯಕೀಯ ತುರ್ತುಸ್ಥಿತಿಯಲ್ಲ ಆದರೆ ಆಳವಾದ ಬೇರೂರಿರುವ ಸಾಮಾಜಿಕ ಬಿಕ್ಕಟ್ಟು ಆಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಬೆಳಗಾವಿಯಲ್ಲಿ 1,477 ಹದಿಹರೆಯದ ಗರ್ಭಿಣಿಯರು ಇರುವುದಾಗಿ ವರದಿಯಾಗಿದೆ. ಅನೇಕ ಪ್ರಕರಣಗಳು ವರದಿಯಾಗದೇ ಇರುವುದರಿಂದ ಅಥವಾ ಅಧಿಕೃತ ದಾಖಲೆ ತಲುಪುವ ಮೊದಲು ಕೊನೆಗೊಳ್ಳುವುದರಿಂದ ನೈಜ ಸಂಖ್ಯೆ ತುಂಬಾ ಹೆಚ್ಚಿರಬಹುದು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

2022-23 ರಿಂದ ಸೆಪ್ಟೆಂಬರ್ 4, 2025 ರವರೆಗೆ ಹುಕ್ಕೇರಿ ತಾಲೂಕು 353 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಥಣಿ (201), ರಾಯಬಾಗ (175), ಬೈಲಹೊಂಗಲ (172), ಖಾನಾಪುರ (143), ರಾಮದುರ್ಗ (118), ಸವದತ್ತಿ (102), ಗೋಕಾಕ (102), ಬೆಳಗಾವಿ (108) ಮತ್ತು ಚಿಕ್ಕೋಡಿ (101) ಪ್ರಕರಣಗಳು ದಾಖಲಾಗಿವೆ.

ಈ ಅಂಕಿಅಂಶಗಳು ಗ್ರಾಮೀಣ-ನಗರ ವಿಭಜನೆಯನ್ನು ಬಹಿರಂಗಪಡಿಸುತ್ತವೆ. ತಾಲ್ಲೂಕುಗಳಲ್ಲಿ ಆತಂಕಕಾರಿಯಾಗಿ ಹೆಚ್ಚಿನ ಸಂಖ್ಯೆಯ ಪ್ರಕಣರಣಗಳು ದಾಖಲಾಗಿದ್ದರೆ, ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಕರಣಗಳನ್ನು ವರದಿಯಾಗಿವೆ. ಹದಿಹರೆಯದ ತಾಯಂದಿರಲ್ಲಿ ಬಹುತೇಕರು ಶಾಲೆ ಬಿಟ್ಟವರು, ಬಡತನ ಮತ್ತು ಸಾಮಾಜಿಕ ಕಳಂಕವನ್ನು ಎದುರಿಸುತ್ತಿರುತ್ತಾರೆ. ಇದನ್ನು ಅವರ ಮಕ್ಕಳಿಗೂ ವರ್ಗಾಯಿಸುತ್ತಾರೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಕಾಗದದ ಮೇಲೆ ಉಳಿದ ಕಾನೂನು: ಬಾಲ್ಯವಿವಾಹ ನಿಷೇಧ ಕಾಯ್ದೆ 18 ವರ್ಷದೊಳಗಿನ ಹೆಣ್ಣುಮಕ್ಕಳ ವಿವಾಹಗಳನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಆದರೂ, ಅನೇಕ ಹಳ್ಳಿಗಳಲ್ಲಿ, ಪೋಷಕರ ಒತ್ತಡ, ಬಡತನ ಮತ್ತು ಸಂಪ್ರದಾಯವು ಕಾನೂನನ್ನು ಉಲ್ಲಂಘನೆಯಾಗುತ್ತಿದೆ. ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಆಗಾಗ್ಗೆ ಕಣ್ಣುಮುಚ್ಚಿ, ಪ್ರಕರಣಗಳನ್ನು "ಕುಟುಂಬದ ವಿಷಯಗಳು" ಎಂದು ವಜಾ ಗೊಳಿಸುತ್ತಾರೆ.

ಹುಕ್ಕೇರಿ ತಾಲೂಕಿನ ಬಸ್ಸಾಪುರದ ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು 15 ವರ್ಷದ ಬಾಲಕಿಯನ್ನು ವಿವಾಹವಾಗಿದ್ದರು. ಕೆಲ ತಿಂಗಳ ಹಿಂದೆ ಬಾಲಕಿ ಹೆರಿಗೆಯಾಗಿದ್ದು, ಮಾಧ್ಯಮಗಳ ಮಧ್ಯಪ್ರವೇಶದ ಬಳಿಕವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.

ಕಾನೂನನ್ನು ಕಠಿಣವಾಗಿ ಜಾರಿಗೊಳಿಸದ ಹೊರತು ಬಾಲ್ಯವಿವಾಹ ಮತ್ತು ಹದಿಹರೆಯದವರಲ್ಲಿ ಮದುವೆ ಮುಂದುವರೆಯಲಿದ್ದು, ಯುವಕರ ಜೀವನವನ್ನು ನಾಶಪಡಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com