ಕಾಂಗ್ರೆಸ್ ಮಾತ್ರ ಭಾರತವನ್ನು ಮುನ್ನಡೆಸಲು ಸಾಧ್ಯ ಎಂಬ ಕಟ್ಟುಕತೆಯನ್ನು ಮೋದಿ ಮುರಿದಿದ್ದಾರೆ: ಎಚ್‌.ಡಿ ದೇವೇಗೌಡ

ಭಾರತೀಯರಲ್ಲಿ ಸಾಂಸ್ಕೃತಿಕ ಗುರುತು ಮತ್ತು ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದರು.
Narendra Modi - HD Devegowda
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ 75ನೇ ಹುಟ್ಟುಹಬ್ಬದ ಶುಭಾಶಯ ಕೋರಿದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ, ಕಾಂಗ್ರೆಸ್ ಪಕ್ಷ ಮಾತ್ರ ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಉತ್ತಮ ಆಡಳಿತ ನೀಡುವ ಸಾಮರ್ಥ್ಯ ಹೊಂದಿದೆ ಎಂಬ ಕಟ್ಟುಕತೆಯನ್ನು ನರೇಂದ್ರ ಮೋದಿ ಛಿದ್ರಗೊಳಿಸಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.

ಭಾರತೀಯರಲ್ಲಿ ಸಾಂಸ್ಕೃತಿಕ ಗುರುತು ಮತ್ತು ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದರು.

'ನಿಮ್ಮ 75ನೇ ಹುಟ್ಟುಹಬ್ಬಕ್ಕೆ ನಾನು ಶುಭಾಶಯಗಳನ್ನು ಕೋರುತ್ತೇನೆ. ದೇವರು ಯಾವಾಗಲೂ ನಿಮ್ಮ ಪರವಾಗಿರಲಿ ಮತ್ತು ನಮ್ಮ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯಲು ನಿಮಗೆ ಶಕ್ತಿಯನ್ನು ನೀಡಲಿ. ಕಳೆದ 11 ವರ್ಷಗಳಲ್ಲಿ ನೀವು ನಮ್ಮ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದೀರಿ, ನೀವು ಸಾಮಾಜಿಕ-ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿದ್ದೀರಿ' ಎಂದು ಗೌಡರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಭಾರತದ ಜನರು ಇದನ್ನು ಪ್ರತಿ ತಿರುವು ಮತ್ತು ಪ್ರತಿ ಚುನಾವಣೆಯಲ್ಲೂ ಒಪ್ಪಿಕೊಂಡಿದ್ದಾರೆ. ಭಾರತವು ಒಂದು ದೊಡ್ಡ, ವೈವಿಧ್ಯಮಯ ಮತ್ತು ಸಂಕೀರ್ಣ ರಾಷ್ಟ್ರವಾಗಿದ್ದು, ಅದನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮತ್ತು ಶಾಂತವಾಗಿಡುವುದು ಸುಲಭದ ಸವಾಲಲ್ಲ ಎಂದು ಅವರು ಹೇಳಿದರು.

ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಮನಸ್ಥಿತಿ ಬದಲಾವಣೆಯಾಗಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷ ಮಾತ್ರ ಈ ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಉತ್ತಮ ಆಡಳಿತವನ್ನು ನೀಡಲು ಸಾಧ್ಯ ಎಂಬ ಮಿಥ್ಯೆಯನ್ನು ಎಚ್ಚರಿಕೆಯಿಂದ ಬೆಳೆಸಲಾಗಿತ್ತು ಎಂದು ಹೇಳಿದರು.

Narendra Modi - HD Devegowda
ಮೋದಿ@75: ಅಕ್ಟೋಬರ್ 2 ರವರೆಗೆ ಬಿಜೆಪಿ 'ಸೇವಾ ಪಾಕ್ಷಿಕ' ಅಭಿಯಾನ; ರಾಷ್ಟ್ರಪತಿ ಸೇರಿ ರಾಜಕೀಯ ಗಣ್ಯರಿಂದ ಪ್ರಧಾನಿಗೆ ಶುಭಾಶಯ

'ಆದರೆ ನೀವು ಅದನ್ನು ಶಾಶ್ವತವಾಗಿ ಗಾಳಿಗೆ ತೂರಿದ್ದೀರಿ. ಈ ರಾಷ್ಟ್ರವು ಶ್ರೀಮಂತ ಪ್ರತಿಭೆಗಳನ್ನು ಹೊಂದಿದೆ ಎಂದು ನೀವು ಸಾಬೀತುಪಡಿಸಿದ್ದೀರಿ. ಅಂತವರು ಹೆಚ್ಚಿನ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಯಾವಾಗಲೂ ಉತ್ತಮ ಪರಿಹಾರಗಳನ್ನು ಹುಡುಕುತ್ತಾರೆ. ನೀವು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಸಾಧ್ಯತೆಗಳನ್ನು ತೆರೆದಿದ್ದೀರಿ ಮತ್ತು ಅದರ ಉಜ್ವಲ ಭವಿಷ್ಯದಲ್ಲಿ ಅಚಲ ನಂಬಿಕೆಯನ್ನು ಇರಿಸಿದ್ದೀರಿ' ಎಂದು ಅವರು ಹೇಳಿದರು.

ನೀವು ನಮ್ಮ ನಾಗರಿಕತೆಯ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಜಗತ್ತಿನ ಮುಂದೆ ಪದೇ ಪದೆ ಪ್ರದರ್ಶಿಸಿದ್ದೀರಿ. ಈ ಹೊಸ ವಿಶ್ವಾಸವು ರಾಷ್ಟ್ರೀಯ ಪುನರುಜ್ಜೀವನಕ್ಕೆ ಕಾರಣವಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರತವನ್ನು ಊಹಿಸಲಾಗದ ಎತ್ತರಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಮೋದಿಯವರು ಭಾರತದ ಇತ್ತೀಚಿನ ಮಿಲಿಟರಿ ಸಂಘರ್ಷಗಳು ಮತ್ತು ಆರ್ಥಿಕ ಸವಾಲುಗಳನ್ನು ರಾಷ್ಟ್ರೀಯ ಚಿಂತನೆಯನ್ನು ಬದಲಾಯಿಸುವ ಅವಕಾಶಗಳಾಗಿ ಕೌಶಲ್ಯದಿಂದ ಪರಿವರ್ತಿಸಿದ್ದಾರೆ ಎಂದಿದ್ದಾರೆ.

'ಭಾರತವು ಇನ್ನು ಮುಂದೆ ಒಪ್ಪಂದಗಳು, ನೆರವು ಮತ್ತು ರಿಯಾಯಿತಿಗಳಿಗಾಗಿ ಪಾಶ್ಚಿಮಾತ್ಯ ದೇಶಗಳ ಬಳಿಗೆ ಓಡಬೇಕಾಗಿಲ್ಲ, ಬದಲಿಗೆ ಸಮಾನವಾಗಿ ಮಾತುಕತೆ ನಡೆಸುತ್ತಿದೆ. ಅದು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಅತ್ಯಂತ ದೊಡ್ಡ ಆದ್ಯತೆಯನ್ನಾಗಿ ಮಾಡುವುದರ ಜೊತೆಗೆ ತನ್ನ ನಿಯಮಗಳು ಮತ್ತು ಷರತ್ತುಗಳನ್ನು ಸದ್ದಿಲ್ಲದೆ ನಿಗದಿಪಡಿಸುತ್ತಿದೆ. ನಿಮ್ಮ 'ರಾಷ್ಟ್ರ ಮೊದಲು' ಎಂಬ ಘೋಷಣೆಯು ಖಾಲಿಯಲ್ಲ' ಎಂದು ಅವರು ಹೇಳಿದರು.

ಮೋದಿ ಅವರ ಸಾಧನೆಗಳಿಗಾಗಿ ಅವರನ್ನು ಅಭಿನಂದಿಸುತ್ತಾ, 'ಸರ್ವಶಕ್ತನಾದ ಭಗವಂತ ನಿಮಗೆ ಉತ್ತಮ ಆರೋಗ್ಯವನ್ನು ನೀಡಲಿ ಮತ್ತು ನೀವು ಶತಾಯುಷಿಯಾಗುವಂತೆ ನೋಡಿಕೊಳ್ಳಲಿ' ಎಂದು ಹಾರೈಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com