Dharmasthala Case: ಸೌಜನ್ಯಾ ಮಾವ ವಿಠಲ್​ ಗೌಡ ವಿರುದ್ಧ ದೂರು ದಾಖಲು

ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪವಿತ್ರ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕುರಿತು ಭಕ್ತಿಯ ಬದಲುತ ಅಸ್ಥಿಪಂಜರಗಳು, ಅಪರಾಧಗಳು ಮತ್ತು ಪಿತೂರಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
File photo
ಸಂಗ್ರಹ ಚಿತ್ರ
Updated on

ಮಂಗಳೂರು: 2012 ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯಾಳ ಮಾವ ವಿಠಲ್ ಗೌಡ ವಿರುದ್ಧ ಧರ್ಮಸ್ಥಳದ ಗ್ರಾಮಸ್ಥರಿಂದ ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ದೂರು ನೀಡಿದ್ದಾರೆ.

ಧರ್ಮಸ್ಥಳ ಗ್ರಾಮದ ನಿವಾಸಿ ಸಂದೀಪ್ ರೈ ಎಂಬುವವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ವಿಠಲ್ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪವಿತ್ರ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕುರಿತು ಭಕ್ತಿಯ ಬದಲುತ ಅಸ್ಥಿಪಂಜರಗಳು, ಅಪರಾಧಗಳು ಮತ್ತು ಪಿತೂರಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಧರ್ಮಸ್ಥಳದ ಶಾಂತಿ ಮತ್ತು ಪಾವಿತ್ರ್ಯವನ್ನು ಹಾಳು ಮಾಡಲಾಗುತ್ತಿದೆ. ಎಸ್‌ಐಟಿಯಿಂದ ಬಂಗ್ಲೆಗುಡ್ಡೆಯಲ್ಲಿ ಎರಡು ಬಾರಿ ಮಹಜರುಗಾಗಿ ಕರೆದೊಯ್ಯಲ್ಪಟ್ಟ ವ್ಯಕ್ತಿಗಳಲ್ಲಿ ಒಬ್ಬರಾದ ವಿಠಲ್ ಗೌಡ, ತನಿಖೆ ನಡೆಯುತ್ತಿರುವ ಸಮಯದಲ್ಲಿ ಅಸ್ಥಿಪಂಜರಗಳು ಮತ್ತು ಮಾಟಮಂತ್ರದ ಬಗ್ಗೆ ಪದೇ ಪದೇ ಸಂವೇದನಾಶೀಲ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ವಿಠಲ ಗೌಡ ಅವರು ಎಸ್ಐಟಿ ವಿಚಾರಣೆ ಮುಗಿಸಿ ಹೊರಬಂದ ನಂತರ ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡಿ ವಿಡಿಯೋಗಳನ್ನು ಹರಡಿದ್ದಾರೆ. ಈ ವಿಡಿಯೋಗಳಲ್ಲಿ ಅವರು ತನಿಖೆಯ ವಿವರಗಳನ್ನು ಬಹಿರಂಗಪಡಿಸಿ, ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ. ಎಸ್ಐಟಿ ಯಾವುದೇ ಮಾಹಿತಿ ನೀಡದಿರುವ ಸಂದರ್ಭದಲ್ಲೂ, ವಿಠಲ ಗೌಡ ಅವರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ತನಿಖೆಯ ಹಾದಿಯನ್ನು ತಪ್ಪಿಸಲು ಬಯಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

File photo
ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆ ಕಾಡಿನಲ್ಲಿ ತಲೆಬುರುಡೆ ಪತ್ತೆ; ವಾಮಾಚಾರ ಶಂಕೆ?

ವಿಠಲ ಗೌಡ ಅವರು ತನಿಖೆಯ ಹಾದಿಯನ್ನು ತಪ್ಪಿಸಲು ಷಡ್ಯಂತ್ರ ರಚಿಸಿದ್ದಾರೆ. ಕೆಲ ವ್ಯಕ್ತಿಗಳೊಂದಿಗೆ ಷಡ್ಯಂತ್ರ ರಚಿಸಿ ಈ ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ. ಇದರಿಂದಾಗಿ, ತನಿಖಾ ಹಂತದಲ್ಲಿ ದಾರಿ ತಪ್ಪುವ ಅಪಾಯ ಉಂಟಾಗಿದೆ, ಬಂಗ್ಲೆಗುಡ್ಡೆಯಲ್ಲಿ ಹಲವು ಅಸ್ಥಿಪಂಜರಗಳು, ತಲೆಬುರುಡೆಗಳನ್ನು ನೋಡಿದ್ದೇನೆಂದು ಹೇಳುತ್ತಿರುವ ವಿಠಲ್ ಗೌಡ ಅವರು ಪೊಲೀಸರಿಗೆ ವರದಿ ಮಾಡಿಲ್ಲ. ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ಹೇಳುತ್ತಾರೆ. ಆದರೆ, ಅದನ್ನು ಪೊಲೀಸರಿಗೆ ನೀಡಿಲ್ಲ. ಬಂಗ್ಲೆಗುಡ್ಡೆಯಿಂದ ತಲೆಬುರುಡೆಗಳನ್ನು ವೈಯಕ್ತಿಕವಾಗಿ ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ, ಈ ಸ್ಥಳಕ್ಕೆ ಹೋಗುವಂತೆ ಅವರಿಗೆ ಮಾರ್ಗದರ್ಶನ ನೀಡಿದವರು ಯಾರು, ಅವರ ನಿಜವಾದ ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಹೀಗಾಗಿ ವಿಠಲ್​ ಗೌಡ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸಾಕ್ಷಿ-ದೂರುದಾರ,. ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ ಸೇರಿದಂತೆ ಇತರರು, ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್‌ನೊಂದಿಗೆ ವಿಠಲ್ ಗೌಡ ಸಂಪರ್ಕ ಕುರಿತು ತನಿಖೆ ಮಾಡಬೇಕೆಂದು ಸಂದೀಪ್ ರೈ ಎಸ್‌ಐಟಿಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com