
ಬೆಂಗಳೂರು: ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಬ್ಯಾಂಕ್ ಗ್ರಾಹಕರೇ ಹುಷಾರಾಗಿರಿ. ಸೈಬರ್ ವಂಚಕರು, ನಕಲಿ ವೆಬ್ ಸೈಟ್ ಅಥವಾ ಲಿಂಕ್ ಗಳ ಮೂಲಕ ಬಹುಮಾನ, ಕ್ಯಾಶ್‌ಬ್ಯಾಕ್ ಆಫರ್‌ಗಳೊಂದಿಗೆ ವಂಚನೆಗೆ ಬೀಳಿಸುತ್ತಿದ್ದಾರೆ.
ಈ ಕುರಿತು TNIE ಗೆ ಜೊತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸೈಬರ್ ವಂಚಕರು ಫೋನ್ ಕಾಲ್ ಮತ್ತು SMS ಅಥವಾ WhatsApp ಮೂಲಕ ಅಧಿಕೃತ ಬ್ಯಾಂಕಿಂಗ್ ಆ್ಯಪ್ ಅಥವಾ ವೆಬ್‌ಸೈಟ್‌ಗಳಲ್ಲಿ ದುರುದ್ದೇಶಪೂರಿತ APK ಫೈಲ್‌ಗಳನ್ನು ಕಳುಹಿಸುವ ಮೂಲಕ ವಂಚಿಸುತ್ತಾರೆ ಎಂದು ತಿಳಿಸಿದರು.
ಸೈಬರ್ ವಂಚರು ಹೇಗೆಲ್ಲಾ ಆಮಿಷವೊಡ್ಡುತ್ತಾರೆ?
ಬಳಸದ ಕಾರ್ಡ್ ಗಳಿಗೆ ಬಹುಮಾನ ನೀಡುತ್ತೇವೆ ಅಥವಾ ಹಬ್ಬದ ಕ್ಯಾಶ್‌ಬ್ಯಾಕ್ ಸಿಕ್ಕಿದೆ ಎಂದು ವಂಚರು ಆಮಿಷದ ವಂಚನೆಗೆ ಬೀಳಿಸುತ್ತಾರೆ. ಇದಕ್ಕಾಗಿ ಪ್ರಮುಖ ಸಾರ್ವಜನಿಕ ವಲಯ ಮತ್ತು ಖಾಸಗಿ ಬ್ಯಾಂಕ್‌ಗಳು ಮತ್ತಿತರ ಪ್ರಮುಖ ಹಣಕಾಸು ಸಂಸ್ಥೆಗಳ ಹೆಸರನ್ನು ಅವರು ಬಳಸುತ್ತಾರೆ. ಆ ಲಿಂಕ್ ಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ದುರುದ್ದೇಶಪೂರಿತ ಫೈಲ್‌ಗಳು ದೂರದಿಂದಲೇ ವಂಚಕರು ನಮ್ಮ ಬ್ಯಾಂಕ್ ಖಾತೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ದೋಚುತ್ತಾರೆ.
ನಕಲಿ APP, LINKS ಬಗ್ಗೆ ಇರಲಿ ಜಾಗ್ರತೆ:
ಅಲ್ಲದೇ ಬ್ಯಾಂಕ್ ಅಧಿಕಾರಿಗಳ ನೆಪದಲ್ಲಿ ಗ್ರಾಹಕರಿಗೆ ಫೋನ್ ಮಾಡುವ ವಂಚಕರು, ರಿವಾರ್ಡ್ ಪಾಯಿಂಟ್ ನೀಡುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಗಳು ಮತ್ತು OTP ಗಳ ವಿವರಗಳನ್ನು ಪಡೆಯುತ್ತಾರೆ ಎಂದು ಅಧಿಕಾರಿ ಹೇಳಿದರು.
ಸಾಮಾನ್ಯವಾಗಿ ಜನರು ಹೆಚ್ಚಾಗಿ ಆಕರ್ಷಕ ಕೊಡುಗೆಗಳಿಗೆ ಪ್ರತಿಕ್ರಿಯಿಸುತ್ತಾರೆ. ಅಂತವರನ್ನು ವೈಯಕ್ತಿಕ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ನಕಲಿ ಆ್ಯಪ್ ಅಥವಾ ದುರುದ್ದೇಶಪೂರಿತ ಲಿಂಕ್ ಕ್ಲಿಕ್ ಮಾಡಿದ ಅನೇಕ ಮಂದಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಯಾವುದೇ ಕಾರಣಕ್ಕೂ ಇದನ್ನು ಮಾಡಲೇಬೇಡಿ:
ರಿವಾರ್ಡ್ ಪಾಯಿಂಟ್ ಬ್ಯಾಲೆನ್ಸ್ ಅಥವಾ ಅಧಿಕೃತ ಬ್ಯಾಂಕ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಲು ಮತ್ತು ಅಧಿಕೃತ ಬ್ಯಾಂಕ್ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಅಧಿಕಾರಿ ಜನರಿಗೆ ಮನವಿ ಮಾಡಿದ್ದಾರೆ. ಒಟಿಪಿಗಳು, ಎಟಿಎಂ ಪಿನ್‌ಗಳು, ಸಿವಿವಿ ಸಂಖ್ಯೆಗಳು ಅಥವಾ ಇತರ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ ಮತ್ತು ಯಾವುದೇ ಆನ್‌ಲೈನ್ ವಂಚನೆಗಾಗಿ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸುವ ಮೂಲಕ ವರದಿ ಮಾಡಬಹುದು ಎಂದು ಅವರು ಸಲಹೆ ನೀಡಿದರು.
Advertisement