ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಸುರಕ್ಷತೆಗೆ ಸರ್ಕಾರ ಆದ್ಯತೆ: ಜಂಬೂ ಸವಾರಿ ಆಸನ ಸಾಮರ್ಥ್ಯ ಇಳಿಕೆಗೆ ನಿರ್ಧಾರ..!

ವಿಜಯದಶಮಿ ದಿನದಂದು ನಡೆಯುವ ದಸರಾ ಜಂಬೂ ಸವಾರಿಗೆ ಅತೀ ಹೆಚ್ಚು ಜನರು ಆಗಮಿಸುತ್ತಾರೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತೊಯ್ಯುವ ಆನೆಯನ್ನು ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ.
jambu savari
ದಸರಾ ಜಂಬೂ ಸವಾರಿ ಸಂಗ್ರಹ ಚಿತ್ರ
Updated on

ಮೈಸೂರು: ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದು, ಇದರಂತೆ ಅಕ್ಟೋಬರ್ 2 ರಂದು ಮೈಸೂರು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯ ಆಸನ ಸಾಮರ್ಥ್ಯವನ್ನು 65,000 ರಿಂದ 40,000 ಕ್ಕೆ ಇಳಿಕೆ ಮಾಡಲು ನಿರ್ಧರಿಸಿದೆ.

ಈ ವರ್ಷ ಕನಿಷ್ಠ 25,000 ಆಸನಗಳನ್ನು ಕಡಿಮೆ ಮಾಡಲಾಗುವುದು,. ದೊಡ್ಡ ಸಭೆಗಳನ್ನು ನಿರ್ವಹಿಸುವ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಪಾಸ್‌ಗಳನ್ನೂ ಕೂಡ ಕಡಿಮೆ ಮುದ್ರಿಸಲಾಗಿದೆ ಎಂದು ದಸರಾ ಮೆರವಣಿಗೆ ಉಪಸಮಿತಿ ಸದಸ್ಯರು ಮತ್ತು ಮೈಸೂರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಅಧಿಕಾರಿಗಳ ಮತ್ತು ದಸರಾ ಉಪಸಮಿತಿಯ ಸಭೆ ನಡೆಸಿ, ದಸರಾ ಹಬ್ಬ ಮತ್ತು ಸುರಕ್ಷಿತಾಕ್ರಮ ಅಗತ್ಯ ಕುರಿತು ಸೂಚನೆಗಳನ್ನು ನೀಡಿದ್ದಾರೆ.

ಕಳೆದ ವರ್ಷ ಸುಮಾರು 60,000 ಇದ್ದ ಆಸನ ವ್ಯವಸ್ಥೆಯನ್ನು ಈ ವರ್ಷ 45,000 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸಲಾಗುವುದು ಎಂದು ಸಚಿವರು ದೃಢಪಡಿಸಿದ್ದಾರೆ.

ವಿಜಯದಶಮಿ ದಿನದಂದು ನಡೆಯುವ ದಸರಾ ಜಂಬೂ ಸವಾರಿಗೆ ಅತೀ ಹೆಚ್ಚು ಜನರು ಆಗಮಿಸುತ್ತಾರೆ. ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಹೊತ್ತೊಯ್ಯುವ ಆನೆಯನ್ನು ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ. ಪ್ರತಿ ವರ್ಷ ಪಾಸ್‌ಗಳ ಅವ್ಯವಸ್ಥೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಪಾಸ್‌ಗಳನ್ನು ಮುದ್ರಿಸಲಾಗುತ್ತಿದೆ, ಲಾಬಿ ನಡೆಸಲಾಗುತ್ತದೆ ಎಂಬ ದೂರುಗಳು ಕೇಳಿಬರುವ ಹಿನ್ನೆಲೆಯಲ್ಲಿ ವರ್ಷ ಉಪಸಮಿತಿಯು ಆಸನ ಲಭ್ಯತೆ ಇರುವಷ್ಟು ಮಾತ್ರ ಮುದ್ರಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

jambu savari
ಮೈಸೂರು ದಸರಾ ಉದ್ಘಾಟನೆ: ಚಾಮುಂಡಿ ದೇವಿಗೆ ಸಾಹಿತಿ ಬಾನು ಮುಷ್ತಾಕ್ ಪುಷ್ಪಾರ್ಚನೆ

ಏತನ್ಮಧ್ಯೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗ ಮದ್ಯೆ ಖಾಕಿ ಸರ್ಪಗಾವಲು ಹಾಕಲಾಗಿದೆ.

ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದ್ದು, ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿರುವ ಖಾಕಿ ಪಡೆ, ಚಾಮುಂಡಿ ಬೆಟ್ಟಕ್ಕೆ ಪ್ರವೇಶಿಸುವವರ ತಪಾಸಣೆ ನಡೆಸುತ್ತಿದೆ.

ವಿಐಪಿ ಹಾಗೂ ವಿವಿಐಪಿ ಸಂಚಾರ ಇರುವ ಕಾರಣ ಬೈಕ್​ಗಳನ್ನೂ ಬಿಡುತ್ತಿಲ್ಲ. ಓರ್ವ ಡಿಸಿಪಿ, ಇಬ್ಬರು ಎಸಿಪಿ ಸಂಚಾರಿ ಪೊಲೀಸರು ಸೇರಿದಂತೆ ಕೆ.ಎಸ್.ಆರ್.ಪಿ ಹಾಗೂ ಡಿ.ಆರ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಿ ನಿಯೋಜನೆ ಮಾಡಲಾಗಿದೆ.

ಹಬ್ಬದ ಸಮಯದಲ್ಲಿ ಎಲ್ಲಾ ಪಾರಂಪರಿಕ ಕಟ್ಟಡಗಳ ಬಾಲ್ಕನಿಗಳು ಮತ್ತು ಮೇಲ್ಛಾವಣಿಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮೆರವಣಿಗೆಯನ್ನು ವೀಕ್ಷಿಸಲು ಯಾವುದೇ ವ್ಯಕ್ತಿ ಅಥವಾ ಗುಂಪು ಪಾರಂಪರಿಕ ರಚನೆಗಳ ತುದಿಗೆ ಹತ್ತಲು ಅವಕಾಶ ನೀಡಬಾರದು ಎಂದು ಸೀಮಾ ಲಾಟ್ಕರ್ ಅವರು ಆದೇಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com