
ಹಾಸನ: ಹಾಸನ ಜಿಲ್ಲಾ ಆಸ್ಪತ್ರೆ ವೈದ್ಯರು ಮಹಾ ಎಡವಟ್ಟೊಂದನ್ನು ಮಾಡಿದ್ದು, ಮಹಿಳೆ ಒಬ್ಬರ ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ
ಚಿಕ್ಕಮಗಳೂರು ಜಿಲ್ಲೆ ಬೂಚನಹಳ್ಳಿ ಜ್ಯೋತಿ ಎಂಬುವರು ಎರಡು ವರ್ಷದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಕಾಲು ನೋವು ಪುನಃ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿಮ್ಸ್‌ನ ಡಾ.ಸಂತೋಷ್ ಅವರ ಬಳಿ ತೋರಿಸಿದ್ದರು.
ಸೆ.22 ರಂದು ಡಾ.ಸಂತೋಷ್ ಮತ್ತು ಡಾ.ಅಜಿತ್ ಎಂಬುವರು ಶಸ್ತ್ರಚಿಕಿತ್ಸೆ ಮಾಡುವ ವೇಳೆ ಬಲಗಾಲಿನ ಶಸ್ತ್ರಚಿಕಿತ್ಸೆಗೆ ಮುಂದಾದರು ಆ ಬಳಿಕ ತಪ್ಪಿನ ಅರಿವಾಗಿ ಎಡಕಾಲಿನ ರಾಡ್ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಬಲಗಾಲಿಗೂ ಮತ್ತು ಎಡಕಾಲಿಗೂ ಬ್ಯಾಂಡೇಜ್ ಹಾಕಲಾಗಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿದರು.
ಎಡಗಾಲಿನ ಬದಲು ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಅಚಾತುರ್ಯ ಆರೋಪ ಸಂಬಂಧ ತನಿಖೆಗಾಗಿ ಹಿಮ್ಸ್‌ನ ಪ್ರೊಪೆಸರ್ ಒಳಗೊಂಡ ಸಮಿತಿ ರಚಿಸಲಾಗಿದೆ.
ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಕೆಡಿಪಿ ಸಭೆಯಲ್ಲಿ ವೈದ್ಯರ ಪ್ರಮಾದದ ಬಗ್ಗೆ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುವ ಇಂತಹ ನಿರ್ಲಕ್ಷ್ಯದಿಂದ ಬಡ ರೋಗಿಗಳು ಎಲ್ಲಿಗೆ ಹೋಗಬೇಕು? ಜವಾಬ್ದಾರಿ ಬೇಡವೇ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಫ್ರೊಪೆಸರ್ ಒಳಗೊಂಡ ತನಿಖಾ ತಂಡ ರಚಿಸಲಾಗಿದ್ದು, ತುರ್ತು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ವೈದ್ಯಕೀಯ ಅಕ್ಷಕ ರಾಘವೇಂದ್ರ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಬಲಗಾಲು ಗಾಯವಾಗಿದ್ದು, ಓಡಾಡಲು ಸಮಸ್ಯೆ ಇಲ್ಲ, ಆದರೂ ಲೋಪದ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದರು. ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ ಮಾತನಾಡಿ,ʻಸ್ವಯಂ ಪ್ರೇರಿತವಾಗಿ ತನಿಖೆಗೆ ಸೂಚಿಸಿದ್ದು, ಡಾ.ಶ್ರೀರಂಗ ನೇತೃತ್ವದ ಸಮಿತಿ ವರದಿ ನೀಡಿದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದರು.
Advertisement