ಯಾವುದೇ ಭಾಷೆ ನಶಿಸಿ ಹೋಗಬಾರದು: ಡಾ. ಪುರುಷೋತ್ತಮ ಬಿಳಿಮಲೆ

ಭಾರತದಲ್ಲಿ ಕೆಲವು ಭಾಷೆಗಳು ನಶಿಸಿ ಹೋಗುತ್ತಿವೆ. ಅದಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿವೆ. ಈ ನಿರ್ಣಾಯದ ಸಮಯದಲ್ಲಿ ಬಹುಭಾಷಾ ಸಾಹಿತ್ಯ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ.
Purushottama Bilimale
ಪುರುಷೋತ್ತಮ ಬಿಳಿಮಲೆ
Updated on

ಮಂಗಳೂರು: ಎಲ್ಲಾ ಭಾಷೆಗಳು ಮಾನವೀಯತೆಯ ಪ್ರಗತಿಗೆ ಅವಿಭಾಜ್ಯ ಅಂಗವಾಗಿದ್ದು, ನಮ್ಮ ದೇಶದಲ್ಲಿ ಯಾವುದೇ ಭಾಷೆ ನಶಿಸಿ ಹೋಗಲು ಬಿಡಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಂಗಳವಾರ ಹೇಳಿದರು.

ಮಂಗಳೂರು ದಸರಾ ಪ್ರಯುಕ್ತ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರದಲ್ಲಿ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳವಾರ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಕೆಲವು ಭಾಷೆಗಳು ನಶಿಸಿ ಹೋಗುತ್ತಿವೆ. ಅದಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿವೆ. ಈ ನಿರ್ಣಾಯದ ಸಮಯದಲ್ಲಿ ಬಹುಭಾಷಾ ಸಾಹಿತ್ಯ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ. ಇಂತಹ ಬಹುಭಾಷಾ ಗೋಷ್ಠಿಗಳಿಂದ ಭಾಷೆಗಳು ನಶಿಸಿ ಹೋಗದಂತೆ ತಡೆಯಲು ಸಾಧ್ಯವಿದೆ ಎಂದು ಹೇಳಿದರು.

ಪುರುಷೋತ್ತಮ ಬಿಳಿಮಲೆ ಅವರ ಈ ಹೇಳಿಕೆಗೆ ಕ್ಷೇತ್ರ ಖಜಾಂಚಿ ಪದ್ಮರಾಜ್ ಆರ್. ಅವರೂ ಧ್ವನಿಗೂಡಿಸಿದರು. ದಸರಾ ಕೇವಲ ಧಾರ್ಮಿಕ ಆಚರಣೆಗಳನ್ನು ಮೀರಿ ನಮ್ಮ ಕಲಾತ್ಮಕ ಮತ್ತು ಸಾಹಿತ್ಯ ಪರಂಪರೆಯ ಆಚರಣೆಯಾಗಿ ವಿಕಸನಗೊಳ್ಳಬೇಕು ಎಂದು ಒತ್ತಾಯಿಸಿದರು.

Purushottama Bilimale
ಕನ್ನಡೇತರರಿಗೆ Basic ಕನ್ನಡ ಕಲಿಸಲು 100 ಕಲಿಕಾ ಕೇಂದ್ರಗಳ ಸ್ಥಾಪನೆ: ಪುರುಷೋತ್ತಮ ಬಿಳಿಮಲೆ

ಈ ಸಂದರ್ಭದಲ್ಲಿ, ಆಯ್ದ ಕವಿತೆಗಳ ಸಂಕಲನವನ್ನು ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಅವರು ಅನಾವರಣಗೊಳಿಸಿದರು.

ಮನೋಜ್ ಕುಮಾರ್ ಶಿಬಾರ್ಲ (ಕನ್ನಡ), ಗೀತಾ ಲಕ್ಷ್ಮೀಶ ಶೆಟ್ಟಿ (ತುಳು) ಜೊಸ್ಸಿಪಿಂಟೋ ಕಿನ್ನಿಗೋಳಿ ಮತ್ತು ವೆಂಕಟೇಶ್ ನಾಯಕ್ (ಕೊಂಕಣಿ), ಹಂಝ ಮಲಾರ್ (ಬ್ಯಾರಿ), ಬಿ.ಮುರಾರಿ ತಂತ್ರಿ (ಸಂಸ್ಕೃತ), ವಿನೋದ್ ಮೂಡಗದ್ದೆ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಡಾ. ಅಣ್ಣಯ್ಯ ಕುಲಾಲ (ಕುಂದಗನ್ನಡ), ಕವಿತಾ ಅಡೂರು (ಶಿವಳ್ಳಿ ತುಳು), ಡಾ. ಸುರೇಶ್ ನೆಗಳಗುಳಿ (ಹವ್ಯಕ) ಕವನಗಳನ್ನು ವಾಚಿಸಿದರು.

ತುಳು ಕವಿಗೋಷ್ಠಿಯ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಕಾವ್ಯದ ಕರಕುಶಲತೆಯನ್ನು ಕೃಷಿಗೆ ಹೋಲಿಸಿದರು, ಕವಿತೆಗಳು ಓದುವ ಉತ್ಸಾಹವನ್ನು ಬೆಳೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com