ಬೆಂಗಳೂರಿನ ರಸ್ತೆಗಳು 'ಅಸುರಕ್ಷಿತ'; ಸಿದ್ದರಾಮಯ್ಯ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌‌ಕೆ ಅತೀಕ್‌!

ನಗರದಾದ್ಯಂತ ರಸ್ತೆ ಸ್ಥಿತಿಯ ಬಗ್ಗೆ ಆಕ್ರೋಶಗಳು ವ್ಯಕ್ತವಾದ ನಂತರ ಸರ್ಕಾರವು ಗುಂಡಿಗಳನ್ನು ಮುಚ್ಚಲು ಪ್ರಾರಂಭಿಸಿತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಸ್ತೆಗಳ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
Siddaramaiah - LK Atheeq
ಸಿದ್ದರಾಮಯ್ಯ - ಎಲ್‌‌ಕೆ ಅತೀಕ್‌
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್, ಬೆಂಗಳೂರಿನ 'ಅಸುರಕ್ಷಿತ' ಮತ್ತು 'ಉಬ್ಬುಗಳು' ಇರುವ ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ಟೀಕಿಸಿದ್ದಾರೆ.

ಈ ಕುರಿತು 'ಎಕ್ಸ್' ನಲ್ಲಿನ ಪೋಸ್ಟ್‌ನಲ್ಲಿ ಅತೀಕ್, 'ನಗರದ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ ಬೈಕ್ ಸವಾರಿ ಮಾಡುತ್ತಿದ್ದಾಗ, ಕಳಪೆ ಪ್ಯಾಚ್ ವರ್ಕ್‌ನಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಅಸುರಕ್ಷಿತವಾಗಿರುವ ರಸ್ತೆಗಳು ಕಂಡುಬಂದವು' ಎಂದಿದ್ದಾರೆ.

'ಗುಣಮಟ್ಟದ ಉಪಕರಣಗಳೊಂದಿಗೆ ಸಣ್ಣಪುಟ್ಟ ದುರಸ್ತಿಗಳು' ರಸ್ತೆಗಳನ್ನು ಸುಗಮ ಮತ್ತು ಜನರಿಗೆ ಸುರಕ್ಷಿತವಾಗಿಸಬಹುದು. ರಸ್ತೆಗಳನ್ನು ಸರಿಪಡಿಸಲು ನಗರವು ತ್ವರಿತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬಹುದು' ಎಂದು ಅವರು ಸಲಹೆ ನೀಡಿದ್ದಾರೆ.

'ವೈಯಕ್ತಿಕ ಕಾರಣಗಳನ್ನು' ಉಲ್ಲೇಖಿಸಿ ಜೂನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಅತೀಕ್ ರಾಜೀನಾಮೆ ನೀಡಿದ್ದರು. ಆದರೆ ಬೆಂಗಳೂರು ವ್ಯಾಪಾರ ಕಾರಿಡಾರ್‌ನ ಅಧ್ಯಕ್ಷ ಸ್ಥಾನವನ್ನು ಮತ್ತು ಪೆರಿಫೆರಲ್ ರಿಂಗ್ ರಸ್ತೆಯ ಕೆಲಸವನ್ನು ಮುಂದುವರೆಸಿದರು.

Siddaramaiah - LK Atheeq
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆಗಳಿಗೆ ನೀವೇ ಕಾರಣ: BJP ವಿರುದ್ಧ CM-DCM ವಾಗ್ದಾಳಿ

ಬೆಂಗಳೂರಿನಲ್ಲಿ ಮೂಲಸೌಕರ್ಯಗಳು ಕಳಪೆಯಾಗಿವೆ, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಮತ್ತು ಸಂಚಾರ ದಟ್ಟಣೆ ಹೆಚ್ಚಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ತಿಂಗಳ ಆರಂಭದಲ್ಲಿ, ಗೂಗಲ್‌ನ ಬೆಂಗಳೂರು ಕಚೇರಿಯ ಹೊರಗಿನ ರಸ್ತೆ ಮತ್ತು ಪಾದಚಾರಿ ಮಾರ್ಗದ ಶಿಥಿಲ ಸ್ಥಿತಿಯನ್ನು ತೋರಿಸಿರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ನಿವಾಸಿಗಳು ಸರ್ವಿಸ್ ರಸ್ತೆಗಳಲ್ಲಿ ಬೃಹತ್ ಕುಳಿಗಳು, ಅತಿಕ್ರಮಣಗೊಂಡ ಪಾದಚಾರಿ ಮಾರ್ಗಗಳು ಮತ್ತು ಸುರಕ್ಷಿತವಾಗಿ ನಡೆಯಲು ಸ್ಥಳದ ಕೊರತೆಯನ್ನು ತೋರಿಸಿದ್ದರು.

ನಗರದಾದ್ಯಂತ ರಸ್ತೆ ಸ್ಥಿತಿಯ ಬಗ್ಗೆ ಆಕ್ರೋಶಗಳು ವ್ಯಕ್ತವಾದ ನಂತರ ಸರ್ಕಾರವು ಗುಂಡಿಗಳನ್ನು ಮುಚ್ಚಲು ಪ್ರಾರಂಭಿಸಿತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಸ್ತೆಗಳ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಪರಿಸ್ಥಿತಿಯನ್ನು ಅವಲೋಕಿಸಿದ ಸಿದ್ದರಾಮಯ್ಯ ಅವರು, ಒಂದು ತಿಂಗಳೊಳಗೆ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವಂತೆ ನಾಗರಿಕ ಸಂಸ್ಥೆಯ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಗಡುವು ಪೂರೈಸದಿದ್ದರೆ ಮುಖ್ಯ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದ ಅವರು, ಕೆಲಸದ ಗುಣಮಟ್ಟದ ಬಗ್ಗೆ ರಾಜಿ ಮಾಡಿಕೊಳ್ಳದಂತೆ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com