
ಬೆಂಗಳೂರು: ಆಯುಧ ಪೂಜೆ ಹಬ್ಬದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಕಾವೇರಿ ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸವಂತೆ ಸಾರ್ವಜನಿಕರಿಗೆ ಬೆಂಗಳೂರು ನೀರಾವರಿ ಮತ್ತು ಒಳಚರಂಡಿ ಮಂಡಳಿ ಸೋಮವಾರ ಮನವಿ ಮಾಡಿದೆ.
ಈ ಸಂಬಂಧ ಬಿಡಬ್ಲ್ಯೂಎಸ್ಎಸ್'ಬಿ ಪ್ರಕಟಣೆ ಹೊರಡಿಸಿದ್ದು, ಆಯುಧ ಪೂಜೆ ಹಬ್ಬದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಕಾವೇರಿ ನೀರನ್ನು ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸವಂತೆ ಹಾಗೂ ಅಗತ್ಯವಿಲ್ಲದ ವ್ಯರ್ಥವನ್ನು ತಪ್ಪಿಸುವಂತೆ ಮನವಿ ಮಾಡಿದೆ.
ಆಯುಧ ಪೂಜೆಯ ಸಂದರ್ಭದಲ್ಲಿ ಮನೆಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಹಲವಾರು ಸ್ವಚ್ಛತಾ ಚಟುವಟಿಕೆಗಳು ನಡೆಯುತ್ತವೆ. ನೀರನ್ನು ಬಳಕೆ ಮಾಡುವುದರಲ್ಲಿ ತಪ್ಪಿಲ್ಲ, ಆದರೆ ಅದು ಮಿತವಾಗಿಯೂ ಹೊಣೆಗಾರಿಕೆಯಿಂದಲೂ ಇರಬೇಕು. ಕಾವೇರಿ ನೀರು ಪವಿತ್ರವೂ ಅಮೂಲ್ಯವೂ ಆಗಿದ್ದು, ಅದನ್ನು ಸರಿಯಾದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಅನಗತ್ಯ ವ್ಯರ್ಥವನ್ನು ತಡೆಯಬೇಕು.
ಕುಡಿಯುವ ನೀರಿನ ಮೂಲಗಳು ಸೀಮಿತವಾಗಿರುವುದರಿಂದ ಹಬ್ಬದ ಸಂಭ್ರಮವನ್ನು ಜವಾಬ್ದಾರಿಯಿಂದ ಆಚರಿಸಬೇಕು, ನೀರಿನ ಸಂರಕ್ಷಣೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದೆ.
Advertisement