ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿರುತ್ತಾರೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ಆಧ್ಯಾತ್ಮಿಕತೆಯು ಸಾರ್ವಜನಿಕ ಸೇವೆ ಮತ್ತು ದೇಶ ಸೇವೆ ಎರಡಕ್ಕೂ ಬಲವಾದ ಹಾಗೂ ಶಾಶ್ವತವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ರಾಷ್ಟ್ರಪತಿಗಳು ಒತ್ತಿ ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು
Updated on

ತುಮಕೂರು: ಶಿವಕುಮಾರ ಸ್ವಾಮಿಯಂತಹ ಸ್ವಾಮೀಜಿಗಳು ಸಮಾಜ ಮತ್ತು ದೇಶದ ಆತ್ಮಕ್ಕೆ ಒಂದು ಆಕಾರ ನೀಡುತ್ತಾರೆ ಮತ್ತು ದೇಶದ ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಹೇಳಿದ್ದಾರೆ.

ಇಂದು ಸಿದ್ಧಗಂಗಾಮಠದಲ್ಲಿ ನಡೆದ ನಡೆದಾಡುವ ದೇವರು, ಕಾಯಕಯೋಗಿ ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಷ್ಟ್ರಪತಿಗಳು, ಸಿದ್ದಗಂಗಾ ಮಠಕ್ಕೆ ಬಂದು ಶಿವಕುಮಾರ ಶ್ರೀಗಳ ಗದ್ದಿಗೆ ದರ್ಶನ ಪಡೆದಿದ್ದು ನನಗೆ ಖುಷಿಯಾಗಿದೆ ಎಂದರು.

ಆಧ್ಯಾತ್ಮಿಕತೆಯು ಸಾರ್ವಜನಿಕ ಸೇವೆ ಮತ್ತು ದೇಶ ಸೇವೆ ಎರಡಕ್ಕೂ ಬಲವಾದ ಹಾಗೂ ಶಾಶ್ವತವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ರಾಷ್ಟ್ರಪತಿಗಳು ಒತ್ತಿ ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು
2047 ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ; ತಂತ್ರಜ್ಞಾನ, ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ: ರಾಷ್ಟ್ರಪತಿ ಮುರ್ಮು

"ಅವರು ತಮ್ಮ ಆಧ್ಯಾತ್ಮಿಕ ಚಟುವಟಿಕೆಯ ಮೂಲಕ ಹಲವು ವರ್ಷಗಳ ಕಾಲ ಮಾನವೀಯತೆಯನ್ನು ಶ್ರೀಮಂತಗೊಳಿಸುತ್ತಲೇ ಇದ್ದರು. ಬಡವರು ಮತ್ತು ವಂಚಿತರ ಸೇವೆಗೆ ಮೀಸಲಾದ ಅವರ ಜೀವನ ಹಾಗೂ ಕಲ್ಯಾಣ ಕಲ್ಯಾಣ ಕಾರ್ಯಗಳು ಒಂದು ವಿಶಿಷ್ಟ ಉದಾಹರಣೆಯಾಗಿವೆ" ಎಂದು ಅವರು ಹೇಳಿದರು.

ಮಠದ ಚಟುವಟಿಕೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, "ಈ ಮಠದ ಮೂಲಕ, ಹೆಚ್ಚಿನ ಸಂಖ್ಯೆಯ ಗ್ರಾಮೀಣ ಮಕ್ಕಳಿಗೆ ಉಚಿತ ಆಹಾರ, ವಸತಿ ಮತ್ತು ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಲಾಗುತ್ತದೆ, ಇದು ಅತ್ಯಂತ ಶ್ಲಾಘನೀಯ" ಎಂದರು.

ಶ್ರೀಮಠದ ಮಕ್ಕಳನ್ನು ಮಾತನಾಡಿಸಿದ್ದೂ ಸಂತೋಷವಾಗಿದೆ. ಶ್ರೀಗಳು ದೈಹಿಕವಾಗಿ ಇಲ್ಲದೇ ಇದ್ದರೂ ಅವರ ಸೇವೆ ನಮ್ಮ ನಡುವೆ ಇದೆ. ಈ ದೇಶದ ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿ ಇರುತ್ತಾರೆ. ಅನಾಥ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ಕೊಟ್ಟು ಅನಾಥರ ಪಾಲಿನ ಅಪ್ಪ ಎನಿಸಿಕೊಂಡಿದ್ದಾರೆ. ದಯೆಯೇ ಧರ್ಮದ ಮೂಲವಯ್ಯ ಎನ್ನುವಂತೆ ಸಿದ್ದಗಂಗಾ ಮಠವು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಿದ್ದಗಂಗಾ ಮಠದ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com