ಗರ್ಭದಲ್ಲಿ ಮರಿ ಸಾವಿನ ಬೆನ್ನಲ್ಲೇ ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿನಿ ಸಾವು!

ಶಿವಮೊಗ್ಗ ಮೃಗಾಲಯದ ನಿರ್ದೇಶಕ ಅಮರಕ್ಷರ್ ವಿ.ಎಂ. ಅವರು ಹೊರಡಿಸಿರುವ ಪ್ರಕಟಣೆಯಲ್ಲಿ, ಮಂಗಳವಾರ ಮಧ್ಯಾಹ್ನ 3.08ಕ್ಕೆ ಹಂಸಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
The 12-year-old female hippopotamus named Hamsini died at the Tiger and Lion Safari at Tyavarekoppa near Shivamogga on Tuesday
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿನಿ ಸಾವು! File photo
Updated on

ಶಿವಮೊಗ್ಗ: ಮಂಗಳವಾರ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯಲ್ಲಿ 12 ವರ್ಷದ ಹೆಣ್ಣು ನೀರಾನೆ ‘ಹಂಸಿನಿ’ ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ನೀರಾನೆ ಮಾರ್ಚ್ 19ರಂದು ಮೃಗಾಲಯದ ಪಶುವೈದ್ಯ ತರಬೇತಿ ವಿದ್ಯಾರ್ಥಿನಿ ಸಮೀಕ್ಷಾ ರೆಡ್ಡಿ (27) ಅವರ ಸಾವಿಗೆ ಕಾರಣವಾಗಿತ್ತು.

ಶಿವಮೊಗ್ಗ ಮೃಗಾಲಯದ ನಿರ್ದೇಶಕ ಅಮರಕ್ಷರ್ ವಿ.ಎಂ. ಅವರು ಹೊರಡಿಸಿರುವ ಪ್ರಕಟಣೆಯಲ್ಲಿ, ಮಂಗಳವಾರ ಮಧ್ಯಾಹ್ನ 3.08ಕ್ಕೆ ಹಂಸಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪ್ರಾಣಿಗೆ ಗರ್ಭಧಾರಣೆ ಆಗಿರಬಹುದೆಂಬ ಶಂಕೆ ಇತ್ತು; ಭ್ರೂಣ ಚಲನೆ, ಹೊಟ್ಟೆ ಊತ ಹಾಗೂ ವರ್ತನೆಯಲ್ಲಿ ಬದಲಾವಣೆಗಳಂತಹ ಲಕ್ಷಣಗಳು ಕಂಡುಬಂದಿದ್ದವು. ಎಂಟು ತಿಂಗಳ ಗರ್ಭಾವಧಿ ಮಾರ್ಚ್ ಮಧ್ಯಭಾಗದಲ್ಲಿ ಪೂರ್ಣಗೊಂಡಿದ್ದರೂ, ಹೆರಿಗೆಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ. ಕಳೆದ ಕೆಲವು ದಿನಗಳಿಂದ ಪ್ರಾಣಿಯ ಆಹಾರ ಸೇವನೆ ಕಡಿಮೆಯಾಗಿದ್ದು, ನಿಷ್ಕ್ರಿಯವಾಗಿ ಕಾಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ, ಏಪ್ರಿಲ್ 10ರಂದು ಮೈಸೂರುನ ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಬಂದ ವನ್ಯಜೀವಿ ಪಶುವೈದ್ಯರ ತಂಡವು ಹಂಸಿನಿಯ ಆರೋಗ್ಯವನ್ನು ಸಮಗ್ರವಾಗಿ ಪರಿಶೀಲಿಸಿತು.

The 12-year-old female hippopotamus named Hamsini died at the Tiger and Lion Safari at Tyavarekoppa near Shivamogga on Tuesday
ಶಿವಮೊಗ್ಗ: ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿ ಗರ್ಭದಲ್ಲೇ ಸಾವು!

ರಕ್ತ ಹಾಗೂ ಇತರ ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಯಿತು. ಪರೀಕ್ಷಾ ವರದಿಗಳ ಆಧಾರದ ಮೇಲೆ ಗರ್ಭಾಶಯದಲ್ಲಿ ತೀವ್ರ ಸೋಂಕು ಇರುವುದನ್ನು ಪತ್ತೆಹಚ್ಚಲಾಯಿತು. ಗರ್ಭಾಶಯದೊಳಗಿನ ಭ್ರೂಣ ಸತ್ತಿರುವುದರಿಂದ ಈ ಸೋಂಕು ಉಂಟಾಗಿರಬಹುದೆಂದು ಪಶುವೈದ್ಯರು ಹೇಳಿದ್ದರು. ಈ ಸೋಂಕು ಪ್ರಾಣಿಯ ಪ್ರಮುಖ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಹಾನಿಗೊಳಪಡಿಸಿದ್ದು, ಚೇತರಿಕೆ ಸಾಧ್ಯತೆ ‘ಅತೀ ದುರ್ಬಲ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ನಂತರವೂ ವನ್ಯಜೀವಿ ಪಶುವೈದ್ಯರು ಹಾಗೂ ಸಲಹೆಗಾರ ಪ್ರಸೂತಿ-ಸ್ತ್ರೀರೋಗ ತಜ್ಞ ಪಶುವೈದ್ಯರ ಸಹಕಾರದಿಂದ ಚಿಕಿತ್ಸೆ ಮತ್ತು ಆರೈಕೆಯನ್ನು ಮುಂದುವರಿಸಲಾಯಿತು. ಆದರೆ ನಿರಂತರ ವೈದ್ಯಕೀಯ ಚಿಕಿತ್ಸೆ ಮತ್ತು ನಿಗಾವಹಣೆ ಇದ್ದರೂ, ಹಂಸಿನಿ ಚಿಕಿತ್ಸೆಗೇ ಪ್ರತಿಕ್ರಿಯಿಸದೆ ಮಂಗಳವಾರ ಸಾವನ್ನಪ್ಪಿದೆ.

ಮಾರ್ಚ್ 19ರಂದು, ದೇಹದ ತಾಪಮಾನವನ್ನು ಥರ್ಮಲ್ ಕ್ಯಾಮೆರಾ ಮೂಲಕ ದಾಖಲಿಸಲು ಆವರಣದೊಳಗೆ ಪ್ರವೇಶಿಸಿದಾಗ ಹಂಸಿನಿ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿತ್ತು. ಬೆಂಗಳೂರಿನ ಮೂಲದ ಸಮೀಕ್ಷಾ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಮರು ದಿನ ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com