ಸಂಕೇಶ್ವರ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಸಾವು; ಪುತ್ರನಿಗಾಗಿ ಶೋಧ

ಹಿರಣ್ಯಕೇಶಿ ನದಿ ತೀರದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ತಾಯಿ, ಮಗ ಬಂದಿದ್ದರು. ಬಳಿಕ ಸುಪ್ರೀತ್‌ ದೇವಸ್ಥಾನದ ಪಕ್ಕದಲ್ಲೇ ಇರುವ ಹಿರಣ್ಯಕೇಶಿ ನದಿಗೆ ಈಜಲು ಹೋಗಿದ್ದ.
File image
ಸಾಂದರ್ಭಿಕ ಚಿತ್ರ
Updated on

ಸಂಕೇಶ್ವರ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಾಯಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಮಗನೂ ನಾಪತ್ತೆಯಾಗಿರುವ ಘಟನೆ ಸಂಕೇಶ್ವರ ಪಟ್ಟಣದ ಹೊರವಲಯದ ಹಿರಣ್ಯಕೇಶಿ ನದಿಯಲ್ಲಿ ಮಂಗಳವಾರ ನಡೆದಿದೆ.

ಸಂಕೇಶ್ವರ ಪಟ್ಟಣದ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಮೃತಪಟ್ಟಿದ್ದಾರೆ. ಮಗ ಸುಪ್ರೀತ ಸುಧಾಕರ ಕುಟೋಳಿ (9) ಸಹ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ಮೃತದೇಹ ಸಿಕ್ಕಿಲ್ಲ. ಅಗ್ನಿ ಶಾಮಕ ದಳದಿಂದ ಹುಡುಕಾಟ ಮುಂದುವರಿದಿದೆ.

ಹಿರಣ್ಯಕೇಶಿ ನದಿ ತೀರದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ತಾಯಿ, ಮಗ ಬಂದಿದ್ದರು. ಬಳಿಕ ಸುಪ್ರೀತ್‌ ದೇವಸ್ಥಾನದ ಪಕ್ಕದಲ್ಲೇ ಇರುವ ಹಿರಣ್ಯಕೇಶಿ ನದಿಗೆ ಈಜಲು ಹೋಗಿದ್ದ. ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ಕಂಡು ರಕ್ಷಿಸಲು ಹೋಗಿದ್ದ ತಾಯಿ ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ತಾಯಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿದೆ. ನದಿ ತೀರದಲ್ಲಿ ಬಾಲಕನ ಬಟ್ಟೆಗಳು ಪತ್ತೆಯಾಗಿರುವುದರಿಂದ, ಆತನು ಮುಳುಗಿರುವ ಶಂಕೆ ದೃಢಪಟ್ಟಿದೆ. ಮಗುವಿನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

File image
ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ: ಪೂರ್ತಿ ಗುಣವಾಗುವ ಮೊದಲೇ ಡಿಸ್ಚಾರ್ಜ್, ರೋಗಿ ಸಾವು; ಕುಟುಂಬಸ್ಥರ ಆಕ್ರೋಶ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com