'ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಹೀಗಿದ್ದರೂ ಶೇ.94ರಷ್ಟು ಫಲಿತಾಂಶ ಹೇಗೆ ಬಂತು?': ಎಂಎಲ್ಸಿ ಹೆಚ್.ವಿಶ್ವನಾಥ್

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 94.1 ಶೇಕಡಾ ಫಲಿತಾಂಶ ಬಂದಿದೆ. ಹೋದ ವರ್ಷ ಶೇಕಡಾ 80.1ರಷ್ಟಿತ್ತು. ಒಂದೇ ವರ್ಷದಲ್ಲಿ ಭಾರೀ ಜಿಗಿತ ಕಂಡುಬಂದಿದೆ.
H Vishwanath and Madhu Bangarappa
ಹೆಚ್ ವಿಶ್ವನಾಥ್, ಮಧು ಬಂಗಾರಪ್ಪ
Updated on

ಮೈಸೂರು: ರಾಜ್ಯದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಿಸಲಾಗಿದೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ತೆಗೆಸಿ ಅವ್ಯವಹಾರ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 94.1 ಶೇಕಡಾ ಫಲಿತಾಂಶ ಬಂದಿದೆ. ಹೋದ ವರ್ಷ ಶೇಕಡಾ 80.1ರಷ್ಟಿತ್ತು. ಒಂದೇ ವರ್ಷದಲ್ಲಿ ಭಾರೀ ಜಿಗಿತ ಕಂಡುಬಂದಿದೆ. ಪರೀಕ್ಷಾ ವಿಧಾನ, ಮೌಲ್ಯಮಾಪನ ಬಗ್ಗೆ ಅನುಮಾನಗಳಿವೆ, ಕೆಲವೇ ಸೋಮಾರಿ ಶಿಕ್ಷಕರು ಮಾತ್ರ ಇಂತಹ ಫಲಿತಾಂಶ ಸ್ವಾಗತಿಸುತ್ತಾರೆ ಎಂದರು.

ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ, ಎಲ್ಲರೂ ಪಾಸಾಗಬೇಕೆಂದು ಕಸರತ್ತು ನಡೆಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅವರ ಕಥೆ ಏನು, ಪಿಯು ಹಂತದಲ್ಲಿ ಶಿಕ್ಷಣ ಮುಂದುವರಿಸುವವರ ಪ್ರಮಾಣ ಕಡಿಮೆ ಆಗಲಿದೆ. ಇದು ಆಘಾತಕಾರಿ ಎಂದರು.

H Vishwanath and Madhu Bangarappa
SSLC results: ಎಸ್ ಎಸ್ ಎಲ್ ಸಿ ಪರೀಕ್ಷೆ-1 ಫಲಿತಾಂಶ ಪ್ರಕಟ; ಶೇ.73.40 ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ ಜಿಲ್ಲೆ ಪ್ರಥಮ

20ಕ್ಕೆ 20 ಆಂತರಿಕ ಅಂಕಗಳನ್ನು ಎಲ್ಲರಿಗೂ ಕೊಡಲಾಗಿದೆ. ಪಾಸಾಗಲು ಇನ್ನು ಬೇಕಾದದ್ದು ಕೇವಲ 13 ಅಂಕಗಳು. ಅದನ್ನೂ ಕಾಪಿ ಮಾಡಿಸಿದ್ದಾರೆ. ಇದು ಬಹಳ ನೋವಿನ ಸಂಗತಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ದೊಡ್ಡ ಸಾಧನೆ ಮಾಡಿದ್ದಾಗಿ ಕೊಚ್ಚಿಕೊಳ್ಳುತ್ತಿದೆ ಎಂದರು.

ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜಾಸ್ತಿ ಕೊರತೆಯಿದೆ. ಹೀಗಿದ್ದರೂ ಶೇ.94ರಷ್ಟು ಫಲಿತಾಂಶ ಬಂದಿದ್ದು ಹೇಗೆ, ಮಾತೃಭಾಷೆ ಕನ್ನಡದಲ್ಲೇ ಬಹಳಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರಲ್ಲಾ ಏಕೆ, ಇದು ಯಾವ ರೀತಿ ಸಾಧನೆ, ಹಠಕ್ಕೆ ಬಿದ್ದು ಪಾಸ್ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಬೋಧನೆ, ಶಿಕ್ಷಕರ ನೇಮಕಾತಿ, ಶಾಲೆಗಳಿಗೆ ಸೌಲಭ್ಯ ಒದಗಿಸುವುದರಲ್ಲಿ ಹಟ ಇರಬೇಕಾಗಿತ್ತು ಎಂದರು.

ಬಹಳಷ್ಟು ಶಿಕ್ಷಕ ಹುದ್ದೆ ಖಾಲಿ ಇಟ್ಟುಕೊಂಡು ಇಷ್ಟೊಂದು ಫಲಿತಾಂಶ ಬಂದಿದ್ದಾದರೂ ಹೇಗೆ, ಮಕ್ಕಳಲ್ಲಿನ ಓದುವ ಉತ್ಸಾಹವನ್ನೇ ಈ ಸರ್ಕಾರ ಕಿತ್ತುಕೊಂಡಿದೆ. ಸಿದ್ದರಾಮನಹುಂಡಿಯಲ್ಲೇ ಇರುವ ಸಿದ್ದರಾಮಯ್ಯ ಇನ್ನಾದರೂ ಹೊರಬರಲಿ, ವಸ್ತುಸ್ಥಿತಿ ತಿಳಿದುಕೊಂಡು ವ್ಯವಸ್ಥೆಯನ್ನು ಬದಲಾಯಿಸಲಿ ಎಂದರು.

ಹಿಂದಿ ವಿಷಯದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ, ಆದರೂ ಸರ್ಕಾರ ಜನ, ಪ್ರಜಾತಂತ್ರ ಹಾಗೂ ಶಿಕ್ಷಣ ವಿರೋಧಿಯಾದ ಕೆಲಸವನ್ನೇ ಮುಂದುವರಿಸುತ್ತಿದೆ. ಇದೆಲ್ಲವನ್ನೂ ನೋಡಿದರೆ, ಶಿಕ್ಷಣ ಸಚಿವನಾಗಿದ್ದ ನನಗೆ ನೋವಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com