ಬಂಟ್ವಾಳ: ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವೈದ್ಯರಿಲ್ಲದೆ ಸಿಬ್ಬಂದಿ ನೆರವಿನಿಂದ ಹೆರಿಗೆ!

ರೈಲಿನಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಗಳಾದ ಹಾಸನದ ಅರುಣಾ ಎಸ್.ಎಸ್. ಮತ್ತು ಕೃಷ್ಣರಾಜನಗರದ ಶಂಕರಮೂರ್ತಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ನೋಡಿಕೊಂಡರು.
Baby delivery at Bantwal railway station
ಬಂಟ್ವಾಳ ರೈಲು ನಿಲ್ದಾಣದಲ್ಲಿ ಮಗುವಿನ ಹೆರಿಗೆ
Updated on

ಮಂಗಳೂರು: ನಿನ್ನೆ ಭಾನುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣದಲ್ಲಿ, ರೈಲು ಸಿಬ್ಬಂದಿಯ ತಕ್ಷಣದ ಕ್ರಮದಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಸಂಖ್ಯೆ 16586 (ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್) ನಲ್ಲಿ ಹೆಣ್ಣುಮಗುವಿಗೆ ತಾಯಿಯೊಬ್ಬಳು ಜನನ ನೀಡಿದ ಘಟನೆ ನಡೆದಿದೆ.

ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಪ್ರಕಟಣೆ ಪ್ರಕಾರ, ರೈಲು ನಿನ್ನೆ ಸಾಯಂಕಾಲ ಸುಮಾರು 7:22ಕ್ಕೆ ಬಂಟ್ವಾಳ ನಿಲ್ದಾಣ ತಲುಪಿದಾಗ ತುಂಬು ಗರ್ಭಿಣಿಯಾಗಿದ್ದ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಮ್ಮ ಎಂಬ ಮಹಿಳೆ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾದರು. ತಕ್ಷಣ ಸಹ ಪ್ರಯಾಣಿಕರು ಸಿಬ್ಬಂದಿಗೆ ವಿಷಯ ತಿಳಿಸಿದರು. ಸಿಬ್ಬಂದಿ ತುರ್ತು ವೈದ್ಯಕೀಯ ಸೇವೆಗಳಿಗೆ ಮಾಹಿತಿ ನೀಡಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು.

ವೈದ್ಯರು ಬರುವ ಮುನ್ನವೇ, ಮಹಿಳೆ ಬೋಗಿಯೊಳಗೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ರೈಲಿನಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಗಳಾದ ಹಾಸನದ ಅರುಣಾ ಎಸ್.ಎಸ್. ಮತ್ತು ಕೃಷ್ಣರಾಜನಗರದ ಶಂಕರಮೂರ್ತಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ನೋಡಿಕೊಂಡರು.

Baby delivery at Bantwal railway station
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಹಿಳೆ ದಾರುಣ ಸಾವು, ನವಜಾತ ಅವಳಿ ಶಿಶುಗಳು ಅನಾಥ! Video

ಮಗುವಿನ ಜನನ ನಂತರ ತಾಯಿ ಮತ್ತು ಮಗುವನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಶಿಶುವನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ.

ಈ ಪರಿಸ್ಥಿತಿಯನ್ನು ಚುರುಕಾಗಿ ಸಮನ್ವಯದಿಂದ ನಿರ್ವಹಿಸಿದ ರೈಲು ಸಿಬ್ಬಂದಿಯನ್ನು ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com