ಆಲಮಟ್ಟಿ, ಕಬಿನಿ ಜಲಾಶಯ ಭರ್ತಿ! KRS ಪರಿಸ್ಥಿತಿ ಏನು? ಇಲ್ಲಿದೆ ರಾಜ್ಯದ ಪ್ರಮುಖ ಆಣೆಕಟ್ಟುಗಳಲ್ಲಿ ನೀರಿನ ವಿವರ

ತಮಿಳುನಾಡಿಗೆ ನಿತ್ಯ ನೀರು ಹರಿಸುವಂತೆ CWRC ಆದೇಶ ನೀಡಿದೆ. ಇದರ ಬೆನ್ನಲ್ಲೇ KRSನಲ್ಲಿ ನೀರಿಲ್ಲ ಎನ್ನುತ್ತಾ ಬಂದ್ ಗೂ ಕೆರೆ ನೀಡಲಾಗಿದೆ. ಮತ್ತೊಂದೆಡೆ ಆಲಮಟ್ಟಿ ಜಲಾಶಯ ಭರ್ತಿ ಆಗುವತ್ತ ಧಾಪುಗಾಲು ಇಟ್ಟಿದೆ! ಹಾಗಾಗಿ, ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವದರ ಮಾಹಿತಿ ಇಲ್ಲಿದೆ:
almatti dam
ಆಲಮಟ್ಟಿ ಅಣೆಕಟ್ಟುOnline Desk
Updated on

ಬೆಂಗಳೂರು: ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ(CWRC) ಆದೇಶ ನೀಡಿದೆ. ಇದರ ಬೆನ್ನಲ್ಲೇ KRSನಲ್ಲಿ ನೀರಿಲ್ಲ ಎನುತ್ತಾ ರಾಜ್ಯಾದ್ಯಂತ CWRC ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಂದ್ ಗೂ ಕೆರೆ ನೀಡಲಾಗಿದೆ. ಮತ್ತೊಂದೆಡೆ ಆಲಮಟ್ಟಿ ಜಲಾಶಯ ಭರ್ತಿ ಆಗುವತ್ತ ಧಾಪುಗಾಲು ಇಟ್ಟಿದೆ! ಹಾಗಾಗಿ, ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವದರ ಕುರಿತ ಮಾಹಿತಿ ಇಲ್ಲಿದೆ:

ಭರ್ತಿಯತ್ತ ಕಬಿನಿ

ಹೆಚ್. ಡಿ. ಕೋಟೆ ತಾಲೂಕಿನಲ್ಲಿ ಕಬಿನಿ ನದಿಗೆ (ಕಪಿಲಾ ನದಿ) ಅಡ್ಡಲಾಗಿ ನಿರ್ಮಿಸಲಾದ ಕಬಿನಿ ಜಲಾಶಯವು ಪ್ರಸ್ತುತ ಶೇ. 87 ರಷ್ಟು ಭರ್ತಿಯಾಗಿದ್ದು, ಸಂಪೂರ್ಣವಾಗಿ ತುಂಬುವ ಹಂತದಲ್ಲಿದೆ. ವರದಿಯ ಪ್ರಕಾರ, ಜಲಾಶಯಕ್ಕೆ ಭಾರಿ ಪ್ರಮಾಣದ ಒಳಹರಿವು ಇದ್ದು, ನದಿಗೆ ಸದ್ಯ ಕಡಿಮೆ ನೀರನ್ನು ಹರಿಸಲಾಗುತ್ತಿದೆ.

  • ಪ್ರಸ್ತುತ ಸಂಗ್ರಹ: ಒಟ್ಟು17.092 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 19.516

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 11,747 ಕ್ಯೂಸೆಕ್ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ ಕೇವಲ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಅರ್ಧವಷ್ಟೇ ಭದ್ರಾ ಭರ್ತಿ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭದ್ರಾ ಜಲಾಶಯವು ಪ್ರಸ್ತುತ ಶೇಕಡಾ 56 ರಷ್ಟು ಭರ್ತಿಯಾಗಿದೆ. ಅದ್ರಂತೆ, ಆಗಸ್ಟ್ 1 ರ ಬೆಳಗಿನ ವರದಿಯ ಪ್ರಕಾರ,

  • ಪ್ರಸ್ತುತ ಸಂಗ್ರಹ: ಒಟ್ಟು 40.409 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 71.535 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 12,983 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ ಕೇವಲ 100 ಕ್ಯೂಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ.

ಭರ್ತಿ ಆಗುವತ್ತ ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯಲ್ಲಿ ಕೃಷ್ಣ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ ಶೇ.93 ರಷ್ಟು ತುಂಬಿದ್ದು, ಭಾರಿ ಪ್ರಮಾಣದ ನೀರಿನ ಹೊರಹರಿವನ್ನು ಹೊಂದಿದೆ. ಅದ್ರಂತೆ,

  • ಪ್ರಸ್ತುತ ಸಂಗ್ರಹ: ಒಟ್ಟು 114.57 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 123.081 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 82,743 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ 1,10,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

almatti dam
ಕಾವೇರಿ ವಿವಾದದ ನಡುವೆ ಸಿಹಿ ಸುದ್ದಿ: ವೈನಾಡಿನಲ್ಲಿ ಭರ್ಜರಿ ಮಳೆ- ಇಂದೇ ಕಬಿನಿ ಜಲಾಶಯ ಭರ್ತಿ; ಯಾವುದೇ ಕ್ಷಣದಲ್ಲಿ ನೀರು ಹರಿಸಲು ಸಿದ್ಧತೆ!

ನಲವತ್ತೂ ದಾಟದ ಕೃಷ್ಣರಾಜಸಾಗರ

ಮೈಸೂರಿನ ಬಳಿ ಇರುವ KRS (ಕೃಷ್ಣರಾಜಸಾಗರ) ಜಲಾಶಯವು ಪ್ರಸ್ತುತ ಶೇಕಡಾ 37 ರಷ್ಟು ಭರ್ತಿಯಾಗಿದೆ.

  • ಪ್ರಸ್ತುತ ಸಂಗ್ರಹ: ಒಟ್ಟು 18.733 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 49.452 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 13,522 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ ಕೇವಲ 1,354 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ನಾರಾಯಣಪುರ ಜಲಾಶಯ ಶೇ. 88ರಷ್ಟು ಭರ್ತಿ

ಕೃಷ್ಣಾ ನದಿಗೆ ಅಡ್ಡಲಾಗಿ ಯಾದಗಿರಿ ಜಿಲ್ಲೆಯಲ್ಲಿ ನಿರ್ಮಿಸಲಾದ ನಾರಾಯಣಪುರ ಜಲಾಶಯವು ಪ್ರಸ್ತುತ ಶೇಕಡಾ 88 ರಷ್ಟು ಭರ್ತಿಯಾಗಿದ್ದು, ಭಾರಿ ಪ್ರಮಾಣದ ಒಳಹರಿವು ಮತ್ತು ಹೊರಹರಿವನ್ನು ಹೊಂದಿದೆ. ಹಾಗಾಗಿ, ಜಲಾಶಯಕ್ಕೆ ಬರುವ ಬಹುತೇಕ ಎಲ್ಲಾ ನೀರನ್ನು ತಕ್ಷಣವೇ ನದಿಗೆ ಹರಿಸಲಾಗುತ್ತಿದೆ.

  • ಪ್ರಸ್ತುತ ಸಂಗ್ರಹ: ಒಟ್ಟು 29.573 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 33.313 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 1,11,108 ಕ್ಯೂಸೆಕ್ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ 1,11,064 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

almatti dam
ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಮೈಸೂರಿಗೆ ಆಗಮನ: ವಿವೇಕ ಸ್ಮಾರಕ ಉದ್ಘಾಟನೆ

ಶೇ. 69 ರಷ್ಟು ಭರ್ತಿಯಾದ ಹಿಡಕಲ್ ಜಲಾಶಯ

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿಡಕಲ್ ಜಲಾಶಯವು ಪ್ರಸ್ತುತ ಶೇಕಡಾ 69 ರಷ್ಟು ಭರ್ತಿಯಾಗಿದ್ದು, ಉತ್ತಮ ಒಳಹರಿವನ್ನು ಹೊಂದಿದೆ. ವರದಿಯ ಪ್ರಕಾರ, ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಗೆ ಸದ್ಯ ಯಾವುದೇ ನೀರನ್ನು ಬಿಡುತ್ತಿಲ್ಲ.

  • ಪ್ರಸ್ತುತ ಸಂಗ್ರಹ: ಒಟ್ಟು 35.259 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 51 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 20,769 ಕ್ಯೂಸೆಕ್ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸದ್ಯ 0 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಮುವತ್ತೈದೂ ದಾಟದ ತುಂಗಭದ್ರಾ!

ಉತ್ತರ ಕರ್ನಾಟಕ ಮತ್ತು ಆಂಧ್ರಪ್ರದೇಶದ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಿ ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಪ್ರಮುಖ ಬಹುಪಯೋಗಿ ತುಂಗಭದ್ರಾ ಜಲಾಶಯವು ಪ್ರಸ್ತುತ ಶೇಕಡಾ 35 ರಷ್ಟು ಭರ್ತಿಯಾಗಿದೆ.

  • ಪ್ರಸ್ತುತ ಸಂಗ್ರಹ: ಒಟ್ಟು 37.063 TMCft ನೀರು ಸಂಗ್ರಹವಾಗಿದೆ.

  • ಗರಿಷ್ಠ ಸಾಮರ್ಥ್ಯ: ಜಲಾಶಯದ ಒಟ್ಟು ಗರಿಷ್ಠ ಸಾಮರ್ಥ್ಯ 105.788 TMCft ಆಗಿದೆ.

  • ಒಳಹರಿವು: ಜಲಾಶಯಕ್ಕೆ ಸೆಕೆಂಡಿಗೆ 15,690 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

  • ಹೊರಹರಿವು: ನದಿಗೆ ಸೆಕೆಂಡಿಗೆ ಕೇವಲ 19 ಕ್ಯೂಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com