ಮಂಡ್ಯ: ಶ್ರೀರಂಗನಾಥ ದೇವಾಲಯಕ್ಕೆ ಕಾಣಿಕೆಯಾಗಿ 66 ಲಕ್ಷ ರೂ ಬೆಲೆಯ 'ಬಂಗಾರದ ಕಳಶ' ಕೊಟ್ಟ ಉದ್ಯಮಿ! ಯಾರಿದು?

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಿದ ಕಳಶದಲ್ಲಿ ಸುತ್ತಲೂ ಅಷ್ಟ ಲಕ್ಷ್ಮಿಯರ ಚಿತ್ರಗಳಿದ್ದು, 398. 580 ಗ್ರಾಂ ತೂಕದ ಶುದ್ಧ ಬಂಗಾರದಿಂದ ಕೂಡಿದೆ. ಇದು ಭಕ್ತರ ಗಮನ ಸೆಳೆದಿದೆ.
Venu Srinivasan
ಉದ್ಯಮಿ ವೇಣು ಶ್ರೀನಿವಾಸನ್
Updated on

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಗುರುವಾರ 66. 78 ಲಕ್ಷ ಬೆಲೆಯ ಬಂಗಾರದ ಕಳಶವನ್ನು ಕಾಣಿಕೆಯಾಗಿ ನೀಡಿದ್ದಾರೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಿದ ಕಳಶದಲ್ಲಿ ಸುತ್ತಲೂ ಅಷ್ಟ ಲಕ್ಷ್ಮಿಯರ ಚಿತ್ರಗಳಿದ್ದು, 398. 580 ಗ್ರಾಂ ತೂಕದ ಶುದ್ಧ ಬಂಗಾರದಿಂದ ಕೂಡಿದೆ. ಇದು ಭಕ್ತರ ಗಮನ ಸೆಳೆದಿದೆ.

ದೇವಾಲಯದ ರಾಯಗೋಪುರದಿಂದ ಕಳಶವನ್ನು ಮಂಗಳವಾದ್ಯ ಸಹಿತ ಗರ್ಭಗುಡಿಯವರೆಗೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ಶ್ರೀರಂಗನಾಥ ಸ್ವಾಮಿ ದೇವರ ಸನ್ನಿಧಿಯಲ್ಲಿ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

Venu Srinivasan
ಉಡುಪಿ: ಜನವರಿ ತಿಂಗಳಲ್ಲಿ ಕೊಲ್ಲೂರು ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ; ಕಾಣಿಕೆ ಹುಂಡಿಯಲ್ಲಿ ದಾಖಲೆ ಮೊತ್ತದ ಹಣ ಸಂಗ್ರಹ !

ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ 27 ವರ್ಷಗಳ ಹಿಂದೆ ಬರಲು ಪ್ರೇರಣೆಯಾಗಿತ್ತು. ಆದರೂ ಸಾಧ್ಯವಾಗಿರಲಿಲ್ಲ. ಕನಸಿನಲ್ಲಿ ಶ್ರೀರಂಗನಾಥ ಸ್ವಾಮಿ ಕಾಣಿಸಿಕೊಂಡ ಕಾರಣ ಈಗ ಬಂದಿದ್ದು, ಸೇವೆ ಸಲ್ಲಿಸಿದ್ದೇನೆ ಎಂದು ವೇಣು ಶ್ರೀನಿವಾಸನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com