

ಕೊಪ್ಪಳ/ಬೆಂಗಳೂರು: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.
ಅಪಘಾತದಲ್ಲಿ ಬೈಕ್ನಲ್ಲಿದ್ದ ನರಗುಂದ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನರಗುಂದದ ಮಾಬುಸಾಬ್ ಬುಡನ್ಸಾಬ್ ಮಾತಗೇರಿ (17), ಫಕ್ರುಸಾಬ್ ಹಸನ್‌ಸಾಬ್ ವಟಗೇರಿ (19) ಮತ್ತು ಶಾನುಸಾಬ್ ಬಸಾಪುರ (15) ಎಂದು ಗುರುತಿಸಲಾಗಿದೆ.
ಮೂವರೂ ನರಗುಂದದಿಂದ ಕೊಪ್ಪಳ ಕಡೆಗೆ ಪ್ರಯಾಣಿಸುತ್ತಿದ್ದಾಗ ಬನ್ನಕೊಪ್ಪ ಗ್ರಾಮದ ಬಳಿ ನಿಂತಿದ್ದ ವಾಹನಕ್ಕೆ ಅವರ ಮೋಟಾರ್ ಸೈಕಲ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.