ಈ ಬಾರಿ ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ನಡೆಯಲಿದೆ: ಯತೀಂದ್ರ ಸಿದ್ದರಾಮಯ್ಯ

ಕಳೆದ 25 ವರ್ಷಗಳಿಂದ ದಸರಾದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಹಾಗೂ 6 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಅಭಿಮನ್ಯು ಆನೆಯನ್ನು ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದೆ.
yathindra siddaramaiah
ಯತೀಂದ್ರ ಸಿದ್ದರಾಮಯ್ಯ
Updated on

ಮೈಸೂರು: ಈ ಬಾರಿಯ ನಾಡಹಬ್ಬ ದಸರಾದಲ್ಲಿ ಕಂಬಳ ಇರಲಿದೆ. ಈಗಾಗಲೇ ಗುರುತು ಮಾಡಿದ ಜಾಗದಲ್ಲೇ ಕಂಬಳ ನಡೆಯುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಈ ಬಾರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಕಂಬಳವನ್ನು ನಡೆಸುತ್ತಿದ್ದೇವೆ. ಈಗಾಗಲೇ ಗುರುತು ಮಾಡಿದ ಜಾಗದಲ್ಲೇ ಕಂಬಳ ನಡೆಯುತ್ತದೆ ಎಂದರು.

ಕಳೆದ 25 ವರ್ಷಗಳಿಂದ ದಸರಾದ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಹಾಗೂ 6 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಅಭಿಮನ್ಯು ಆನೆಯನ್ನು ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದೆ.

ಅಭಿಮನ್ಯು ಆನೆಯನ್ನು ದಸರಾಗೆ ಕರೆತರುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಸಾಧ್ಯಾ - ಸಾಧ್ಯತೆ ನೋಡಿಕೊಂಡು ತೀರ್ಮಾನಿಸಲಾಗುವುದು. ಅಲ್ಲದೆ, ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಗಜಪಡೆಯ ತಾಲೀಮಿನ ನಂತರ ತೀರ್ಮಾನಿಸಲಾಗುವುದು ಎಂದು ಇದೇ ವೇಳೆ ಯತೀಂದ್ರ ಹೇಳಿದರು.

yathindra siddaramaiah
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ವಿನಾಯಕನ ಪ್ರತಿರೂಪವಾದ ಗಜಪಡೆಗೆ ಸಾಂಪ್ರದಾಯಿಕವಾಗಿ ನಾಡಿಗೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮೊದಲು ಗಜಪಡೆಗೆ ಪಾದ ತೊಳೆದು, ಅರಿಶಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಬಳಿಕ ಗಣಪತಿಗೆ ಇಷ್ಟವಾದ ತಿಂಡಿಗಳಿಂದ ನೈವೇದ್ಯ ಮಾಡಿ ಪುಷ್ಪಾರ್ಚನೆಯ ನಂತರ ಆನೆಗಳಿಗೆ ಕಬ್ಬು-ಬೆಲ್ಲ ನೀಡಿ ದಸರಾ ಯಾವುದೇ ವಿಘ್ನವಿಲ್ಲದೇ ನಡೆಯಲಿ ಎಂದು ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com