ದಕ್ಷಿಣ ಕಾಶಿಯಲ್ಲಿ ಭಕ್ತರ ಕಾಣಿಕೆಗೆ ಕನ್ನ? ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಕೋಟಿ ಕೋಟಿ ಗೋಲ್ಮಾಲ್ ಶಂಕೆ!

ದಕ್ಷಿಣ ಕಾಶಿ ನಂಜನಗೂಡಿನ ಐತಿಹಾಸಿಕ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. 2024-25ನೇ ಸಾಲಿನ ಲೆಕ್ಕಪತ್ರ ಪರಿಶೀಲನೆ ವೇಳೆ ಕೋಟಿ ಕೋಟಿ ಅನುಮಾನಾಸ್ಪದ ಖರ್ಚು ಬೆಳಕಿಗೆ ಬಂದಿದ್ದು, ಭಕ್ತರ ಕಾಣಿಕೆ ಹಣ ದುರುಪಯೋಗವಾಗಿರುವ ಶಂಕೆ ಮೂಡಿಸಿದೆ.
Nanjangudu Srikantheshwara Temple
ನಂಜನಗೂಡು ಶ್ರೀಕಂಠೇಶ್ವರ ದೇವಾಲಯOnline Desk
Updated on

ನಂಜನಗೂಡು (ಮೈಸೂರು): ದಕ್ಷಿಣ ಕಾಶಿ ಎಂದೇ ಹೆಸರಾದ ಮೈಸೂರು ಜಿಲ್ಲೆಯ ಪ್ರಸಿದ್ಧ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ದೇವಾಲಯದ ವ್ಯವಸ್ಥಾಪನಾ ಸಮಿತಿ ಕುಂದು-ಕೊರತೆಗಳ ಸಭೆಯಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ ನಡೆಸಿದಾಗ, 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಸುಮಾರು ₹4 ರಿಂದ ₹5 ಕೋಟಿ ರೂಪಾಯಿಗಳ ಭಾರೀ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

4 ರಿಂದ 5 ಕೋಟಿ ವಂಚನೆ?

ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ವಾರ್ಷಿಕ ಸಭೆಯಲ್ಲಿ, 2024-25ನೇ ಸಾಲಿನ ಲೆಕ್ಕಪತ್ರವನ್ನು ಪರಿಶೀಲಿಸಿದಾಗ, ದೇವಾಲಯಕ್ಕೆ ಒಟ್ಟು ₹25.86 ಕೋಟಿ ರೂ. ಆದಾಯ ಬಂದಿದ್ದು, ಅದರಲ್ಲಿ ಬರೋಬ್ಬರಿ ₹25.68 ಕೋಟಿ ರೂ. ಖರ್ಚು ತೋರಿಸಲಾಗಿದೆ. ಅದರಲ್ಲೂ,  ಬಂದ ಆದಾಯದಲ್ಲಿ ಬಹುಪಾಲು ಹಣವನ್ನು ವಿವಿಧ ವೆಚ್ಚಗಳ ಹೆಸರಿನಲ್ಲಿ ಖಾಲಿ ಮಾಡಿರುವುದರ ಹಿಂದೆ ₹4 ರಿಂದ ₹5 ಕೋಟಿ ರೂ. ದುರುಪಯೋಗ ಆಗಿರುವ ಬಲವಾದ ಸಂಶಯ ಮೂಡಿದೆ. ಇನ್ನು, ದೇವಾಲಯದ ಈ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ಪರಿಶೀಲಿಸಿದ ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ತೀವ್ರ ಆಶ್ಚರ್ಯ ಹಾಗೂ ಆಘಾತ ವ್ಯಕ್ತಪಡಿಸಿ, ಕ್ಕಪತ್ರದ ಸತ್ಯಾಸತ್ಯತೆಯನ್ನು ಹೊರತರಲು ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದಾರೆ.

 ₹25 ಕೋಟಿ ಆದಾಯ, ₹17 ಲಕ್ಷ ಮಾತ್ರ ಉಳಿತಾಯ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ 2024-25 ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಪತ್ರಗಳ ಪ್ರಕಾರ, ದೇವಾಲಯಕ್ಕೆ ಬರೋಬ್ಬರಿ  ₹25 ಕೋಟಿ 86 ಲಕ್ಷಕ್ಕೂ ಅಧಿಕ ಆದಾಯ ಬಂದಿದ್ದು, ಅದರಲ್ಲಿ ಅಧಿಕಾರಿಗಳು ಬರೋಬ್ಬರಿ ₹25 ಕೋಟಿ ₹68 ಲಕ್ಷ ರೂಪಾಯಿಗಳನ್ನು ಖರ್ಚು ತೋರಿಸಿ ಕೇವಲ ₹17.84 ಲಕ್ಷ ರೂಪಾಯಿಗಳನ್ನು ಮಾತ್ರ ಉಳಿತಾಯ ಎಂದು ತೋರಿಸಿದ್ದಾರೆ. ಅದರಂತೆ, ದೇವಾಲಯದ ಸಿಸಿಟಿವಿ ರಿಪೇರಿಗೆ ₹29 ಲಕ್ಷ, ಪಾರ್ಕಿಂಗ್ ನಿರ್ವಹಣೆಗೆ ₹17 ಲಕ್ಷ, ಲಾಡು ತಯಾರಿಕೆಗೆ ₹3 ಕೋಟಿಗೂ ಅಧಿಕ ಹಾಗೂ ಅತಿಥಿಗಳ ಶಲ್ಯ ಖರೀದಿಗೆ ₹11 ಲಕ್ಷ ರೂಪಾಯಿ ವೆಚ್ಚ ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ, ಈ ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಸಂದರ್ಭದಲ್ಲಿ 2024-25ರಲ್ಲಿ ಮಾತ್ರ ಉಳಿತಾಯ ಇಷ್ಟು ಕಡಿಮೆಯಾಗಿರುವುದೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ.

Nanjangudu Srikantheshwara Temple
Mysuru Dasara 2026 | 'ಗಜಪಯಣ'ಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಲನೆ; 'ಅಭಿಮನ್ಯು'ಗೆ ಗೌರವ ವಿದಾಯ; Video

ಏತನ್ಮಧ್ಯೆ, ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದ ಕಳಲೆ ದೇವಸ್ಥಾನಕ್ಕೂ ₹18 ಲಕ್ಷ ವೆಚ್ಚದ ಲೆಕ್ಕ ತೋರಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಯಾಕಂದ್ರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ 2024-25 ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಪತ್ರಗಳ ಪ್ರಕಾರ, ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದ ಕಾಮಗಾರಿಗೆ  ₹14 ಲಕ್ಷ  ಹಾಗೂ ಜಾತ್ರೆಗೆ ₹4 ಲಕ್ಷ ಖರ್ಚು ಮಾಡಲಾಗಿದೆ. ಆದರೆ, ಆ ವರ್ಷ, ದೇವಾಲಯದಲ್ಲಿ ಯಾವುದೇ ಕಾಮಗಾರಿ ನೆಡದಿಲ್ಲ ಎನ್ನಲಾಗಿದೆ. ಹಾಗಾಗಿ, ಶ್ರೀಕಂಠೇಶ್ವರ ದೇವಾಲಯದ ಹೆಸರಲ್ಲಿ ಲೆಕ್ಕಪತ್ರದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರಬಹುದು ಎನ್ನಲಾಗಿದೆ.

Nanjangudu Srikantheshwara Temple
ಕಸ್ತೂರಿರಂಗನ್ ವರದಿ ವಿರುದ್ಧ ರಾಜ್ಯ ಸರ್ಕಾರ ಸಮರ: ಕೇಂದ್ರದ ಕರಡು ಅಧಿಸೂಚನೆ ವಿರುದ್ಧ ವಿಶೇಷ ಅಧಿವೇಶನಕ್ಕೆ ಮುಂದು..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com