ರಾಜ್ಯದ ಜನತೆಗೆ ಕರೆಂಟ್ ಶಾಕ್; ಶೀಘ್ರದಲ್ಲೇ ವಿದ್ಯುತ್ ದರ ಏರಿಕೆ ಸಾಧ್ಯತೆ!

ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಮ್‌ಗಳು) 2026-27ರ ಹಣಕಾಸು ವರ್ಷಕ್ಕೆ ರಾಜ್ಯದಾದ್ಯಂತ ವಿದ್ಯುತ್ ದರದಲ್ಲಿ ಸರಾಸರಿ 67 ಪೈಸೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿವೆ.
Karnataka electricity supply companies seek 64p hike in power tariff
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ಸಜ್ಜಾಗಿದ್ದು, ಶೀಘ್ರದಲ್ಲೇ ವಿದ್ಯುತ್ ದರ ಹೆಚ್ಚಳ ಮಾಡು ಸಾಧ್ಯತೆ ಇದೆ.

ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಮ್‌ಗಳು) 2026-27ರ ಹಣಕಾಸು ವರ್ಷಕ್ಕೆ ರಾಜ್ಯದಾದ್ಯಂತ ವಿದ್ಯುತ್ ದರದಲ್ಲಿ ಸರಾಸರಿ 67 ಪೈಸೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿವೆ.

ನೀರಾವರಿ ಪಂಪ್‌ಸೆಟ್‌ಗಳು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕ ವರ್ಗಗಳಿಗೆ ಸರಬರಾಜು ಮಾಡುವ ವಿದ್ಯುತ್ ದರವನ್ನು ಪರಿಷ್ಕರಿಸುವಂತೆಯೂ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.

Karnataka electricity supply companies seek 64p hike in power tariff
ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್; ದರ ಏರಿಕೆಗೆ BESCOM ಪ್ರಸ್ತಾವನೆ

ರಾಜ್ಯದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ಬಹುತೇಕ ಕಂಪನಿಗಳು ನಷ್ಟದ ಹಳಿಯಲ್ಲಿದ್ದು, ಆದಾಯ ಸರಿದೂಗಿಸಲು ವಿದ್ಯುತ್‌ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.

ಮಾರ್ಚ್ 28, 2025 ರಂದು ಕೆಇಆರ್‌ಸಿ ವಿದ್ಯುತ್ ದರವನ್ನು ಶೇ, 7 ರಷ್ಟು ಹೆಚ್ಚಳ ಮಾಡಿತ್ತು. ಇದು ಗೃಹಬಳಕೆ ಮತ್ತು ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್ ಶುಲ್ಕವನ್ನು ಕಡಿಮೆ ಮಾಡಿತು ಮತ್ತು ಮಂಡಳಿಯಲ್ಲಿ ಸ್ಥಿರ ಶುಲ್ಕವನ್ನು 25 ರೂ.ಗಳಷ್ಟು ಹೆಚ್ಚಿಸಿತ್ತು.

ಈಗಾಗಲೇ 2025-26, 2026-27 ಮತ್ತು 2027-28ನೇ ಆರ್ಥಿಕ ವರ್ಷಗಳಿಗೆ ದರ ನಿಗದಿ ಮಾಡಲಾಗಿತ್ತು. ಆದರೆ, ಈಗ ಎದುರಾಗಿರುವ ನಷ್ಟವನ್ನು ಸರಿದೂಗಿಸಲು 'ಹೆಚ್ಚುವರಿ ದರ ಏರಿಕೆ'ಗೆ ಕೆಇಆರ್‌ಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.

Karnataka electricity supply companies seek 64p hike in power tariff
ಮೆಟ್ರೋ ಪ್ರಯಾಣ ದರ ಹೆಚ್ಚಳ: ಸಂಸದ ತೇಜಸ್ವಿ ಸೂರ್ಯ ದೆಹಲಿಗೆ ಓಡಿದ್ದು ಯಾಕೆ? ಕಾಂಗ್ರೆಸ್ ಪ್ರಶ್ನೆ

ಕೆಇಆರ್‌ಸಿ ತನ್ನ ಆದೇಶದಲ್ಲಿ, ಮಾರ್ಚ್ 3, 2025 ರಂದು 2026ರ ಹಣಕಾಸು ವರ್ಷದ ಸುಂಕ ಹೆಚ್ಚಳದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆ ಪಿ & ಜಿ ಸರ್‌ಚಾರ್ಜ್(ಸರ್ಕಾರದ ಕೊಡುಗೆ), 2027 ರ ಹಣಕಾಸು ವರ್ಷಕ್ಕೆ ಪ್ರತಿ ಯೂನಿಟ್‌ಗೆ 35 ಪೈಸೆ ಮತ್ತು 2028 ರ ಹಣಕಾಸು ವರ್ಷಕ್ಕೆ ಪ್ರತಿ ಯೂನಿಟ್‌ಗೆ 34 ಪೈಸೆ ಸೇರಿಸುವ ಆದೇಶವನ್ನು ಸೇರಿಸಿತ್ತು.

ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ

ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ಎಸ್ಕಾಂಗಳು 2024-25ನೇ ಸಾಲಿನ ತಮ್ಮ ಕಾರ್ಯನಿರ್ವಹಣಾ ವರದಿಯನ್ನು ಮತ್ತು ದರ ಏರಿಕೆಯ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಸಲ್ಲಿಸಿವೆ. ವರದಿ ಸಲ್ಲಿಕೆಯ ಬೆನ್ನಲ್ಲೇ ಆಯೋಗವು ಸಾರ್ವಜನಿಕರ ಅಹವಾಲು ಮತ್ತು ಆಕ್ಷೇಪಣೆಗಳನ್ನು ಆಲಿಸಲು ಮುಂದಾಗಿದೆ.

ಫೆಬ್ರವರಿ 16 ರಿಂದ ಫೆಬ್ರವರಿ 27ರವರೆಗೆ ರಾಜ್ಯದ ನಾನಾ ಭಾಗಗಳಲ್ಲಿ ಕೆಇಆರ್‌ಸಿ ಸಾರ್ವಜನಿಕ ವಿಚಾರಣಾ ಸಭೆಗಳನ್ನು ನಡೆಸಲಿದೆ. ಈ ಸಭೆಗಳಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ.

ನೀರಾವರಿ ಪಂಪ್‌ಸೆಟ್‌ಗಳು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕ ವರ್ಗಗಳ ಸುಂಕದಲ್ಲಿನ ಮಾರ್ಪಾಡುಗಳಿಗೆ ಸಂಬಂಧಿಸಿದ ಸಾರ್ವಜನಿಕ ವಿಚಾರಣೆಗಳನ್ನು ಫೆಬ್ರವರಿ 25, 2026 ರಂದು ನಡೆಸಲು KERC ಪಟ್ಟಿ ಮಾಡಿದೆ.

ಏಪ್ರಿಲ್ 1 ರಿಂದ ದರ ಏರಿಕೆ ಸಾಧ್ಯತೆ

ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವಿದ್ಯುತ್ ದರ ಪ್ರಕಟವಾಗುವ ಸಾಧ್ಯತೆಯಿದೆ. ಇದು ಜಾರಿಯಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com