

ಕರ್ನಾಟಕದಲ್ಲಿ ಇತ್ತೀಚಿನ ರಾಜಕೀಯ ಆರೋಪ–ಪ್ರತ್ಯಾರೋಪಗಳ ನಡುವೆ, ವಿರೋಧ ಪಕ್ಷವಾದ ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪಗಳ ಮಧ್ಯೆ ಕಾಂಗ್ರೆಸ್ ಸರ್ಕಾರ ಮತ್ತು ಅದರ ಉನ್ನತ ನಾಯಕರನ್ನು ವ್ಯಂಗ್ಯಮಾಡುವ ರೀತಿಯ ವಿಡಿಯೋವನ್ನು ಪೋಸ್ಟ್ ಮಾಡಿದೆ.
ರಿಪೋರ್ಟರ್ ರ್ಯಾಂಡಮ್ ಆಗಿ ನೀವು ಯಾವ ಹಾಡನ್ನು ಕೇಳುತ್ತಿದ್ದೀರಿ ಎಂದು ಕೇಳುತ್ತಾರೆ. ಈ ವಿಡಿಯೋದಲ್ಲಿನ ವ್ಯಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೋಲುವಂತಿದ್ದಾರೆ.
ಡಿ.ಕೆ. ಶಿವಕುಮಾರ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಹಳೆಯ ಕನ್ನಡ ಚಿತ್ರಗಳ ಹಾಡುಗಳ ಟೈಟಲ್ ನ್ನು ಉತ್ತರವಾಗಿ ಹೇಳುತ್ತಾರೆ. ಇವು ಸ್ಥಳೀಯ ಭಾಷೆಯಲ್ಲಿ ಸ್ವತಃ ತಮ್ಮ ಮೇಲೆಯೇ ಆರೋಪ ಮಾಡುವಂತಿರುವ ವ್ಯಂಗ್ಯಾರ್ಥದ ವಿಡಿಯೊ ಆಗಿದೆ.
‘ಸಿದ್ದರಾಮಯ್ಯ’ ಅವರ ಉತ್ತರವಾಗಿ ‘ನುಂಗೋಣ ಬಾ’ (ಸರ್ಕಲ್ ಇನ್ಸ್‌ಪೆಕ್ಟರ್ ಚಿತ್ರದ ಹಾಡು) ಎಂದು ಹೇಳಲಾಗಿದ್ದು, ಇದು ಸಾರ್ವಜನಿಕ ನಿಧಿಗಳ ದುರುಪಯೋಗ ಸರ್ಕಾರದಿಂದ ನಡೆದಿದೆ ಎಂಬ ಆರೋಪಗಳನ್ನು ವ್ಯಂಗ್ಯವಾಗಿ ಸೂಚಿಸುತ್ತದೆ.
ಈ ವಿಡಿಯೋಗೆ ‘ಈ ಪ್ಲೇಲಿಸ್ಟ್ ಅವರಿಗೆ ತುಂಬ ಚೆನ್ನಾಗಿ ಹೊಂದುತ್ತದೆ’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಜೆಡಿಎಸ್ ಪಕ್ಷವು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ನಿರಂತರ ಆನ್‌ಲೈನ್ ಆರೋಪದ ಒಂದು ಭಾಗವಾಗಿದೆ.
ಅದು ಇತ್ತೀಚಿನ ವಿಡಿಯೋಗಳಲ್ಲಿ ಸರ್ಕಾರ ಆಸ್ಪತ್ರೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ, ಸರಿಯಾಗಿ ನಿರ್ವಹಣೆ ಮಾಡದ ಬಸ್‌ಗಳ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸಿದೆ, ತೆರಿಗೆದಾರರ ಹಣದಲ್ಲಿ ವೈಭವಯುತ ಜೀವನ ಶೈಲಿಯನ್ನು ಪ್ರದರ್ಶಿಸುತ್ತಿದೆ ಹಾಗೂ “ಕಮಿಷನ್ ಸಂಸ್ಕೃತಿ”ಯನ್ನು ಅಳವಡಿಸಿಕೊಂಡಿದೆ ಎಂಬ ಆರೋಪಗಳನ್ನು ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎಐ ವಿಡಿಯೊಗಳನ್ನು ಹರಿಬಿಟ್ಟು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು, ಇಂತಹ ಮೀಮ್ ಆಧಾರಿತ ವ್ಯಂಗ್ಯವನ್ನು ಹೆಚ್ಚಾಗಿ ಬಳಸುತ್ತಿವೆ.
Advertisement