Valentine's Day 2026: ಈ ಬಾರಿ ಪ್ರೇಮಿಗಳ ದಿನಕ್ಕೆ ಬೆಂಗಳೂರಿನಿಂದ 6 ಕೋಟಿ ಗುಲಾಬಿ ರಫ್ತು..!

ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರೇಮಿಗಳ ದಿನದ (ಫೆ.14) ಸಂದರ್ಭದಲ್ಲಿ ದಾಖಲೆಯ 6 ಕೋಟಿ ಗುಲಾಬಿ ಹೂವುಗಳನ್ನು ವಿವಿಧೆಡೆಗೆ ರಫ್ತು ಮಾಡಿದೆ.

ಪ್ರೇಮಿಗಳ ದಿನದಂದು ಹೂವುಗಳಿಗೆ ಬೇಡಿಕೆ ಹೆಚ್ಚಿರುವುದೇ ರಫ್ತು ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಕೆಐಎ ತಿಳಿಸಿದೆ.

ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ.38 ಹಾಗೂ ತೂಕದಲ್ಲಿ ಶೇ.64 ರಷ್ಟು ಏರಿಕೆಯಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಂಗಾಪುರ ಪ್ರಮುಖ ಗಮ್ಯಸ್ಥಾನವಾಗಿದ್ದು, ನಂತರ ಕೌಲಾಲಂಪುರ, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬಾರಿ ಲಾಸ್ ಏಂಜೆಲಿಸ್, ಲಂಡನ್ ಗ್ಯಾಟ್ವಿಕ್, ಡಲ್ಲಾಸ್, ಟೊರಾಂಟೋ ಮತ್ತು ಓರ್ಲ್ಯಾಂಡೋ ಹೊಸ ಗಮ್ಯಸ್ಥಾನಗಳಾಗಿ ಸೇರ್ಪಡೆಗೊಂಡಿವೆ.

File photo
ಪ್ರೇಮಿಗಳ ದಿನಾಚರಣೆ: ರೋಸ್​​ ಡೇ ದಿನ ಗಂಡನಿಗೆ ಗುಲಾಬಿ ಹೂ ಕೊಟ್ಟ ಮಹಿಳೆ ವಿರುದ್ಧ ಬಿತ್ತು FIR

ದೇಶೀಯ ಮಾರುಕಟ್ಟೆಯಲ್ಲಿ ದೆಹಲಿ ಮತ್ತು ಕೋಲ್ಕತಾ ಪ್ರಮುಖವಾಗಿ ಬೇಡಿಕೆಯನ್ನು ಹೊಂದಿದ್ದು, ಗುವಾಹಾಟಿ, ಮುಂಬೈ ಮತ್ತು ಜೈಪುರ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೂಗಳನ್ನು ಸ್ವೀಕರಿಸಿವೆ.

ವಿಶೇಷವಾಗಿ ಕೋಲ್ಕತಾ, ಮುಂಬೈ, ಚಂಡೀಗಢ ಮತ್ತು ಲಖನೌ ನಗರಗಳಲ್ಲಿ ಕಳೆದ ವರ್ಷಕ್ಕಿಂತ 150 ಶೇಕಡಾ ಹೆಚ್ಚು ಬೆಳವಣಿಗೆ ಕಂಡುಬಂದಿದೆ.

BIAL ಅಧಿಕಾರಿಗಳ ಪ್ರಕಾರ, ಬಿಎಲ್ಆರ್ (ಬೆಂಗಳೂರು) ವಿಮಾನ ನಿಲ್ದಾಣದ ವಿಸ್ತೃತ ಸರಕು ಮೂಲಸೌಕರ್ಯವು ತಾಜಾತನ, ವೇಗ ಮತ್ತು ತಾಪಮಾನ ನಿಖರತೆಯನ್ನು ಖಚಿತಪಡಿಸುತ್ತದೆ. ಸುಧಾರಿತ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ ಅತ್ಯಾಧುನಿಕ ಶೀತ ಸಂಗ್ರಹಣೆ ವ್ಯವಸ್ಥೆ, ರಿಯಲ್-ಟೈಮ್ ಟ್ರ್ಯಾಕಿಂಗ್ ಹಾಗೂ ತಾಪಮಾನ ನಿಯಂತ್ರಣ ತಂತ್ರಜ್ಞಾನಗಳಿಂದ ಹೂಗಳ ತಾಜಾತನವನ್ನು ಕಾಪಾಡಿಕೊಂಡು ವೇಗವಾಗಿ ರವಾನಿಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

File photo
ಕಬ್ಬನ್ ಪಾರ್ಕ್ 'No kissing' ಬೋರ್ಡ್'ಗೆ ವಿರೋಧ: ಫಲಕದ ಮುಂದೆಯೇ ಪತಿಗೆ ಮುತ್ತಿಟ್ಟ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಭಾರೀ ಟೀಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com