

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಸದ್ದು ಮಾಡುತ್ತಿರುವಂತೆಯೇ ಅವರ ತಾಯಿ ಪುಷ್ಪಾ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.
ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನು ಒತ್ತುವರಿ ಮಾಡಿ ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಂ ಬೆಳಗ್ಗೆ ಅವರ ಮನೆ ಮುಂದೆ ಜೆಸಿಬಿ ಘರ್ಷನೆ ಮಾಡಿದ್ದು, ಕಾಂಪೌಂಡ್ ತೆರವು ಮಾಡಲಾಗಿದೆ.
ಹಾಸನದ ವಿದ್ಯಾನಗರದಲ್ಲಿ ಯಶ್ ಅಮ್ಮ ಪುಷ್ಪ ಅವರ ಮನೆ ಇದ್ದು, ಅವರು ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಸೈಟ್ ಗೆ ಕಾಂಪೌಡ್ ಹಾಕಿದ್ದಾರೆ ಎನ್ನಲಾಗಿದೆ. ಲಕ್ಷಮ್ಮ ಸಂಬಂಧಿ ದೇವರಾಜ್ ಎನ್ನುವವರು ಇದನ್ನು ಪ್ರಶ್ನಿಸಿ ಹಾಸನದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ಮಾಡಿದ್ದಾರೆ.
ಆದರೆ, ಹಲವಾರು ಬಾರಿ ಕೋರ್ಟ್ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್ ಗೆ ಬಾರದೆ ಇದ್ದು ನ್ಯಾಯಾಲಯಕ್ಕೆ ದಾಖಲೆ ಒದಗಿಸದ ಹಿನ್ನಲೆ ದೇವರಾಜ್ ಪರ ಕೋರ್ಟ್ ಆದೇಶ ಮಾಡಿದೆ. ದೇವರಾಜ್ ಅವರು ಕೋರ್ಟ್ ಆದೇಶದಂತೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಆದರೆ ದೇವರಾಜ್ ಮನವಿಗೆ ಸ್ಪಂದಿಸದ ಯಶ್ ತಾಯಿ ಸುಮ್ಮನಿದ್ದರು.
ಈ ಹಿನ್ನಲೆ ಕೋರ್ಟ್ ಆದೇಶದಂತೆ ಮಾಲೀಕರು ಇಂದು ಬೆಳ್ಳಂ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಡ್ ತೆರವುಗೊಳಿಸಿದ್ದಾರೆ. ಸುಮಾರು ಒಂದುವರೆ ಸಾವಿರ ಅಡಿಗೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದರು ಎಂದು ದೇವರಾಜು ಆರೋಪ ಮಾಡಿದ್ದಾರೆ.
ಈ ಮಧ್ಯೆ ಕಾಂಪೌಡ್ ತೆರವು ಪ್ರತಿಕ್ರಿಯಿಸಿರುವ ಪುಷ್ಪಾ, ನಮ್ಮ ಬಳಿ ಇರುವ ಎಲ್ಲಾ ದಾಖಲಾತಿಗಳು ಸರಿಯಾಗಿದ್ದು, ಯಾವುದೇ ಒತ್ತುವರಿ ಮಾಡಿಲ್ಲ. ಕಾಂಪೌಂಡ್ ತೆರುವ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಾಂಪೌಡ್ ತೆರವು ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಪುಷ್ಪಾ ಅವರ ಪರ ವಕೀಲ ಸಂಜಯ್ ತಿಳಿಸಿದ್ದಾರೆ.
Advertisement